ಸೌಮ್ಯ ರೆಡ್ಡಿಗೆ ಒಲಿದ “ಜಯ” ನಗರ

Posted In : ರಾಜ್ಯ

ಬೆಂಗಳೂರು: ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಾಮಲಿಂಗಾ ರೆಡ್ಡಿ ಪುತ್ರಿ ಕಾಂಗ್ರೆಸ್‍‍ನ ಸೌಮ್ಯ ರೆಡ್ಡಿ ಜಯಭೇರಿ ಬಾರಿಸಿದ್ದಾರೆ

2,889 ಮತಗಳಿಂದ ತಮ್ಮ ಪ್ರತಿಸ್ಫರ್ಧಿಯನ್ನು ಮಣಿಸಿ ಜಯದ ನಗೆ ಬೀರಿದ ಸೌಮ್ಯಾ ರೆಡ್ಡಿ ಒಟ್ಟು 54,457 ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು 51,568 ಮತಗಳನ್ನು ಗಳಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಭಾರೀ ನಿರೀಕ್ಷೆ ಮೂಡಿಸಿದ್ದ ರವಿ ಕೃಷ್ಣಾ ರೆಡ್ಡಿ ಕೇವಲ 1,861 ಮತಗಳನ್ನು ಗಳಿಸುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸೌಮ್ಯಾ ರೆಡ್ಡಿ ಸುಲಭ ಜಯ ಸಾಧಿಸಿದರು.

ಸತತವಾಗಿ ಎರಡು ಬಾರಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿ ಬಿ.ಎನ್ ವಿಜಯ ಕುಮಾರ್ ಸಾವಿನಿಂದಾಗಿ ಚುನಾವಣೆ ಮುಂದೂಡಲಾಗಿತ್ತು. ಹಾಗಾಗಿ ಬಿಜೆಪಿಯಿಂದ ಅವರ ಸಹೋದರ ಪ್ರಹ್ಲಾದ್‍ ಬಾಬುಗೆ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಜೆಡಿಎಸ್‍ ಬೆಂಬಲ ನೀಡಿತ್ತು.

2 thoughts on “ಸೌಮ್ಯ ರೆಡ್ಡಿಗೆ ಒಲಿದ “ಜಯ” ನಗರ

  1. This is not the actual win for Sowmya Reddy…

    I can say Suitcase transferred to Kalegouda and Devegouda and JDS votes were nicely transferred to Sowmya….

Leave a Reply

Your email address will not be published. Required fields are marked *

1 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top