About Us Advertise with us Be a Reporter E-Paper

ಅಂಕಣಗಳು

ಏಕಕಾಲ ಚುನಾವಣೆಯ ಮಾತು

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ ಕಿ ಬ್ಾನಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ುನಾವಣೆ ನಡೆಸುವ ಕ್ರಾಂತಿಕಾರಕ ಬದಲಾವಣೆಯ ಬಗ್ಗೆ ಸಾಕಷ್ಟು ಸುದೀರ್ಘವಾಗಿ ಮಾತನಾಡಿದ್ದಾರೆ. ಅಲ್ಲದೇ ಮಂಗಳವಾರ ಹೊಸದಿಲ್ಲಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಜೊತೆಗಿನ ಸೆಯಲ್ಲಿ ಸಹ ವಿಷಯ ಪ್ರಧಾನವಾಗಿ ಚರ್ಚೆಗೆ ಬಂದಿದೆ. ಇಂತಹ ಬದಲಾವಣೆಯ ಅಗತ್ಯತೆಯ ಬಗ್ಗೆ ಯಾರಿಗೂ ತಕರಾರಿಲ್ಲದಿದ್ದರೂ ಇದರ ಹಿಂದೆ ಅಡಗಿರಬಹುದಾದ ಲೆಕ್ಕಾಚಾರಗಳ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಇಲ್ಲ. ದೇಶದಲ್ಲಿ ಇಂದು ಅತ್ಯಂತ ದುಬಾರಿ ಕಸರತ್ತೆಂದರೆ ಚುನಾವಣೆ ಎಂಬುದನ್ನು ಪ್ರತ್ಯೇವಾಗಿ ಹೇಳಬೇಕಿಲ್ಲ. ಮೊನ್ನೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ ಸುಮಾರು 10 ಸಾವಿರ ಕೋಟಿಯಷ್ಟು ವಹಿವಾಟು ಕಂಡಿದೆ ಎಂದರೆ ಇದೊಂದು ರೀತಿಯ ಬಿಸಿನೆಸ್ ಆಗಿದೆ ಎನ್ನಲು ಅಡ್ಡಿಯಿಲ್ಲ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಶಾಸಭೆಗಳಿಗೆ ಚುನಾವಣೆ ನಡೆಸುವುದರಿಂದ ಅಪಾರ ಪ್ರಮಾಣದ ಹಣ ಪೋಲಾಗುವುದನ್ನು ತಡೆಯಬಹುದಾಗಿದೆ. ಆದರೆ ಅದರ ಕಾರ್ಯಾನುಷ್ಠಾನದ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆಡಳಿತಾರೂಢ ಎನ್ಡಿಎ ತನ್ನ ಲಾಭಕ್ಕೆ ಬಳಸಿಕೊಳ್ಳುವ ಸಲುವಾಗಿ ಈ ವಿಚಾರವನ್ನು ಮುನ್ನೆಲೆಗೆ ತಂದಿದೆ ಎಂಬುದು ಪ್ರತಿಪಕ್ಷಗಳ ವಾದ. ಪ್ರಧಾನಿ ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡಾಗಲೇ ಈ ಕುರಿತಾದ ಸಮಾಲೋಚನಾ ಪರ್ವ ಆರಂಭಿಸಿದ್ದಿದ್ದರೆ ಅದು ಕಾರ‌್ಯರೂಪಕ್ಕೆ ಬರಬಹುದಿತ್ತು. ಆದರೆ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಸರಕಾರ ಬಲೂನು ಹಾರಿಬಿಟ್ಟಿರುವುದು ಸಹಜವಾಗಿಯೇ ಪ್ರತಿಪಕ್ಷಗಳಿಗೆ ಒಪ್ಪಿತವಾಗಿಲ್ಲ. ಕಾಂಗ್ರೆಸ್ ಸೇರಿದಂತೆ ಹಲವಾರು ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಪ್ರಜಾಪ್ರಭುತ್ವಕ್ಕೆ ಪೂವಾದ ಒಂದು ಮಹತ್ವದ ಸುಧಾರಣೆ ರಾಜಕೀಯ ದಾಳವಾಗಿ ಪರಿವರ್ತನೆ ಆಗಿರುವುದು ವಿಷಾದನೀಯ

Tags

Related Articles

Leave a Reply

Your email address will not be published. Required fields are marked *

Language
Close