About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕೃಷಿಸಿರಿಯಲ್ಲಿ ಸುಲ್ತಾನ್‌ ಆಕರ್ಷಣೆಯ ಕೇಂದ್ರಬಿಂದು

- ಶ್ರೀರಕ್ಷಾ ರಾವ್, ಪ್ರಥಮ ಎಂಜೆಎಂಸಿ, ಆಳ್ವಾಸ್ ಕಾಲೇಜು, ಮೂಡುಬಿದಿರೆ

ಮೂಡುಬಿದಿರೆ: ಗೌರವರ್ಣದ ಆಳೆತ್ತರದ ಮೈಕಟ್ಟು… ಕಾಡಿಗೆ ತಿದ್ದಿ ತೀಡಿದಂತಹ ನಯನ… ಆ ನಯನದಲ್ಲೇನೊ ಮುಗ್ಧವಾದಂತಹ ಹೊಳಪು. ಈ ಕಣ್ಣ ಹೊಳಪಿನ ಮೂಲಕ ಆಳ್ವಾಸ್ ನುಡಿಸಿರಿಯಲ್ಲಿ ಎಲ್ಲರನ್ನು ಆಕರ್ಷಿಸುತ್ತಿದ್ದವನೆ ಇತನಿಗೀಗ 6 ವರ್ಷ. ಆದರೆ, ಈ 6 ವರ್ಷದ ಪೋರನ ತೂಕ ಮಾತ್ರ 1462 ಕೆ.ಜಿ. ಈ 6 ವರ್ಷದ ಪೋರ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ ಸಲ್ಮಾನ್‌ಖಾನ್ ಖಂಡಿತ ಅಲ್ಲ. ಈತ ಈ ಬಾರಿಯ ನುಡಿಸಿರಿಯ ಸುಲ್ತಾನ.

‘ಸುಲ್ತಾನ’ ನಮ್ಮ ಭಾರತದ ತಳಿಯಾಗಿರುವ ಅಂಗೊಲ್ ಜಾತಿಯ ಹೋರಿ. ಈ ಬಾರಿಯ ಆಳ್ವಾಸ್ ನುಡಿಸಿರಿಯ ಕೃಷಿಸಿರಿ ಆವರಣದಲ್ಲಿ ಈ ಸುಲ್ತಾನನದ್ದೇ ದರ್ಬಾರ್. ಬಂದವರೆಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಇವನು ನಿಂತಿದ್ದಾನೆ. ವರ್ಷ ವಯಸ್ಸಿನವನಾದರೂ ಭಾರಿ ಎತ್ತರ, ಮೈಕಟ್ಟಿನಿಂದಾಗಿ ಸುಲ್ತಾನ್ ಜನರಲ್ಲಿ ಹೆದರಿಕೆ ಹುಟ್ಟಿಸುತ್ತಾನೆ. ಆದರೆ, ಅವನ ಒಡೆಯ ಮಹಮದ್ ಇರ್ಷಾದ್ ಅಭಿದ್ದೀನ್ ಹೇಳುವಂತೆ, ‘ಆತನ ದೇಹ ಮಾತ್ರ ಭಾರಿಗಾತ್ರವಾಗಿದೆ. ಆದರೆ, ಆತ ಬಹಳ ಸಾಧು ಸ್ವಭಾವದವ. ಈತನನ್ನು ನಾನು ಎಂಟು ತಿಂಗಳ ಮಗುವಾಗಿದ್ದಾಗ ಆಂಧ್ರಪ್ರದೇಶದ ನೆಲ್ಲೂರಿಂದ ಖರೀದಿಸಿದ್ದೆ. ತುಂಬಾ ಮುದ್ದಾಗಿ ಸುಲ್ತಾನನನ್ನು ಬೆಳೆಸಿದ್ದೇವೆ’ ಎನ್ನುತ್ತಾರೆ.

ಮಹಮದ್ ಇರ್ಷಾದ್ ಅಭಿದ್ದೀನ್ ಮನೆಯಲ್ಲಿ ಸುಲ್ತಾನ ಮಾತ್ರವಲ್ಲದೇ ಭಾರತದ 25 ಜಾತಿಯ ಹಸುವಿನ ತಳಿಗಳನ್ನು ಇದರಲ್ಲಿ ಗುಜರಾತ್‌ನ ಗಿರ್, ಪಂಜಾಬ್‌ನ ಸಹಿವಲ್ ತಳಿಗಳೂ ಸೇರಿಕೊಂಡಿವೆ. ಇರ್ಷಾದ್ ಮನೆಯೇ ಒಂದು ಗೋಶಾಲೆಯಂತೆ. ಈ ಗೋಶಾಲೆಯನ್ನು ಅವರ ತಂದೆ 35 ವರ್ಷಗಳ ಹಿಂದೆ 1982ರಲ್ಲಿ ಸ್ಥಾಪಿಸಿದರು. ಇದೀಗ ಅವರ ಕುಟುಂಬಸ್ಥರು ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಇನ್ನು ಸುಲ್ತಾನ್ ತನ್ನ ದೇಹಧಾರ್ಡ್ಯದಿಂದಾಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾನೆ. ಬೃಹದಾಕಾರದ ದೇಹ ಹಾಗೂ ಎತ್ತರದ ದಿಬ್ಬದದಿಂದ ಈತನಿಗೆ ಬ್ರಹ್ಮಾವರದಲ್ಲಿ ನಡೆದ ಕೃಷಿಸಮ್ಮೇಳನದಲ್ಲಿ ಪ್ರಥಮ ಬಹುಮಾನವನ್ನೂ ಪಡೆದಿದ್ದಾನೆ. ಇದೀಗ ಆಳ್ವಾಸ್ ನುಡಿಸಿರಿಯಲ್ಲಿ ಜನಾಕರ್ಷಣೆಯ ನಿಂತಿದ್ದಾನೆ.

‘ಸುಲ್ತಾನ್ ನಮ್ಮ ಮಗನಿದ್ದಂತೆ. ದಿನಕ್ಕೆ ಎರಡು ಬಾರಿ ಸ್ನಾನ ಹಾಗೂ ಒಂದು ಬಾರಿ ಸಾಸಿವೆ ಎಣ್ಣೆಯ ಮಸಾಜ್ ಮಾಡುತ್ತೇವೆ. ಅಲ್ಲದೆ ಆತನ ಊಟವನ್ನು ಖುದ್ದಾಗಿ ನಾನೇ ತಯಾರಿಸುತ್ತೇನೆ. ಆತನಿಗೆ ಒಣಗಿದ ಹಲ್ಲು ಹಾಗೂ ಜೋಳದ ತೆನೆಗಳೆಂದರೆ ಬಹಳ ಇಷ್ಟ’.
– ಮಹಮದ್ ಇರ್ಷಾದ್ ಅಭಿದ್ದೀನ್, ಮಾಲೀಕ

Tags

Related Articles

Leave a Reply

Your email address will not be published. Required fields are marked *

Language
Close