About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಾಹುಲ್ ಗಾಂಧಿ ಕ್ಷೇತ್ರಕ್ಕೆ ಕೊಡುಗೆ ನೀಡಿದ ಸ್ಮೃತಿ ಇರಾನಿ..!

ದೆಹಲಿ: ರಾಹುಲ್ ಗಾಂಧಿ ಲೋಕಸಭಾ ಕ್ಷೇತ್ರವಾದ ಅಮೇತಿಯಲ್ಲಿನ ಗ್ರಾಮಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ನೆರವು ನೀಡಲು ಮುಂದಾಗಿದ್ದಾರೆ.

ಸರ್ಕಾರದ ಸುಮಾರು 200ಕ್ಕೂ ಅಧಿಕ ಡಿಜಿಟಲ್ ಇಂಡಿಯಾ ಸೇವೆಗಳ ಭಾಗವಾಗಿರುವ ಕಾರ್ಯಕ್ರಮಗಳನ್ನು ಪಿಂಡಾರಾ ಥಾಕೂರ್ ಗ್ರಾಮಕ್ಕೆ ಅಳವಡಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಶನಿವಾರದಂದು ಡಿಜಿಟಲ್ ಅವತಾರ ಕಾರ್ಯಕ್ರಮದ ಮೂಲಕ 206 ಡಿಜಿಟಲ್ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ.

ಇತ್ತೀಚಿಗೆ ಸ್ಮೃತಿ ಇರಾನಿ ಅಮೇತಿ ಕ್ಷೇತ್ರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಮತ್ತೆ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಅವರು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆಂಬ ಅನುಮಾನಗಳು ಹುಟ್ಟಿಕೊಂಡಿವೆ.

ಸ್ಥಳೀಯ ಅಧಿಕಾರಿಯೊಬ್ಬರು ಪಿಂಡಾರಾ ಗ್ರಾಮದಲ್ಲಿ ವೈಫೈಯನ್ನು ಸಂಪರ್ಕಿಸಲಾಗಿದ್ದು 15 ದಿನಗಳ ಕಾಲ ಉಚಿತ 2ಜಿಬಿ ಅಂತರ್ಜಾಲವನ್ನು ಬಳಸಬಹುದೆಂದು ಹೇಳಲಾಗಿದೆ. ಇದೆ ವೇಳೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಅಮೇತಿಯ ಮುಖ್ಯ ಅಂಚೆ ಕಚೇರಿಯಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close