About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಸಮಕಾಲೀನರಿಗಿಂತ ಮುಂದಿರುವ ಕೊಹ್ಲಿ ಶ್ರೇಷ್ಠರಾಗಲಿದ್ದಾರೆ: ಸಂಗಕ್ಕಾರ

ತಮ್ಮ ಸಮಕಾಲೀನರಿಗಿಂತ ಸಾಕಷ್ಟು ಮುಂದೆ ಸಾಗುತ್ತಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಶ್ರೇಷ್ಠ ಆಟಗಾರರಾಗಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್‌ ದಂತಕಥೆ ಕುಮಾರ ಸಂಗಕ್ಕಾರ ತಿಳಿಸಿದ್ದಾರೆ.

2018ರಲ್ಲಿ ಅದ್ಧೂರಿ ಪ್ರದರ್ಶನದ ಮೂಲಕ ಐಸಿಸಿ ವರ್ಷದ ಕ್ರಿಕೆಟಿಗ, ಟೆಸ್ಟ್‌ ಹಾಗು ಏಕದಿನ ಪಂದ್ಯಗಳ ಆಟಗಾರ ಪ್ರಶಸ್ತಿಗೆ ಕೊಹ್ಲಿ ಭಾಜನರಾಗಿದ್ದರು. ಕೊಹ್ಲಿ ಸದ್ಯ ಟೆಸ್ಟ್ ಹಾಗು ಏಕದಿನ ಪಂದ್ಯಗಳ ನಂ.1 ಬ್ಯಾಟ್ಸ್‌ಮನ್‌ ಆಗಿದ್ದಾರೆ.

“ವಿರಾಟ್‌ ಕೊಹ್ಲಿ ಆಟದಲ್ಲಿ ಪ್ರತಿಯೊಂದೂ ಎದ್ದು ಕಾಣುತ್ತದೆ. ಅವರು ಜಾಗತಿಕ ಕ್ರಿಕೆಟ್‌ನ ಇಂದಿನ ದಿನಗಳಲ್ಲಿ ಉಳಿದ ಯಾವುದೇ ಆಟಗಾರನಿಗಿಂತ ಸಾಕಷ್ಟು ಮುಂದೆ ಇದ್ದಾರೆ ಎಂದು ನನಗನಿಸುತ್ತದೆ. ಮುಂದಿನ ದಿನಗಳಲ್ಲಿ ಅವರು ಶ್ರೇಷ್ಠಾತಿ ಶ್ರೇಷ್ಠ ಅಲ್ಲದಿದ್ದರೂ ಕ್ರೀಡೆಯ ಶ್ರೇಷ್ಠರಲ್ಲಿ ಒಬ್ಬರಾಗಿರಲಿದ್ದಾರೆ. ಅವರಿಗೆ ರನ್‌ಗಳಿಕೆಯ ಅದ್ಭುತ ತಂತ್ರಗಾರಿಕೆಯಿದೆ. ಅವರು ಬ್ಯಾಟ್‌ ಮಾಡುವ ಲಯವನ್ನು ನೀವು ನೋಡಿದರೆ, ಅವರು ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಅರಿಯುತ್ತಾರೆ ಎಂದು ತಿಳಿದುಬರುತ್ತದೆ. ಅವರು ಆಟದ ಮೇಲೆ ಬಹಳ ಪ್ರೀತಿ ಹೊಂದಿದ್ದಾರೆ. ಮೈದಾನದಲ್ಲಿ ಅವರ ಮುಖಭಾವಗಳು ಮಾತ್ರವಲ್ಲದೇ ಒಬ್ಬ ವ್ಯಕ್ತಿಯಾಗಿ ಹಾಗು ಅವರು ತಮ್ಮ ಬ್ಯಾಟಿಂಗ್‌ ಹಾಗು ಮನಸ್ಥಿತಿಯನ್ನು ಹೇಗೆಲ್ಲಾ ಬೆಳೆಸಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ” ಎಂದು ಸಂಗಕ್ಕಾರ ತಿಳಿಸಿದ್ದಾರೆ.

ಸಂಗಕ್ಕಾರ ಮಾತಿಗೆ ಸಹಮತ ವ್ಯಕ್ತಪಡಿಸಿದ ಶ್ರೀಲಂಕಾ ಕ್ರಿಕೆಟ್‌ನ ಮತ್ತೊಬ್ಬ ಮಾಜಿ ನಾಯಕ ಮಹೇಲ ಜಯವರ್ಧನೆ,”1.3 ಶತಕೋಟಿ ಕ್ರಿಕೆಟ್‌ ಪ್ರಿಯರ ನಿರೀಕ್ಷೆಗಳನ್ನು ಅವರು ನಿಭಾಯಿಸುವುದು ಅದ್ಭುತ. ಇಷ್ಟು ಮಾತ್ರವಲ್ಲ, ಮೈದಾನದಲ್ಲಿ ಮಾತ್ರವಲ್ಲದೇ ಹೊರಗಿನ ನಿರೀಕ್ಷೆಗಳನ್ನು ನಿಭಾಯಿಸುವುದು ದೊಡ್ಡ ವಿಷಯ. ನಮ್ಮ ಜತೆ ಆಡಿದ ಸಚಿನ್‌ ತೆಂಡೂಲ್ಕರ್‌ ಸಹ ಇದೇ ಅನುಭವ ಪಡೆದಿದ್ದಾರೆ. ಹಾಗು ಮುಂದಿನ ತಲೆಮಾರಿಗೆ ಇದು ವಿರಾಟ್‌ ಕೊಹ್ಲಿ ತೋಳ ಮೇಲೆ ಇರಲಿದೆ” ಎಂದು ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close