ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದಿನಿಂದ ಏಷ್ಯಾಕಪ್‌ ಟಿ20; ಅಫ್ಘಾನಿಸ್ತಾನಕ್ಕೆ ಹಾಂಕಾಂಗ್‌ ಸವಾಲು

ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಲಂಕಾದ ಸನತ್‌ ಜಯಸೂರ್ಯ(1,220) ಹೆಸರಿನಲ್ಲಿದೆ. ಅತಿ ಹೆಚ್ಚು ವಿಕೆಟ್‌ ಉರುಳಿಸಿದವರು ಲಸಿತ್ ಮಾಲಿಂಗ(33). ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ಹಿರಿಮೆ ವಿರಾಟ್‌ ಕೊಹ್ಲಿ ಅವರದು(183). ಅತ್ಯುತ್ತಮ ಬೌಲಿಂಗ್‌ ಫಿಗರ್‌ ಅಜಂತ ಮೆಂಡಿಸ್‌ ಅವರದಾಗಿದೆ(13ಕ್ಕೆ ವಿಕೆಟ್‌).

ಏಷ್ಯಾಕಪ್‌ ಟಿ20: ಭಾರತಕ್ಕೆ 9ನೇ ಟ್ರೋಫಿ ಗುರಿ

-

Abhilash BC Abhilash BC Sep 9, 2025 8:36 AM

ದುಬೈ: ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಏಷ್ಯಾಕಪ್‌ ಟಿ20(Asia Cup 2025) ಕ್ರಿಕೆಟ್‌ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದೆ. ಇಂದು(ಮಂಗಳವಾರ) ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಹಾಂಕಾಂಗ್‌ ಸವಾಲು ಎದುರಾಗಲಿದೆ ಟೂರ್ನಿಯಲ್ಲಿ 20 ದಿನಗಳ ಕಾಲ ಒಟ್ಟು 19 ಪಂದ್ಯಗಳು ನಡೆಯಲಿವೆ.

ಏಷ್ಯಾಕಪ್‌ ಇತಿಹಾಸದಲ್ಲೇ ಮೊದಲ ಬಾರಿ 8 ತಂಡಗಳು ಕಣಕ್ಕಿಳಿಯಲಿವೆ. ಈವರೆಗೆ ಗರಿಷ್ಠ 6 ತಂಡಗಳು ಆಡಿದ್ದವು. 1984, 1986, 1991ರಲ್ಲಿ ತಲಾ 3 ತಂಡಗಳು ಕಣಕ್ಕಿಳಿದಿದ್ದವು. ಕೆಲ ಆವೃತ್ತಿಗಳಲ್ಲಿ 4, 5 ತಂಡಗಳೂ ಆಡಿವೆ.

ಈ ಬಾರಿ ಒಟ್ಟು 8 ತಂಡಗಳು ಸೆಣಸಲಿವೆ. ಇವನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಭಾಗಿಸಲಾಗಿದ್ದು, ರೌಂಡ್​ ರಾಬಿನ್​ ಮಾದರಿ ಲೀಗ್​ ಹಂತದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್​-4 ಹಂತಕ್ಕೇರಲಿವೆ. ಇಲ್ಲೂ ಎಲ್ಲ ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಅಗ್ರ 2 ತಂಡಗಳ ನಡುವೆ ಸೆ. 28ರಂದು ಫೈನಲ್​ ಪಂದ್ಯ ನಡೆಯಲಿದೆ.

ಆರಂಭದಿಂದಲೂ ಏಕದಿನ ಮಾದರಿಲ್ಲಿ ನಡೆಯುತ್ತ ಬಂದಿದ್ದ ಏಷ್ಯಾ ಕಪ್‌ ಮಾದರಿಯನ್ನು 2016ರಲ್ಲಿ ಬದಲಾಯಿಸಲಾಯಿತು. ಇದು ಟಿ20ರೂಪ ಪಡೆಯಿತು. ಮುಂದಿನ ವರ್ಷದ ಟಿ20 ವಿಶ್ವಕಪ್​ಗೆ ಪೂರ್ವಸಿದ್ಧತೆಯಾಗಿ ಈ ಬಾರಿ ಟೂರ್ನಿ ಚುಟುಕು ಕ್ರಿಕೆಟ್​ ಮಾದರಿಯಲ್ಲಿ ನಡೆಯಲಿದೆ.