ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Babar Azam: ಟಿ20 ರನ್​ ಗಳಿಕೆಯಲ್ಲಿ ರೋಹಿತ್ ದಾಖಲೆ ಮುರಿದ ಪಾಕ್‌ ಆಟಗಾರ ಬಾಬರ್‌

2024ರ ಡಿಸೆಂಬರ್​ ಬಳಿಕ ಪಾಕ್​ ಟಿ20 ತಂಡಕ್ಕೆ ಮರಳಿರುವ ಬಾಬರ್‌ ಸ್ಥಿರ ಪ್ರದರ್ಶನ ತೋರಿದರೆ ಮಾತ್ರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬಹುದು. ಮೊದಲ ಟಿ20ಯಲ್ಲಿ ಶೂನ್ಯ ಸುತ್ತಿದ್ದರು. ಕಳಪೆ ಪ್ರದರ್ಶನದ ಕಾರಣದಿಂದಲೇ ಅವರನ್ನು ಏಷ್ಯಾಕಪ್‌ ಟೂರ್ನಿಯಿಂದಲೂ ಹೊರಗಿಡಲಾಗಿತ್ತು. 2026ರ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಬೇಕದ್ದರೆ ತಮ್ಮ ಸಾಮರ್ಥ್ಯ ತೋರಿಸಬೇಕು ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ಈಗಾಗಲೇ ಎಚ್ಚರಿಕೆ ನೀಡಿದೆ.

ರೋಹಿತ್ ಶರ್ಮ ವಿಶ್ವ​ ದಾಖಲೆ ಮುರಿದ ಬಾಬರ್ ಅಜಂ

-

Abhilash BC Abhilash BC Nov 2, 2025 11:32 AM

ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಬಾಬರ್​ ಅಜಂ(Babar Azam)​ ಟಿ20 ಅಂತಾರಾಷ್ಟ್ರೀಯ ರನ್​ ಗಳಿಕೆಯಲ್ಲಿ ಭಾರತದ ರೋಹಿತ್​ ಶರ್ಮ(Rohit Sharma) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾ(Pakistan vs South Africa) ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 11 ರನ್​ ಗಳಿಸಿದ ಅವರು ಈ ಸಾಧನೆ ಮಾಡಿದರು. ಸದ್ಯ ಅಜಂ​ (4,234) ರನ್‌ ಗಳಿಸಿದ್ದಾರೆ. ರೋಹಿತ್‌ (4,231) ಎರಡನೇ ಸ್ಥಾನದಲ್ಲಿದ್ದಾರೆ. ಈಗಾಗಲೇ ಟಿ20ಗೆ ನವೃತ್ತಿ ಹೇಳಿರುವ ಕಾರಣ ರೋಹಿತ್‌ಗೆ ಇನ್ನು ಅಗ್ರಸ್ಥಾನಕೇರುವ ಅವಕಾಶವಿಲ್ಲ.

2024ರ ಡಿಸೆಂಬರ್​ ಬಳಿಕ ಪಾಕ್​ ಟಿ20 ತಂಡಕ್ಕೆ ಮರಳಿರುವ ಬಾಬರ್‌ ಸ್ಥಿರ ಪ್ರದರ್ಶನ ತೋರಿದರೆ ಮಾತ್ರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬಹುದು. ಮೊದಲ ಟಿ20ಯಲ್ಲಿ ಶೂನ್ಯ ಸುತ್ತಿದ್ದ ಬಾಬರ್‌ ದ್ವಿತೀಯ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಮಿಂಚಿದರು. 47 ಎಸೆತಗಳಿಂದ 68 ರನ್‌ ಗಳಿಸಿದರು. ಕಳಪೆ ಪ್ರದರ್ಶನದ ಕಾರಣದಿಂದಲೇ ಅವರನ್ನು ಏಷ್ಯಾಕಪ್‌ ಟೂರ್ನಿಯಿಂದಲೂ ಹೊರಗಿಡಲಾಗಿತ್ತು. 2026ರ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಬೇಕದ್ದರೆ ತಮ್ಮ ಸಾಮರ್ಥ್ಯ ತೋರಿಸಬೇಕು ಎಂದು ಪಾಕ್‌ ಕ್ರಿಕೆಟ್‌ ಮಂಡಳಿ ಈಗಾಗಲೇ ಎಚ್ಚರಿಕೆ ನೀಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 9 ವಿಕೆಟ್‌ಗೆ 139 ರನ್‌ ಗಳಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಬಾಬರ್‌ ಅವರ ಅರ್ಧಶತಕದ ನೆರವಿನಿಂದ ಒಂದು ಓವರ್‌ ಬಾಕಿ ಇರುವಂತೆಯೇ 6 ವಿಕೆಟ್‌ಗೆ 140 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ Pakistan annual contracts: ಕೇಂದ್ರ ಗುತ್ತಿಗೆ ಪ್ರಕಟಿಸಿದ ಪಿಸಿಬಿ: ಬಾಬರ್‌, ರಿಜ್ವಾನ್‌ಗೆ ಹಿಂಬಡ್ತಿ

ಪಾಕಿಸ್ತಾನದ ನಾಯಕ ಸಲ್ಮಾನ್‌ ಆಘಾ 33 ರನ್‌ ಗಳಿಸಿದರು. ಬೌಲಿಂಗ್‌ನಲ್ಲಿ ಮಿಂಚಿದ ಶಾಹೀನ್‌ ಶಾ ಅಫ್ರೀದಿ 26 ಕ್ಕೆ 3, ಫಹೀಮ್ ಅಶ್ರಫ್ ಮತ್ತು ಉಸ್ಮಾನ್ ತಾರಿಕ್ ತಲಾ ಎರಡು ವಿಕೆಟ್‌ ಕಿತ್ತರು. ದಕ್ಷಿಣ ಆಫ್ರಿಕಾ ಪರ ರೀಜಾ ಹೆಂಡ್ರಿಕ್ಸ್ 34, ಕಾರ್ಬಿನ್ ಬಾಷ್(30) ಮತ್ತು ಡೊನೊವನ್ ಫೆರೀರಾ 29 ರನ್‌ ಗಳಿಸಿದರು.