ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs SA: ಮಾರ್ನಸ್‌ ಲಾಬುಶೇನ್‌ ಓಪನರ್‌, ಡಬ್ಲ್ಯುಟಿಸಿ ಫೈನಲ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್‌ XI

Australia Playing XI: ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಜೂನ್‌ 11 ರಂದು ಬುಧವಾರ ಲಂಡನ್‌ನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಆರಂಭವಾಗುವ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್‌ XI ಅನ್ನು ಪ್ರಕಟಿಸಲಾಗಿದೆ.

ಡಬ್ಲ್ಯುಟಿಸಿ ಫೈನಲ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್‌ XI ಪ್ರಕಟ!

ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್‌ XI.

Profile Ramesh Kote Jun 10, 2025 8:15 PM

ಲಂಡನ್:‌ ಇಲ್ಲಿನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಜೂನ್‌ 11 ರಂದು ಆರಂಭವಾಗುವ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ (WTC 2025 Final) ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು (AUS vs SA) ಕಾದಾಟ ನಡೆಸಲಿವೆ. ಈ ಮಹತ್ವದ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್‌ xiಅನ್ನು (Australi Playing XI) ಪ್ರಕಟಿಸಲಾಗಿದೆ. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಪ್ಯಾಟ್‌ ಕಮಿನ್ಸ್‌, ತಮ್ಮ ತಂಡದ ಆಡುವ ಬಳಗವನ್ನು ರಿವೀಲ್‌ ಮಾಡಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ಓಪನರ್‌ ಆಗಿ ಆಡಲಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ ಆರಂಭಿಸಲಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಅವರು ಎಂದಿನಂತೆ ಮತ್ತೊಂದು ತುದಿಯಲ್ಲಿ ಓಪನರ್‌ ಆಗಿ ಆಡಲಿದ್ದಾರೆ. ಯುವ ಬ್ಯಾಟ್ಸ್‌ಮನ್‌ ಸ್ಯಾಮ್‌ ಕೋನ್‌ಸ್ಟಸ್‌ ಅವರ ಬದಲು ಅನುಭವದ ಆಧಾರದ ಮೇಲೆ ಲಾಬುಶೇನ್‌ಗೆ ಆರಂಭಿಕನ ಜವಾಬ್ದಾರಿಯನ್ನು ನೀಡಿದೆ. ಭಾರತ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಸ್ಯಾಮ್‌ ಕೋನ್‌ಸ್ಟಸ್‌ ಅವರು ಆಡಿದ್ದರು.

ICC WTC 2025 Final: ನಾಳೆಯಿಂದ ವಿಶ್ವ ಟೆಸ್ಟ್‌ ಫೈನಲ್‌ ಫೈಟ್‌; ಚೋಕರ್ಸ್ ಹಣೆಪಟ್ಟಿ ಕಳಚುವುದೇ ದಕ್ಷಿಣ ಆಫ್ರಿಕಾ?

ಇನಿಂಗ್ಸ್‌ ಆರಂಭಿಸಲು ಆಸ್ಟ್ರೇಲಿಯಾ ತಂಡಕ್ಕೆ ಜಾಶ್‌ ಇಂಗ್ಲಿಸ್‌ ಕೂಡ ಇದ್ದಾರೆ. ಆದರೆ, ಅನುಭವದ ಆಧಾರದ ಮೇಲೆ ಅವರು ಮಾರ್ನಸ್‌ ಲಾಬುಶೇನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಬೆನ್ನು ಗಾಯದ ಹಿನ್ನೆಲೆಯಲ್ಲಿ ಒಂದು ವರ್ಷ ಹೊರಗುಳಿದಿದ್ದ ಕ್ಯಾಮೆರಾನ್‌ ಗ್ರೀನ್‌ ಅವರು ಟೆಸ್ಟ್‌ ತಂಡಕ್ಕೆ ಮರಳುತ್ತಿದ್ದಾರೆಂದು ನಾಯಕ ಪ್ಯಾಟ್‌ ಕಮಿನ್ಸ್‌ ಸ್ಪಷ್ಟಪಡಿಸಿದ್ದಾರೆ. ಇವರು ಮೂರನೇ ಕ್ರಮಾಂಕದಲ್ಲಿ ಆಡಿದರೆ, ಸ್ಟೀವನ್‌ ಸ್ಮಿತ್‌ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

"ಮೂರನೇ ಕ್ರಮಾಂಕ ಕ್ಯಾಮೆರಾನ್‌ ಗೀನ್‌ಗೆ ಸೂಕ್ತವಾಗಲಿದೆ ಎಂಬುದು ನಮ್ಮ ಭಾವನೆ. ಇನ್ನು ಮಾರ್ನಸ್‌ ಲಾಬುಶೇನ್‌ ಅಗ್ರ ಕ್ರಮಾಂಕದಲ್ಲಿಆಡಲಿದ್ದಾರೆ. ಇಂಗ್ಲೆಂಡ್‌ ಕಂಡೀಷನ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುವುದು ಅಷ್ಟೊಂದು ಕಷ್ಟವಲ್ಲ," ಎಂದು ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ತಿಳಿಸಿದ್ದಾರೆ.



"ಸ್ಯಾಮ್‌ ಕೋನ್‌ಸ್ಟಸ್‌ ಹಾಗೂ ಜಾಶ ಇಂಗ್ಲಿಸ್‌ ಸೇರಿದಂತೆ ನಮ್ಮ ಎಲ್ಲಾ ಹುಡುಗರು ತುಂಬಾ ತರಬೇತಿಯನ್ನು ಪಡೆದಿದ್ದಾರೆ, ಆದರೆರ, ನಮ್ಮ ಸೆಲೆಕ್ಟರ್‌ ಜಾರ್ಜ್‌ ಬೈಲಿ ಅವರು ಅನುಭವಿ ಆಟಗಾರರ ಮೇಲೆ ಒಲವು ತೋರಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಅದರಲ್ಲಿಯೂ ವಿಶೇಷವಾಗಿ ಲಾರ್ಡ್ಸ್‌ನಲ್ಲಿ ಆಡಿದ ಅದ್ಭುತ ಅನುಭವನ್ನು ಹೊಂದಿದ್ದಾರೆ. ಈ ಕಾರಣದಿಂದಲೇ ಅವರು ಮಾರ್ನಸ್‌ ಲಾಬುಶೇನ್‌ ಅವರನ್ನು ಓಪನಿಂಗ್‌ಗೆ ಆಯ್ಕೆ ಮಾಡಿದ್ದಾರೆ," ಎಂದು ಆಸ್ಟ್ರೇಲಿಯಾ ನಾಯಕ ಹೇಳಿದ್ದಾರೆ.

ಇನ್ನು ಬೌಲಿಂಗ್‌ ವಿಭಾಗದಲ್ಲಿ ಫಾಸ್ಟ್‌ ಬೌಲಿಂಗ್‌ ಆಲ್‌ರೌಂಡರ್‌ಗಳಾಗಿ ಕ್ಯಾಮೆರಾನ್‌ ಗ್ರೀನ್‌ ಹಾಗೂ ಬೇ ವೆಬ್‌ಸ್ಟರ್‌ ಆಡಲಿದ್ದಾರೆ. ಮಿಚೆಲ್‌ ಸ್ಟಾರ್ಕ್‌, ಜಾಶ್‌ ಹೇಝಲ್‌ವುಡ್‌ ಹಾಗೂ ಪ್ಯಾಟ್‌ ಕಮಿನ್ಸ್‌ ಪೂರ್ಣ ಪ್ರಮಾಣದ ಫಾಸ್ಟ್‌ ಬೌಲರ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ನೇಥನ್‌ ಲಯಾನ್‌ ಆಡಿದರೆ, ವಿಕೆಟ್‌ ಕೀಪರ್‌ ಆಗಿ ಅಲೆಕ್ಸ್‌ ಕೇರಿ ಆಡಲಿದ್ದಾರೆ.

ICC WTC Final 2025: ವಿಶ್ವ ಟೆಸ್ಟ್‌ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

ಡಬ್ಲ್ಯುಟಿಸಿ ಫೈನಲ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್‌ xi

ಉಸ್ಮಾನ್‌ ಖವಾಜ, ಮಾರ್ನಸ್‌ ಲಾಬುಶೇನ್‌, ಕ್ಯಾಮೆರಾನ್‌ ಗ್ರೀನ್‌, ಸ್ಟೀವನ್‌ ಸ್ಮಿತ್‌, ಟ್ರಾವಿಸ್‌ ಹೆಡ್‌, ಬೇ ವೆಬ್‌ಸ್ಟರ್‌, ಅಲೆಕ್ಸ್‌ ಕೇರಿ (ವಿ.ಕೀ), ಪ್ಯಾಟ್‌ ಕಮಿನ್ಸ್‌ (ನಾಯಕ), ಮಿಚೆಲ್‌ ಸ್ಟಾರ್ಕ್‌, ನೇಥನ್‌ ಲಯಾನ್‌, ಜಾಶ್‌ ಹೇಝಲ್‌ವುಡ್‌