PAK vs SA: ರೋಹಿತ್ ಶರ್ಮಾ ಆಯ್ತು, ಇದೀಗ ವಿರಾಟ್ ಕೊಹ್ಲಿ ದಾಖಲೆ ಮುರಿದ ಬಾಬರ್ ಆಝಮ್!
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಪಾಕಿಸ್ತಾನ ಆಟಗಾರ ಬಾಬರ್ ಆಝಮ್, ವಿರಾಟ್ ಕೊಹ್ಲಿಯವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ 40ನೇ ಟಿ20ಐ ಅರ್ಧಶತಕ ಸಿಡಿಸುವ ಬಾಬರ್ ಆಝಮ್, ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿಯ ದಾಖಲೆ ಮುರಿದ ಬಾಬರ್ ಆಝಮ್. -
ಲಾಹೋರ್: ಇಲ್ಲಿನ ಗಡಾಫಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20ಐ (PAK vs SA) ಪಾಕಿಸ್ತಾನ ಮಾಜಿ ನಾಯಕ ಬಾಬರ್ ಆಝಮ್ (Babar Azam) ಭರ್ಜರಿ ಅರ್ಧಶತಕ ಬಾರಿಸಿದರು. 47 ಎಸೆತಗಳಲ್ಲಿ 68 ರನ್ ಕಲೆಹಾಕಿದ ಅವರು, ತಮ್ಮ ಇನಿಂಗ್ಸ್‌ನಲ್ಲಿ 9 ಫೋರ್ಗಳನ್ನು ಸಿಡಿಸಿದ್ದಾರೆ. ಈ ಅರ್ಧಶತಕದೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯವರ (Virat kohli) ಹೆಸರಿನಲ್ಲಿತ್ತು.
ಟೀಮ್ ಇಂಡಿಯಾ ಮಾಜಿ ನಾಯಕ 117 ಟಿ20ಐ ಇನಿಂಗ್ಸ್‌ಗಳ ಮೂಲಕ 39 ಬಾರಿ 50ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಆದರೆ ಪಾಕ್ ಪರ 124 ಟಿ20ಐ ಇನಿಂಗ್ಸ್ ಆಡಿರುವ ಬಾಬರ್, 40 ಬಾರಿ 50+ ರನ್ ಗಳಿಸಿದ್ದು, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಬಾಬರ್ ಆಝಮ್ ಅವರು ತಮ್ಮ 40ನೇ ಟಿ2ೈ ಅರ್ಧಶತಕ ಸಿಡಿಸುವ ಮೂಲಕ ಕೊಹ್ಲಿಯವರ ವಿಶ್ವಾದಾಖಲೆಯನ್ನು ಮುರಿದಿದ್ದಾರೆ.
IND vs AUS: ಮೂರನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆಡದೇ ಇರಲು ಕಾರಣವೇನು?
ಕೆಲ ದಿನಗಳ ಹಿಂದೆ ಬಾಬರ್ ಆಝಮ್, ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯನ್ನು ಮುರಿದಿದ್ದರು. ರೋಹಿತ್ ಶರ್ಮಾ ಅವರು ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿನಲ್ಲಿ 4231 ರನ್ ಕಲೆಹಾಕಿದ್ದರು. ಆದರೆ, ಬಾಬರ್ ಈ ವಿಶ್ವ ದಾಖಲೆಯನ್ನು ಮುರಿದು 4302 ರನ್ಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರು
- ಬಾಬರ್ ಅಝಮ್- ಪಾಕಿಸ್ತಾನ 40 ( 3 ಶತಕಗಳು, 37 ಅರ್ಧಶತಕಗಳು)
- ವಿರಾಟ್ ಕೊಹ್ಲಿ- ಭಾರತ 39 ( ಒಂದು ಶತಕ, 39 ಅರ್ಧಶತಕಗಳು)
- ರೋಹಿತ್ ಶರ್ಮಾ- ಭಾರತ 37 ( 5 ಶತಕಗಳು, 32 ಅರ್ಧಶತಕಗಳು )
- ಮೊಹಮ್ಮದ್ ರಿಝ್ವಾನ್- ಪಾಕಿಸ್ತಾನ 31 ( ಒಂದು ಶತಕ, 30 ಅರ್ಧಶತಕಗಳು)
- ಡೇವಿಡ್ ವಾರ್ನರ್- ಆಸ್ಟ್ರೇಲಿಯಾ 29 ( ಒಂದು ಶತಕ, 28 ಅರ್ಧಶತಕಗಳು)
IND vs AUS: ಬ್ಯಾಟಿಂಗ್ ವೈಫಲ್ಯದಿಂದಾಗಿ ಆಸ್ಟ್ರೇಲಿಯಾ ಎದುರು ಸೋಲುಂಡ ಭಾರತ!
ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಬಾಬರ್ ಆಝಮ್
ಪಾಕ್ ಮಾಜಿ ನಾಯಕ ಕೆಲವು ದಿನಗಳಿಂದ ಫಾರ್ಮ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿ ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ ಅವರ ಈ ಅರ್ಧಶತಕ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಿದೆ. ಇತ್ತೀಚಿನ ದಿನಗಳಲ್ಲಿ ಪಾಕ್ ಕ್ರಿಕೆಟ್ ತಂಡ ಹಲವಾರು ಹಿನ್ನಡೆಗಳನ್ನು ಅನುಭವಿಸಿತು. ಕಾರಣ ಬಾಬರ್ ಮತ್ತು ರಿಝ್ವಾನ್ ನಡುವಿನ ಆಂತರಿಕ ಜಗಳವಾಗಿತ್ತು. ಮತ್ತೊಂದು ಕಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಾಬರ್ ಆಝಮ್‌ಗೆ ಮೊದಲ ಅವಕಾಶವನ್ನು ನೀಡಿತು. ಬಾಬರ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದಲ್ಲಿ ಮುಂದಿನ ಪಂದ್ಯಗಳಲ್ಲೂ ಇದೇ ಲಯವನ್ನು ಮುಂದುವರಿಸಬೇಕಾಗುತ್ತದೆ.