ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಿಷಭ್‌ ಪಂತ್‌ ಕಮ್‌ಬ್ಯಾಕ್‌, ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡಕ್ಕೆ 3 ವಿಕೆಟ್‌ ಜಯ!

ದಕ್ಷಿಣ ಆಫ್ರಿಕಾ ಎ ವಿರುದ್ಧದ ನಾಲ್ಕು ದಿನಗಳ ಮೊದಲ ಪಂದ್ಯದಲ್ಲಿ ಭಾರತ ಎ ತಂಡ ಜಯ ಸಾಧಿಸಿದೆ. ಆ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಆತಿಥೇಯ ತಂಡ ಮುನ್ನಡೆ ಸಾಧಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿರುವ ರಿಷಭ್‌ ಪಂತ್‌ 90 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದರು.

ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡಕ್ಕೆ 3 ವಿಕೆಟ್‌ ಜಯ!

ದಕ್ಷಿಣ ಆಫ್ರಿಕಾ ಎದುರು ಅರ್ಧಶತಕ ಬಾರಿಸಿ ರೆಡ್‌ ಬಾಲ್‌ ಕ್ರಿಕೆಟ್‌ಗೆ ರಿಷಭ್‌ ಪಂತ್‌ ಕಮ್‌ಬ್ಯಾಕ್‌. -

Profile Ramesh Kote Nov 2, 2025 7:33 PM

ಬೆಂಗಳೂರು: ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧದ ನಾಲ್ಕು ದಿನಗಳ ಮೊದಲ ಪಂದ್ಯದಲ್ಲಿ(INDA vs SAA) ಭಾರತ ಎ ತಂಡ ಮೂರು ವಿಕೆಟ್‌ ಜಯ ಸಾಧಿಸಿದೆ. ಬೆಂಗಳೂರಿನ ಸೆಂಟರ್‌ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ರಿಚಭ್‌ ಪಂತ್‌ (Rishabh Pant) ಅವರ ಅರ್ಧಶತಕದ ಬಲದಿಂದ ಭಾರತ ಎ ತಂಡ, ದಕ್ಷಿಣ ಆಫ್ರಿಕಾ ಎ ನೀಡಿದ್ದ275 ರನ್‌ಗಳ ಗುರಿಯನ್ನು 7 ವಿಕೆಟ್‌ಗಳನ್ನು ಕಳೆದುಕೊಂಡು ಚೇಸ್‌ ಮಾಡಿತು. ಈ ಪಂದ್ಯದ ಗೆಲುವಿನ ಮೂಲಕ ಭಾರತ ಎ ತಂಡ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಗಾಯದಿಂದ ಗುಣಮುಖರಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿರುವ ರಿಷಭ್‌ ಪಂತ್‌ಗೆ ಈ ಅರ್ಧಶತಕದ ಇನಿಂಗ್ಸ್‌ ಸಂಪೂರ್ಣ ವಿಶ್ವಾಸವನ್ನು ಮೂಡಿಸಿದೆ.

ಮೂರನೇ ದಿನದಾಟದಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಿದ್ದ ಭಾರತ ಎ ತಂಡಕ್ಕೆ ಕೊನೆಯ ದಿನ ಗೆಲುವಿಗೆ 166 ರನ್ ಅಗತ್ಯವಿತ್ತು. ಈ ವೇಳೆ ಕಠಿಣ ಹೋರಾಟ ನಡೆಸಿದ ಭಾರತ ಎ ತಂಡದ ನಾಯಕ ರಿಷಬ್ ಪಂತ್ (113 ಎಸೆತಗಳಲ್ಲಿ 90 ರನ್, 11 ಬೌಂಡರಿ, 4 ಸಿಕ್ಸರ್) ಮತ್ತು ಆಯುಷ್ ಬದೋನಿ (47 ಎಸೆತಗಳಲ್ಲಿ 34 ರನ್) 63 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಆದರೆ, ಬದೋನಿ, ಟಿಯಾನ್ ವ್ಯಾನ್ ವುರೆನ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು.

IND vs AUS- ಅರ್ಷದೀಪ್‌, ವಾಷಿಂಗ್ಟನ್‌ ಮಿಂಚು ; ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ!

ಮತ್ತೊಂದು ತುದಿಯಲ್ಲಿ ಪಂತ್ ಅವರು ಆರಂಭದಿಂದಲೂ ಸ್ಪೋಟಕ ಆಟವನ್ನು ಪ್ರದರ್ಶಿಸಿದರು. ಆದರೆ ಶತಕದಂಚಿನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ರಿಷಭ್ ಪಂತ್ ಅವರೂ ಕೂಡ ಟಿಯಾನ್ ವ್ಯಾನ್ ವುರೆನ್ ಎಸೆತದಲ್ಲಿ ರಿವಾಲ್ಡೊಗೆ ಕ್ಯಾಚ್ ಕೊಟ್ಟು ಔಟಾಗಿ ಪೆವಿಲಿಯನ್ ಕಡೆ ನಡೆದರು. ಇನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ತನುಷ್ ಕೋಟ್ಯಾನ್ 30 ಎಸೆತಗಳಲ್ಲಿ 23 ರನ್ ಕಲೆಹಾಕಿ ತಂಡಕ್ಕೆ ಆಸರೆಯಾದರೂ, ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲಿಲ್ಲ. ಅಲ್ಲಿಗೆ ಮೊದಲ ಸೆಷನ್‌ನಲ್ಲಿ 101 ರನ್‌ ಕಲೆಹಾಕಿದ ಭಾರತ ಎ ತಂಡದ ಗೆಲುವಿಗೆ ಇನ್ನು 59 ರನ್‌ಗಳ ಅಗತ್ಯವಿತ್ತು.



ಈ ವೇಳೆ ಪ್ರವಾಸಿ ತಂಡದ ವಿರುದ್ಧ ರೋಚಕ ಹೋರಾಟ ನಡೆಸಿದ ಅನ್ಶುಲ್ ಕಾಂಬೋಜ್ (37 ರನ್) ಮತ್ತು ಮಾನವ್ ಸುತಾರ್ (20 ರನ್) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿಯ ನಿರ್ಣಾಯಕ 60 ರನ್‌ಗಳ ರನ್​ಗಳ ಜೊತೆಯಾಟದ ನೆರವಿನೊಂದಿಗೆ ಭಾರತ ಎ 277 ರನ್​ಗಳ ಗುರಿಯನ್ನು ತಲುಪಿತು. ಆ ಮೂಲಕ ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 3 ವಿಕೆಟ್​ಗಳ ಜಯ ಸಾಧಿಸಿತು.

IND vs AUS: ಮೂರನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಆಡದೇ ಇರಲು ಕಾರಣವೇನು?

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್​​ನಲ್ಲಿ 309 ರನ್​ಗಳಿಸಿ ಆಲ್ ಔಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ ಎ ತಂಡ ಮೊದಲ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಆಲ್‌ಔಟ್‌ ಆಯಿತು ಹಾಗೂ 75 ರನ್‌ ಹಿನ್ನಡೆ ಅನುಭವಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಪ್ರವಾಸಿ ತಂಡ ಕೇವಲ 199 ರನ್​ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತ ಎ ತಂಡಕ್ಕೆ 275 ರನ್‌ ಗುರಿಯನ್ನು ನೀಡಿತ್ತು. ಎರಡನೇ ಇನಿಂಗ್ಸ್​ನಲ್ಲಿ 275 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ, ರಿಷಭ್ ಪಂತ್ ಅವರ 90 ರನ್‌ಗಳ ಅದ್ಭುತ ಇನಿಂಗ್ಸ್ ನೆರವಿನಿಂದಾಗಿ ರೋಚಕ ಗೆಲುವು ದಾಖಸಿತು.