ENG vs IND: ಅರ್ಶ್‌ದೀಪ್ ಸ್ಥಾನಕ್ಕೆ ಬದಲಿ ವೇಗಿಯಾಗಿ ತಂಡ ಸೇರಿದ ಅನ್ಶುಲ್ ಕಾಂಬೋಜ್
ಹರ್ಯಾಣದ 24 ವರ್ಷದ ವೇಗಿ ಅನ್ಶುಲ್ ಕಾಂಬೋಜ್ ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತ ‘ಎ’ ತಂಡದ ಭಾಗವಾಗಿದ್ದರು. ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿದ್ದ ಎರಡು ಅನಧಿಕೃತ ಟೆಸ್ಟ್‌ನಲ್ಲಿ 5 ವಿಕೆಟ್ ಕಿತ್ತಿದ್ದರು. ಮತ್ತು ಎರಡನೇ ಪಂದ್ಯದಲ್ಲಿ ಅರ್ಧಶತಕವನ್ನೂ ಗಳಿಸಿದ್ದರು.


ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ(ENG vs IND) ನಡೆಯುತ್ತಿರುವ ಟೆಸ್ಟ್ ಸರಣಿಯ ಅಭ್ಯಾಸದ ವೇಳೆ ಗಾಯಗೊಂಡಿರುವ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಸ್ಥಾನಕ್ಕೆ ಬದಲಿ ಬ್ಯಾಕ್-ಅಪ್ ಬೌಲರ್ ಆಗಿ ಅನ್ಶುಲ್ ಕಾಂಬೋಜ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಜುಲೈ 23 ರಂದು ಮ್ಯಾಂಚೆಸ್ಟರ್‌ನ(Manchester Test) ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಅನ್ಶುಲ್ ಕಾಂಬೋಜ್(Anshul Kamboj) ಭಾರತ ತಂಡ ಸೇರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ. ಕಾಂಬೋಜ್ ಕಳೆದ ವರ್ಷ ಕೇರಳ ತಂಡದ ವಿರುದ್ದದ ರಣಜಿ ಪಂದ್ಯದಲ್ಲಿ ಇನ್ನಿಂಗ್ಸ್‌ನ ಎಲ್ಲಾ ಹತ್ತು ವಿಕೆಟ್‌ಗಳನ್ನು ಕಿತ್ತು ರಣಜಿ ಟ್ರೋಫಿ ದಾಖಲೆ ಬರೆದಿದ್ದರು.
ಗುರುವಾರ ಬೆಕೆನ್‌ಹ್ಯಾಂ ಕೆಂಟ್ ಕೌಂಟಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಸಿದ್ದ ಅಭ್ಯಾಸದ ವೇಳೆ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಸಾಯಿ ಸುದರ್ಶನ್ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಅರ್ಶ್‌ದೀಪ್ ಕೈಗೆ ಗಾಯವಾಗಿತ್ತು. ಗಾಯದಿಂದ ಅವರು ಅಭ್ಯಾಸ ಮೊಟಕುಗೊಳಿಸಿದ್ದರು. ಅವರ ಕೈಗೆ ಬ್ಯಾಂಡೆಜ್ ಸುತ್ತಿರುವ ಫೋಟೊಗಳು ವೈರಲ್ ಆಗಿತ್ತು. ಅವರ ಗಾಯದ ಸ್ವರೂಪ ಗಂಭೀರ ವಾಗಿರುವ ಕಾರಣದಿಂದಲೇ ಟೀಮ್ ಮ್ಯಾನೆಜ್‌ಮೆಂಟ್ ಬದಲಿ ವೇಗಿಯ ಆಯ್ಕೆ ಮಾಡಿದಂತಿದೆ. ಅರ್ಶ್‌ದೀಪ್ ಗಾಯಗೊಂಡಿದ್ದರು ತಂಡದ ಜತೆ ಉಳಿಸಿಕೊಂಡಿದ್ದಾರೆ.
ಹರ್ಯಾಣದ 24 ವರ್ಷದ ವೇಗಿ ಅನ್ಶುಲ್ ಕಾಂಬೋಜ್ ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಭಾರತ ‘ಎ’ ತಂಡದ ಭಾಗವಾಗಿದ್ದರು. ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಿದ್ದ ಎರಡು ಅನಧಿಕೃತ ಟೆಸ್ಟ್‌ನಲ್ಲಿ 5 ವಿಕೆಟ್ ಕಿತ್ತಿದ್ದರು. ಮತ್ತು ಎರಡನೇ ಪಂದ್ಯದಲ್ಲಿ ಅರ್ಧಶತಕವನ್ನೂ ಗಳಿಸಿದ್ದರು. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ಅವರು 21.50 ಸರಾಸರಿ ಮತ್ತು 8ರ ಎಕಾನಮಿಯಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದರು.
ಇದನ್ನೂ ಓದಿ ENG vs IND: 4ನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ಆಘಾತ; ಆಕಾಶ್‌ದೀಪ್‌ಗೆ ಗಾಯ
ಕಾಂಬೋಜ್ ಸೀಮ್ ಆಲ್‌ರೌಂಡರ್ ಆಗಿದ್ದು, ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 22.88 ರ ಸರಾಸರಿಯಲ್ಲಿ 79 ವಿಕೆಟ್‌ಗಳನ್ನು ಮತ್ತು 3.10 ರ ಎಕಾನಮಿಯನ್ನು ಹೊಂದಿದ್ದಾರೆ. ಇದರಲ್ಲಿ ಎರಡು ಐದು ವಿಕೆಟ್‌ಗಳು ಮತ್ತು ಒಂದು ಹತ್ತು ವಿಕೆಟ್‌ಗಳು ಸೇರಿವೆ. ಅವರು ಲಿಸ್ಟ್ ಎ ಮತ್ತು ಟಿ20 ಕ್ರಿಕೆಟ್‌ನಲ್ಲಿ 74 ವಿಕೆಟ್‌ಗಳನ್ನು ಪಡೆದಿದ್ದಾರೆ.