ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ನಾಳೆ ಭಾರತ-ಪಾಕ್‌ ಹೈವೋಲ್ಟೇಜ್‌ ಸೆಣಸು

2007 ಟಿ20 ಮತ್ತು 2011ರ ಏಕದಿನ ವಿಶ್ವಕಪ್‌ ಗೆಲುವಿನ ಹೀರೋ ಯುವರಾಜ್‌ ಸಿಂಗ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಎಡಗೈ ಬ್ಯಾಟರ್‌ಗಳಾದ ಶಿಖರ್‌ ಧವನ್‌, ಕನ್ನಡಿಗ ರಾಬಿನ್‌ ಉತ್ತಪ್ಪ ಭಾರತ ಇನಿಂಗ್ಸ್‌ ಆರಂಭಿಸಲಿದ್ದಾರೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಭಾರತ ತಂಡ ಪಾಕ್‌ ಮಣಿಸಿ ಚಾಂಪಿಯನ್‌ ಆಗಿತ್ತು. ಆದರೆ ಲೀಗ್‌ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಈ ಬಾರಿ ಎಚ್ಚರಿಕೆಯಿಂದ ಆಡಬೇಕು.

WCL 2025: ನಾಳೆ ಭಾರತ-ಪಾಕ್‌ ಹೈವೋಲ್ಟೇಜ್‌ ಸೆಣಸು

Profile Abhilash BC Jul 19, 2025 12:02 PM

ನವದೆಹಲಿ: ಪಹಲ್ಗಾಮ್‌ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನಕ್ಕೆ, ಭಾರತ ಆಪರೇಷನ್ ಸಿಂದೂರ(operation sindoor) ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ನೀಡದ ಬಳಿಕ ಎರಡು ದೇಶಗಳ ನಡುವೆ ಯುದ್ಧದಂತಹ ಸಂದರ್ಭ ನಡೆದು ಹೋಗಿತ್ತು. ನೆರೆಹೊರೆಯ ದೇಶಗಳ ನಡುವೆ ಕ್ಷಿಪಣಿ ದಾಳಿಯಂತಹ ಘಟನೆಗಳು ನಡೆದಿತ್ತು.ಇದೀಗ ಮೊದಲ ಬಾರಿಗೆ ಎರಡು ದೇಶಗಳ(IND vs PAK) ನಡುವಿನ ಹೈವೋಲ್ಟೇಜ್‌ ಕ್ರಿಕೆಟ್‌ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. 2ನೇ ಆವೃತ್ತಿಯ ಲೆಜೆಂಡ್ಸ್ ವಿಶ್ವ ಚಾಂಪಿಯನ್‌ಶಿಪ್ 2025ರ ಕೂಟದಲ್ಲಿ(WCL 2025) ಭಾರತ ತಂಡ ನಾಳೆ(ಭಾನುವಾರ) ಪಾಕಿಸ್ತಾನ ವಿರುದ್ಧ ಸೆಣಸಾಟ ನಡೆಸಿದೆ.

ಕೂಟದಲ್ಲಿ ಭಾರತಕ್ಕೆ ಮೊದಲ ಪಂದ್ಯವಾದರೇ ಪಾಕಿಸ್ತಾನಕ್ಕೆ ಎರಡನೇ ಪಂದ್ಯ. ಶುಕ್ರವಾರ ನಡೆದಿದ್ದ ಉದ್ಘಾಟನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 5 ರನ್‌ ಅಂತರದ ರೋಚಕ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಭಾರತ ತಂಡ ಪಾಕ್‌ ಮಣಿಸಿ ಚಾಂಪಿಯನ್‌ ಆಗಿತ್ತು. ಆದರೆ ಲೀಗ್‌ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಈ ಬಾರಿ ಎಚ್ಚರಿಕೆಯಿಂದ ಆಡಬೇಕು.

2007 ಟಿ20 ಮತ್ತು 2011ರ ಏಕದಿನ ವಿಶ್ವಕಪ್‌ ಗೆಲುವಿನ ಹೀರೋ ಯುವರಾಜ್‌ ಸಿಂಗ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಎಡಗೈ ಬ್ಯಾಟರ್‌ಗಳಾದ ಶಿಖರ್‌ ಧವನ್‌, ಕನ್ನಡಿಗ ರಾಬಿನ್‌ ಉತ್ತಪ್ಪ ಭಾರತ ಇನಿಂಗ್ಸ್‌ ಆರಂಭಿಸಲಿದ್ದಾರೆ. ಉಳಿದಂತೆ ಸುರೇಶ್‌ ರೈನಾ, ರಾಯುಡು, ಪಠಾಣ್‌ ಬ್ರದರ್ಸ್‌, ಹರ್ಭಜನ್‌ ಸಿಂಗ್‌, ಸ್ಟುವರ್ಟ್‌ ಬಿನ್ನಿ ತಂಡದ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ.

ಪಾಕ್‌ ತಂಡ ಕೂಡ ಬಲಿಷ್ಠವಾಗಿದೆ. ನಾಯಕ ಮೊಹಮ್ಮದ್ ಹಫೀಜ್, ಶೋಯೆಬ್‌ ಮಲಿಕ್‌, ಆಸೀಫ್‌ ಅಲಿ, ಕಮ್ರಾನ್‌ ಅಕ್ಮಲ್‌ ಕೂಡ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಕಾರಣ ಭಾರತ ವಿರುದ್ಧದ ಪಂದ್ಯಕ್ಕೆ ಪಾಕ್‌ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವುದು ಅನುಮಾನ.

ಇದನ್ನೂ ಓದಿ IND vs ENG 4th Test: ರೋಹಿತ್‌ ದಾಖಲೆ ಮುರಿಯುವ ಸನಿಹ ರಿಷಭ್‌ ಪಂತ್‌

ಸಂಭಾವ್ಯ ಆಡುವ ಬಳಗ

ಭಾರತ: ಶಿಖರ್‌ ಧವನ್‌, ರಾಬಿನ್‌ ಉತ್ತಪ್ಪ, ಸುರೇಶ್‌ ರೈನಾ, ಯುವರಾಜ್‌ ಸಿಂಗ್‌ (ನಾಯಕ), ಅಂಬಾಟಿ ರಾಯುಡು, ಇರ್ಫಾನ್‌ ಪಠಾಣ್‌, ಯೂಸುಫ್‌ ಪಠಾಣ್‌, ಹರ್ಭಜನ್‌ ಸಿಂಗ್‌, ಪೀಯೂಸ್‌ ಚಾವ್ಲಾ, ವರುಣ್‌ ಆರನ್‌, ಸಿದ್ಧಾರ್ಥ್‌ ಕೌಲ್‌/ವಿನಯ್‌ ಕುಮಾರ್‌.

ಪಾಕಿಸ್ತಾನ: ಮೊಹಮ್ಮದ್ ಹಫೀಜ್ (ನಾಯಕ), ಕಮ್ರಾನ್ ಅಕ್ಮಲ್ (ವಿ.ಕೀ.), ಶೋಯೆಬ್ ಮಲಿಕ್, ಶರ್ಜೀಲ್ ಖಾನ್, ಆಸಿಫ್ ಅಲಿ, ಉಮರ್ ಅಮೀನ್, ಅಮೀರ್ ಯಾಮಿನ್, ವಹಾಬ್ ರಿಯಾಜ್, ಸೊಹೈಲ್ ಖಾನ್, ಸೊಹೈಲ್ ತನ್ವಿರ್, ರುಮ್ಮನ್ ರಯೀಸ್.

ಪಂದ್ಯ ಆರಂಭ: ರಾತ್ರಿ 9ಗಂಟೆ.

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಪ್ಯಾನ್‌ಕೋಡ್‌(ಒಟಿಟಿ).