ಲೆಜೆಂಡ್ಸ್ ಕ್ರಿಕೆಟ್ ಲೀಗ್: ಭಾರತ-ಪಾಕ್ ಪಂದ್ಯ ರದ್ದು
ಶನಿವಾರವೇ ಸ್ಪಿನ್ನರ್ ಹರ್ಭಜನ್ ಸಿಂಗ್, ಆರಂಭಿಕ ಶಿಖರ್ ಧವನ್, ಸುರೇಶ್ ರೈನಾ ಮತ್ತು ಆಲ್‌ರೌಂಡರ್ ಯೂಸುಫ್ ಪಠಾಣ್ ಸೇರಿದಂತೆ ಹಲವಾರು ಭಾರತೀಯ ಆಟಗಾರರು ಪಂದ್ಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಜತೆಗೆ ಸಾರ್ವಜನಿಕರ ಆಕ್ರೋಶ ಕೂಡ ವ್ಯಕ್ತವಾಗಿತ್ತು.


ಲಂಡನ್: ಭಾರತ ಮತ್ತು ಪಾಕಿಸ್ಥಾನ(IND vs PAK) ನಡುವೆ ಇಂದು(ಭಾನುವಾರ) ರಾತ್ರಿ ನಡೆಯಬೇಕಿದ್ದ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಕ್ರಿಕೆಟ್(WCL 2025) ಪಂದ್ಯ ರದ್ದುಗೊಂಡಿದೆ. ಪಹಲ್ಗಾಮ್ ಉಗ್ರರ ದಾಳಿಯನ್ನು ಖಂಡಿಸಿ ಭಾರತೀಯ ಆಟಗಾರರು ಪಂದ್ಯದಲ್ಲಿ ಹಿಂದೇಟು ಹಾಕಿದ ಕಾರಣ ಪಂದ್ಯ ರದ್ದುಗೊಳಿಸಲಾಯಿತು. ಆಟಗಾರರ ಈ ನಿರ್ಧಾರಕ್ಕೆ ದೇಶವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದಾರೆ.
ಶನಿವಾರವೇ ಸ್ಪಿನ್ನರ್ ಹರ್ಭಜನ್ ಸಿಂಗ್, ಆರಂಭಿಕ ಶಿಖರ್ ಧವನ್, ಸುರೇಶ್ ರೈನಾ ಮತ್ತು ಆಲ್‌ರೌಂಡರ್ ಯೂಸುಫ್ ಪಠಾಣ್ ಸೇರಿದಂತೆ ಹಲವಾರು ಭಾರತೀಯ ಆಟಗಾರರು ಪಂದ್ಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಜತೆಗೆ ಸಾರ್ವಜನಿಕರ ಆಕ್ರೋಶ ಕೂಡ ವ್ಯಕ್ತವಾಗಿತ್ತು.
"ಆತ್ಮೀಯರೇ ನಾವು ಯಾವಾಗಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇವೆ. ಮತ್ತು ಅಭಿಮಾನಿಗಳಿಗೆ ಕೆಲವು ಒಳ್ಳೆಯ, ಸಂತೋಷದ ಕ್ಷಣಗಳನ್ನು ನೀಡುವುದು ನಮ್ಮ ಏಕೈಕ ಗುರಿಯಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ, ನಾವು ಹಲವರ ಭಾವನೆಗಳನ್ನು ನೋಯಿಸಿದ್ದೇವೆ ಮತ್ತು ಭಾವನೆಗಳನ್ನು ಕಲಕಿದ್ದೇವೆ. ಅದಕ್ಕಿಂತ ಹೆಚ್ಚಾಗಿ, ದೇಶಕ್ಕೆ ಅಪಾರ ಕೀರ್ತಿ ತಂದಿರುವ ನಮ್ಮ ಭಾರತೀಯ ಕ್ರಿಕೆಟ್ ದಂತಕಥೆಗಳಿಗೆ ನಾವು ಉದ್ದೇಶಪೂರ್ವಕವಾಗಿ ತೊಂದರೆ ಉಂಟುಮಾಡಿದ್ದೇವೆ ಮತ್ತು ಆಟದ ಮೇಲಿನ ಪ್ರೀತಿಯಿಂದ ನಮಗೆ ಬೆಂಬಲ ನೀಡಿದ ಬ್ರ್ಯಾಂಡ್‌ಗಳ ಮೇಲೆ ಪರಿಣಾಮ ಬೀರಿದ್ದೇವೆ. ಆದ್ದರಿಂದ, ನಾವು ಭಾರತ vs ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಾವು ಮತ್ತೊಮ್ಮೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ" ಎಂದು ಸಂಘಟಕರು ತಿಳಿಸಿದ್ದಾರೆ.
ಭಾರತ ತಂಡ: ಯುವರಾಜ್ ಸಿಂಗ್ (ನಾಯಕ), ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ವಿನಯ್ ಕುಮಾರ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಯೂಸುಫ್ ಪಠಾಣ್, ನಮನ್ ಓಜಾ, ಮುನಾಫ್ ಪಟೇಲ್, ರತೀಂದರ್ ಸಿಂಗ್ ಸೋಧಿ, ಆರ್ ಪಿ. ಸಿಂಗ್, ಅಶೋಕ್ ದಿಂಡಾ.