ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Joe Root: ದ್ರಾವಿಡ್‌, ಕ್ಯಾಲಿಸ್‌ ದಾಖಲೆ ಮುರಿಯಲು ರೂಟ್‌ಗೆ 31 ರನ್‌ ಅಗತ್ಯ

ಟೆಸ್ಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ವಿಶ್ವ ದಾಖಲೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ. ಸಚಿನ್‌ 15,921 ಸಾವಿರ ರನ್‌ ಬಾರಿಸಿದ್ದಾರೆ. ಈ ವಿಶ್ವ ದಾಖಲೆ ಮುರಿಯಲು ರೂಟ್‌ಗೆ 2,662 ರನ್‌ ಅಗತ್ಯವಿದೆ. ರೂಟ್‌ ಇನ್ನು ಕನಿಷ್ಠ 5 ವರ್ಷ ಟೆಸ್ಟ್‌ ಆಡಿದರೆ ಈ ದಾಖಲೆಯನ್ನು ಮುರಿಯುವ ಅವಕಾಶ ಅವರ ಮುಂದಿದೆ.

ದ್ರಾವಿಡ್‌, ಕ್ಯಾಲಿಸ್‌ ದಾಖಲೆ ಮುರಿಯಲು ರೂಟ್‌ಗೆ 31 ರನ್‌ ಅಗತ್ಯ

Profile Abhilash BC Jul 19, 2025 10:07 AM

ಮ್ಯಾಂಚೆಸ್ಟರ್‌: ತವರಿನ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಹಲವು ವಿಶ್ವ ದಾಖಲೆಗಳನ್ನು ಬರೆದಿರುವ ಇಂಗ್ಲೆಂಡ್‌ನ ಅನುಭವಿ ಬ್ಯಾಟರ್‌ ಜೋ ರೂಟ್‌(Joe Root) ಅವರು ನಾಲ್ಕನೇ ಟೆಸ್ಟ್‌(Manchester Test) ಪಂದ್ಯದಲ್ಲಿಯೂ ಹಲವು ದಿಗ್ಗಜ ಆಟಗಾರರ ದಾಖಲೆಯನ್ನು ಹಿಂದಿಕ್ಕುವ ಸನಿಹದಲ್ಲಿದ್ದಾರೆ. ನಾಲ್ಕನೇ ಟೆಸ್ಟ್‌ ಪಂದ್ಯ ಓಲ್ಡ್ ಟ್ರಾಫೋರ್ಡ್‌ನಲ್ಲಿ ಜುಲೈ 23ರಿಂದ ಆರಂಭವಾಗಲಿದೆ.

34 ವರ್ಷದ ರೂಟ್‌, ನಾಲ್ಕನೇ ಟೆಸ್ಟ್‌ನಲ್ಲಿ ಕೇವಲ 31 ರನ್‌ ಬಾರಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದವರ ಯಾದಿಯಲ್ಲಿ ಜಾಕ್‌ ಕ್ಯಾಲಿಸ್‌ ಮತ್ತು ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲಿದ್ದಾರೆ. ಸದ್ಯ ರೂಟ್‌ 13,259 ರನ್ನುಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

ರೂಟ್‌ 120 ರನ್‌ ಬಾರಿಸಿದರೆ ಒಮ್ಮೆಲೇ 5ರಿಂದ ದ್ವಿತೀಯ ಸ್ಥಾನಕ್ಕೆ ನೆಗೆದು ಸಚಿನ್‌ ತೆಂಡುಲ್ಕರ್‌ ಅವರ ಅನಂತರದ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗ ಅವರು ರಿಕಿ ಪಾಂಟಿಂಗ್‌, ಜಾಕ್‌ ಕ್ಯಾಲಿಸ್‌ ಮತ್ತು ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಲಿದ್ದಾರೆ. ಪ್ರಚಂಡ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ರೂಟ್‌ಗೆ ಇನ್ನುಳಿದ ಎರಡು ಪಂದ್ಯಗಳಲ್ಲಿ 120 ರನ್‌ ಬಾರಿಸುವುದು ಕಷ್ಟದ ಮಾತಲ್ಲ.

ಟೆಸ್ಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ವಿಶ್ವ ದಾಖಲೆ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ. ಸಚಿನ್‌ 15,921 ಸಾವಿರ ರನ್‌ ಬಾರಿಸಿದ್ದಾರೆ. ಈ ವಿಶ್ವ ದಾಖಲೆ ಮುರಿಯಲು ರೂಟ್‌ಗೆ 2,662 ರನ್‌ ಅಗತ್ಯವಿದೆ. ರೂಟ್‌ ಇನ್ನು ಕನಿಷ್ಠ 5 ವರ್ಷ ಟೆಸ್ಟ್‌ ಆಡಿದರೆ ಈ ದಾಖಲೆಯನ್ನು ಮುರಿಯುವ ಅವಕಾಶ ಅವರ ಮುಂದಿದೆ.

ಟೆಸ್ಟ್‌ನಲ್ಲಿ ಅತ್ಯಧಿಕ ರನ್‌

ಸಚಿನ್‌ ತೆಂಡೂಲ್ಕರ್‌-15,921 ರನ್‌

ರಿಕಿ ಪಾಂಟಿಂಗ್‌-13,378 ರನ್‌

ಜಾಕ್‌ ಕ್ಯಾಲಿಸ್‌- 13,289 ರನ್‌

ರಾಹುಲ್‌ ದ್ರಾವಿಡ್‌-13,288 ರನ್‌

ಜೋ ರೂಟ್‌- 13,259 ರನ್‌

ಇದನ್ನೂ ಓದಿ IND vs ENG 4th Test: ರೋಹಿತ್‌ ದಾಖಲೆ ಮುರಿಯುವ ಸನಿಹ ರಿಷಭ್‌ ಪಂತ್‌