ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lionel Messi: ಹೈದರಾಬಾದ್‌ಗೆ ವಿಸ್ತರಿಸಿದ ಮೆಸ್ಸಿಯ ಭಾರತ ಪ್ರವಾಸ

ಮೆಸ್ಸಿಯ ಪರಿಷ್ಕೃತ ಪ್ರವಾಸವು ಈಗ ಭಾರತದ ಎಲ್ಲಾ ನಾಲ್ಕು ರಾಜ್ಯಗಳಿಗೆ ವ್ಯಾಪಿಸಲಿದೆ. ಕೋಲ್ಕತಾ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ. 2011 ರಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಮುನ್ನಡೆಸಿದ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ. ಡಿ 13 ರಂದು ಕೋಲ್ಕತ್ತಾದಲ್ಲಿ ಮೆಸ್ಸಿ ಪ್ರವಾಸ ಆರಂಭಿಸಲಿದ್ದಾರೆ.

ದಕ್ಷಿಣ ಭಾರತಕ್ಕೂ ವಿಸ್ತರಿಸಿದ ಮೆಸ್ಸಿಯ ಭಾರತ ಪ್ರವಾಸ

ಲಿಯೊನಲ್‌ ಮೆಸ್ಸಿ -

Abhilash BC Abhilash BC Nov 2, 2025 1:13 PM

ನವದೆಹಲಿ: ಲಿಯೊನೆಲ್ ಮೆಸ್ಸಿ(Lionel Messi) ನೇತೃತ್ವದ ಅರ್ಜೆಂಟೀನಾ ಫುಟ್‌ಬಾಲ್ ತಂಡವು ವೇಳಾಪಟ್ಟಿ ಗೊಂದಲದಿಂದಾಗಿ ಕೇರಳ ಪ್ರವಾಸವನ್ನು ರದ್ದುಗೊಳಿಸಿತ್ತು. ಇದರಿಂದ ದಕ್ಷಿಣ ಭಾರತದ ಮೆಸ್ಸಿ ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ ಮೆಸ್ಸಿಯ ‘2025ರ ಸಾರ್ವಕಾಲಿಕ ಶ್ರೇಷ್ಠ ಭಾರತ ಪ್ರವಾಸ’ದ ವ್ಯಾಪ್ತಿಯನ್ನು ಹೈದರಾಬಾದ್‌ಗೆ ವಿಸ್ತರಿಸಲಾಗಿದೆ. ಮೆಸ್ಸಿಯನ್ನು ನೋಡುವ ಅವಕಾಶದಿಂದ ದಕ್ಷಿಣ ಭಾರತದ ಅಭಿಮಾನಿಗಳು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅವರ ಪ್ರವಾಸವನ್ನು ಹೈದರಾಬಾದ್‌ ಗೆ ವಿಸ್ತರಿಸಲಾಗಿದೆ.

ಅರ್ಜೇಂಟೀನಾ ತಂಡ ಕೊಚ್ಚಿಯಲ್ಲಿ ನವೆಂಬರ್ 17ರಂದು ಸ್ನೇಹ ಪಂದ್ಯವೊಂದನ್ನು ಆಡಬೇಕಿತ್ತು. ಆದರೆ, ಆ ಪಂದ್ಯಕ್ಕೆ ಫಿಫಾದ ಅನುಮತಿಯನ್ನು ಪಡೆಯುವುದು ವಿಳಂಬವಾಗಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಪಂದ್ಯವನ್ನು ಫಿಫಾದ ಮುಂದಿನ ವೇಳಾಪಟ್ಟಿಯಲ್ಲಿ ಮಾರ್ಚ್‌ ನಲ್ಲಿ ಆಡಲಾಗುವುದು ಎಂಬುದಾಗಿ ತಿಳಿಸಲಾಗಿದೆ.

ಮೆಸ್ಸಿಯ ಪರಿಷ್ಕೃತ ಪ್ರವಾಸವು ಈಗ ಭಾರತದ ಎಲ್ಲಾ ನಾಲ್ಕು ರಾಜ್ಯಗಳಿಗೆ ವ್ಯಾಪಿಸಲಿದೆ. ಕೋಲ್ಕತಾ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ. 2011 ರಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾವನ್ನು ಮುನ್ನಡೆಸಿದ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ. ಡಿ 13 ರಂದು ಕೋಲ್ಕತ್ತಾದಲ್ಲಿ ಮೆಸ್ಸಿ ಪ್ರವಾಸ ಆರಂಭಿಸಲಿದ್ದಾರೆ.

ಇದನ್ನೂ ಓದಿ Lionel Messi: ಇಂಟರ್ ಮಿಯಾಮಿಯಲ್ಲಿ ಒಪ್ಪಂದ ವಿಸ್ತರಿಸಿದ ಮೆಸ್ಸಿ; 2028ರ ತನಕ ಆಟ

38 ವರ್ಷದ ಮೆಸ್ಸಿ 2026 ವಿಶ್ವಕಪ್‌ ಆಡುವುದು ಅನುಮಾನ ಎನ್ನಲಾಗಿದೆ. 2022 ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್‌ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.