ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ENG vs IND: ಟೀಂ ಇಂಡಿಯಾಗೆ ಗಾಯಾಳುಗಳ ಚಿಂತೆ; ಆಲ್‌ರೌಂಡರ್‌ ಸರಣಿಯಿಂದ ಔಟ್‌!

Nitish Kumar Reddy: ನಿತೀಶ್ ರೆಡ್ಡಿ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದಿರಲಿಲ್ಲ. ಆದರೆ ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾದರು. ಭಾರತದ ಗೆಲುವಿಗೆ ಅವರು ಯಾವುದೇ ಮಹತ್ವದ ಕೊಡುಗೆ ನೀಡಲಿಲ್ಲವಾದರೂ ಮೂರನೇ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದರು.

ಭಾರತಕ್ಕೆ ಗಾಯದ ಚಿಂತೆ; ಆಲ್‌ರೌಂಡರ್‌ ಸರಣಿಯಿಂದ ಔಟ್‌!

Profile Abhilash BC Jul 20, 2025 10:39 PM

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌(ENG vs IND) ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಭಾರತ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್‌ ವೇಗಿಗಳಾದ ಆಕಾಶ್‌ದೀಪ್‌ ಮತ್ತು ಅರ್ಶ್‌ದೀಪ್‌ ಸಿಂಗ್‌ ಗಾಯಗೊಂಡಿರುವ ಬೆನ್ನಲ್ಲೇ ಆಲ್‌ರೌಂಡರ್‌ ನಿತೀಶ್‌ ಕುಮಾರ್‌(Nitish Kumar Reddy) ಗಂಭೀರ ಗಾಯಗೊಂಡಿದ್ದು ಸರಣಿಯಿಂದಲೇ ಹೊರಬೀಳಲಿದ್ದಾರೆ ಎಂದು ವರದಿಯಾಗಿದೆ. ಇದು ತಂಡದ ತಲೆಬಿಸಿ ಇನ್ನಷ್ಟು ಹೆಚ್ಚಿಸಿದೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ ನಿತೀಶ್ ರೆಡ್ಡಿ ಭಾನುವಾರ ಜಿಮ್‌ನಲ್ಲಿ ತರಬೇತಿ ಅವಧಿಯಲ್ಲಿ ಗಾಯಗೊಂಡಿದ್ದು, ಸ್ಕ್ಯಾನಿಂಗ್‌ನಲ್ಲಿ ಮೊಣಕಾಲಿನ ಅಸ್ಥಿರಜ್ಜು ಗಂಭೀರವಾಗಿ ಗಾಯಗೊಂಡಿರುವುದು ಕಂಡು ಬಂದಿದೆ. ರಿಷಭ್ ಪಂತ್, ಆಕಾಶ್ ದೀಪ್ ಮತ್ತು ಅರ್ಶ್‌ದೀಪ್ ಸಿಂಗ್ ಅವರಂತಹ ಪ್ರಮುಖ ಆಟಗಾರರ ಗಾಯಗಳಿಂದ ಈಗಾಗಲೇ ಬಳಲುತ್ತಿರುವ ಭಾರತಕ್ಕೆ ರೆಡ್ಡಿ ಗಾಯವು ದೊಡ್ಡ ಹೊಡೆತವಾಗಿದೆ. ಸೀಮ್-ಬೌಲಿಂಗ್ ಬದಲಿಯಾಗಿ ಅನ್ಶುಲ್ ಕಾಂಬೋಜ್ ಅವರನ್ನು ಭಾರತದ ತಂಡಕ್ಕೆ ಸೇರಿಸಲಾಗಿದೆ.

ನಿತೀಶ್ ರೆಡ್ಡಿ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದಿರಲಿಲ್ಲ. ಆದರೆ ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾದರು. ಭಾರತದ ಗೆಲುವಿಗೆ ಅವರು ಯಾವುದೇ ಮಹತ್ವದ ಕೊಡುಗೆ ನೀಡಲಿಲ್ಲವಾದರೂ ಮೂರನೇ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದರು.

ಲಾರ್ಡ್ಸ್‌ ಟೆಸ್ಟ್‌ನ ಮೊದಲ ದಿನ ರಿಷಭ್‌ಗೆ ಕೈ ಬೆರಳಿಗೆ ಚೆಂಡು ತಾಗಿತ್ತು. ಬಳಿಕ ಅವರು ವಿಕೆಟ್‌ ಕೀಪಿಂಗ್‌ ಮಾಡಿರಲಿಲ್ಲ. ಅವರ ಬದಲು ಧ್ರುವ್‌ ಜುರೆಲ್‌ ಪಂದ್ಯದುದ್ದಕ್ಕೂ ಕೀಪಿಂಗ್‌ ಹೊಣೆ ನಿಭಾಯಿಸಿದ್ದರು. ಆದರೂ ಎರಡೂ ಇನ್ನಿಂಗ್ಸ್‌ಗಳಲ್ಲಿ ರಿಷಭ್‌ ಬ್ಯಾಟ್‌ ಮಾಡಿದ್ದರು. 4ನೇ ಟೆಸ್ಟ್‌ ಆರಂಭಕ್ಕೆ ಇನ್ನು 2 ದಿನಗಳು ಬಾಕಿ ಇದ್ದರೂ, ಈ ಅವಧಿಯಲ್ಲಿ ರಿಷಭ್‌ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಹೀಗಾಗಿ ಅವರು ಪಂದ್ಯದಲ್ಲಿ ಆಡುವುದು ಖಚಿತವಿಲ್ಲ. ಒಟ್ಟಾರೆ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ ENG vs IND: ಅರ್ಶ್‌ದೀಪ್‌ ಸ್ಥಾನಕ್ಕೆ ಬದಲಿ ವೇಗಿಯಾಗಿ ತಂಡ ಸೇರಿದ ಅನ್ಶುಲ್‌ ಕಾಂಬೋಜ್‌