ENG vs IND: ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ 19 ವರ್ಷದ ಏಷ್ಯನ್ ದಾಖಲೆ ಮೇಲೆ ಕಣ್ಣಿಟ್ಟ ಶುಭ್‌ಮನ್ ಗಿಲ್
Shubman Gill: ಲಾರ್ಡ್ಸ್ ಟೆಸ್ಟ್‌ನಲ್ಲಿ 22 ರನ್‌ಗಳ ಸೋಲಿನ ನಂತರ, ಸರಣಿಯನ್ನು ಗೆಲ್ಲುವ ತಮ್ಮ ಆಕಾಂಕ್ಷೆಯನ್ನು ಉಳಿಸಿಕೊಳ್ಳಲು ಭಾರತವು ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸಲೇಬೇಕು. ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಗ್ರೆಗ್ ಚಾಪೆಲ್ ಮುಂಬರುವ ಮ್ಯಾಂಚೆಸ್ಟರ್ ಟೆಸ್ಟ್ ಅನ್ನು ಶುಭಮನ್ ಗಿಲ್ ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಸವಾಲು ಎಂದು ಬಣ್ಣಿಸಿದ್ದಾರೆ.


ಮ್ಯಾಚೆಂಸ್ಟರ್: ಜುಲೈ 23 ಬುಧವಾರ ಮ್ಯಾಂಚೆಸ್ಟರ್‌ನ(Manchester Test) ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ(ENG vs IND) ತಂಡವು ಭರ್ಜರಿ ಪ್ರದರ್ಶನ ನೀಡುವ ಗುರಿಯನ್ನು ಹೊಂದಿದ್ದು, ಶುಭಮನ್ ಗಿಲ್(Shubman Gill) ಮಹತ್ವದ ಮೈಲಿಗಲ್ಲು ಸಾಧಿಸುವ ಸನಿಹದಲ್ಲಿದ್ದಾರೆ. ಇಂಗ್ಲಿಷ್ ನೆಲದಲ್ಲಿ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಏಷ್ಯನ್ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಮುರಿಯಲು 25 ರನ್‌ಗಳ ಅವಶ್ಯವಿದೆ.
ಪ್ರಸ್ತುತ ದಾಖಲೆ ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಹೆಸರಿನಲ್ಲಿದೆ. ಅವರು ನಾಲ್ಕು ಪಂದ್ಯಗಳಲ್ಲಿ 90.14 ಸರಾಸರಿಯಲ್ಲಿ 631 ರನ್ ಗಳಿಸಿದ್ದರು. ಗಿಲ್ ಪ್ರಸ್ತುತ ಮೂರು ಪಂದ್ಯಗಳಿಂದ 607 ರನ್ ಗಳಿಸಿದ್ದಾರೆ.
ಲಾರ್ಡ್ಸ್ ಟೆಸ್ಟ್‌ನಲ್ಲಿ 22 ರನ್‌ಗಳ ಸೋಲಿನ ನಂತರ, ಸರಣಿಯನ್ನು ಗೆಲ್ಲುವ ತಮ್ಮ ಆಕಾಂಕ್ಷೆಯನ್ನು ಉಳಿಸಿಕೊಳ್ಳಲು ಭಾರತವು ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸಲೇಬೇಕು. ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಗ್ರೆಗ್ ಚಾಪೆಲ್ ಮುಂಬರುವ ಮ್ಯಾಂಚೆಸ್ಟರ್ ಟೆಸ್ಟ್ ಅನ್ನು ಶುಭಮನ್ ಗಿಲ್ ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಸವಾಲು ಎಂದು ಬಣ್ಣಿಸಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್(ಏಷ್ಯನ್ ಬ್ಯಾಟ್ಸ್‌ಮನ್)
ಮೊಹಮ್ಮದ್ ಯೂಸುಫ್ (ಪಾಕಿಸ್ತಾನ): 4 ಪಂದ್ಯಗಳಿಂದ 631 ರನ್
ಶುಭಮನ್ ಗಿಲ್ (ಭಾರತ) -3 ಪಂದ್ಯಗಳಿಂದ 607* ರನ್
ರಾಹುಲ್ ದ್ರಾವಿಡ್ (ಭಾರತ) -4 ಪಂದ್ಯಗಳಿಂದ 602 ರನ್
ವಿರಾಟ್ ಕೊಹ್ಲಿ (ಭಾರತ) - 5 ಪಂದ್ಯಗಳಿಂದ 593 ರನ್
ಸುನಿಲ್ ಗವಾಸ್ಕರ್ (ಭಾರತ) - 4 ಪಂದ್ಯಗಳಿಂದ 542 ರನ್
ಸಲೀಮ್ ಮಲಿಕ್ (ಪಾಕಿಸ್ತಾನ) -5 ಪಂದ್ಯಗಳಿಂದ 488 ರನ್
ಇದನ್ನೂ ಓದಿ ENG vs IND: ಅರ್ಶ್‌ದೀಪ್ ಸ್ಥಾನಕ್ಕೆ ಬದಲಿ ವೇಗಿಯಾಗಿ ತಂಡ ಸೇರಿದ ಅನ್ಶುಲ್ ಕಾಂಬೋಜ್