ಮ್ಯಾಂಚೆಸ್ಟರ್‌ನಲ್ಲಿ ಕ್ರಿಕೆಟ್-ಫುಟ್ಬಾಲ್ ಆಟಗಾರರ ಸಮಾಗಮ
Team India x Manchester United: ಅಭಿಮಾನಿಗಳು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುವ ಕ್ಷಣದಲ್ಲಿ, ಭಾರತೀಯ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ನಾಯಕ ಬ್ರೂನೋ ಫೆರ್ನಾಂಡಿಸ್ ಜೆರ್ಸಿಗಳನ್ನು ಬದಲಾಯಿಸಿಕೊಂಡು ಜತೆಯಾಗಿ ಪೋಸ್ ನೀಡಿದರು.


ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ ಭಾರತದ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡ ಮ್ಯಾಂಚೆಸ್ಟರ್‌ನಲ್ಲಿ(Team India x Manchester United) ಅಪರೂಪದ ಕ್ರೀಡಾ ಕ್ಷಣಕ್ಕೆ ಸಾಕ್ಷಿಯಾಯಿತು. ಉಭಯ ತಂಡಗಳ ಆಟಗಾರರು ಸಮಾಗಮಗೊಂಡು ಸಂತಸದಲ್ಲಿ ತೇಲಾಡಿದರು. ಈ ಸುಂದರ ಕ್ಷಣದ ಫೋಟೊಗಳು ವೈರಲ್ ಆಗಿದೆ.
ಭಾನುವಾರ ಮಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡವನ್ನು ಭೇಟಿ ಮಾಡಿತು. ಭಾರತ ತಂಡದ ಕೋಚ್ ಗೌತಮ್ ಗಂಭೀರ್, ಯುನೈಟೆಡ್‌ನ ಹೊಸ ವ್ಯವಸ್ಥಾಪಕ ಆರ್ಬೆನ್ ಅಮೋರಿಮ್ ಸೇರಿದಂತೆ ಉಭಯ ತಂಡಗಳ ಆಟಗಾರರು ಜೆರ್ಸಿ ಬದಲಾಯಿಸಿಕೊಂಡರು. ಕಿಟ್ ಪ್ರಾಯೋಜಕ ಅಡಿಡಾಸ್ ನೇತೃತ್ವದ ಸಹಯೋಗದಲ್ಲಿ ಈ ಅಪರೂಪ ಕ್ಷಣ ಏರ್ಪಟ್ಟಿತು.
ಅಭಿಮಾನಿಗಳು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುವ ಕ್ಷಣದಲ್ಲಿ, ಭಾರತೀಯ ನಾಯಕ ಶುಭ್‌ಮನ್ ಗಿಲ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ನಾಯಕ ಬ್ರೂನೋ ಫೆರ್ನಾಂಡಿಸ್ ಜೆರ್ಸಿಗಳನ್ನು ಬದಲಾಯಿಸಿಕೊಂಡು ಒಟ್ಟಿಗೆ ಪೋಸ್ ನೀಡಿದರು.
ಕ್ರಿಕೆಟ್ ಆಡಿದ ಫುಟ್ಬಾಲ್ ಆಟಗಾರರು
ಟೀಮ್ ಇಂಡಿಯಾದ ಆಟಗಾರರ ಜತೆ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡ ಆಟಗಾರರು ಕ್ರಿಕೆಟ್ ಅಭ್ಯಾಸ ನಡೆಸಿದರು. ಮೊಹಮ್ಮದ್ ಸೀರಾಜ್ ಸೇರಿ ಕೆಲ ಬೌಲರ್‌ಗಳ ಎಸೆತಕ್ಕೆ ಫುಟ್ಬಾಲ್ ಆಟಗಾರರು ಬ್ಯಾಟ್ ಬೀಸಿ ಸಂತಸಪಟ್ಟರು. ಭಾರತೀಯ ಆಟಗಾರು ಫುಟ್ಬಾಲ್ ಆಡಿ ಸಂಭ್ರಮಿಸಿರು.