About Us Advertise with us Be a Reporter E-Paper

ಅಂಕಣಗಳು

ಬೆಳ್ಳಿ ಮೆರುಗಿನಲ್ಲಿ ಹರಡಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆಗಳು

- ಸುಧೀಂದ್ರ

ಕನ್ನಡ ಪುಸ್ತಕ ಪ್ರಾಧಿಕಾರ ಈ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು. ಪುಸ್ತಕ ಪ್ರಾಧಿಕಾರದ ಮೊದಲ ಮಹಿಳಾ ಅಧ್ಯಕ್ಷರಾಗಿರುವ ಡಾ.ವಸುಂಧರ ಭೂಪತಿ ಇತ್ತೀಚೆಗೆ ಬೆಹರೇನ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಹಾಗೆಯೇ ಪ್ರಾಧಿಕಾರದ ಮುಂದಿನ ಯೋಜನೆಗಳ ಕುರಿತು ಇಲ್ಲಿ ಮಾತನಾಡಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರ ಸ್ಥಾಪನೆಯಾಗಿದ್ದು: 1993ರಲ್ಲಿ ಕನ್ನಡ ಪುಸ್ತಕ ಸ್ಥಾಪನೆಯಾಯಿತು, ಆಗಿನ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯಿಲಿ ಅವರು ಕೇರಳಕ್ಕೆ ಭೇಟಿಕೊಟ್ಟಾಗ ಅಲ್ಲಿ ‘ರೈಟರ್ಸ್ ಗಿಲ್ಡ್’ ಎಂಬ ಸಹಕಾರಿ ಸಂಘ ಲೇಖಕರ ಪುಸ್ತಕಗಳನ್ನು ಪ್ರಕಟಿಸುತ್ತಿತ್ತು, ಅದನ್ನು ಗಮನಿಸಿದ ವೀರಪ್ಪ ಮೊಯಿಲಿ ಅವರು ಪುಸ್ತಕ ಪ್ರಾಧಿಕಾರವನ್ನು ಆರಂಭಿಸಿದರು. ಹಿರಿಯ ವಿದ್ವಾಂಸರಾದ, ಪ್ರೊ.ಎಲ್. ಎಸ್. ಶೇಷಗಿರಿರಾಯರು ಮೊದಲ ಅಧ್ಯಕ್ಷರಾದರು.

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಕುರಿತು: ಶೇ 50 ರ ರಿಯಾಯಿತಿ ಮಾರಾಟ ದರದಲ್ಲಿ ಪುಸ್ತಕ ಮಾರಾಟವನ್ನು ಪ್ರಾಧಿಕಾರದಿಂದ ಹಮ್ಮಿಕೊಳ್ಳಲಾಗಿದೆ. ಜನವರಿಯಲ್ಲಿ ಗಣರಾಜ್ಯೋತ್ಸವ, ತಿಂಗಳಿನಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಹಾಗೆಯೇ ನವೆಂಬರ್ ನಲ್ಲಿ ರಾಜ್ಯೋತ್ಸವದ ಅಂಗವಾಗಿ ವಿಶೇಷ ರಿಯಾಯಿತಿ ದರದಲ್ಲಿ ಕನ್ನಡ ಪುಸ್ತಕಗಳ ಮಾರಾಟವನ್ನು ಪ್ರಾಧಿಕಾರ ಹಮ್ಮಿಕೊಂಡಿದೆ. ಈ ರಿಯಾಯಿತಿ ಮಾರಾಟಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು. ಕನ್ನಡ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳನ್ನು ಖರೀದಿಸಿದರು. ರಿಯಾಯಿತಿ ಮೇಳದಲ್ಲಿ ಅತಿ ಹೆಚ್ಚು ಪುಸ್ತಕ ಖರೀದಿಸಿದ ಓದುಗರನ್ನು ಅಭಿನಂದಿಸಲಾಯಿತು.

ಆನ್ ಲೈನ್‌ನಲ್ಲಿ ಪುಸ್ತಕಗಳ ಮಾರಾಟ ನಡೆದದ್ದು: ಪ್ರಾಧಿಕರದ ವೆಬ್ ಸೈಟ್‌ಅನ್ನು ಪ್ರಸಕ್ತ ವಿದ್ಯಮಾನಕ್ಕೆ ತಕ್ಕಂತೆ ಉನ್ನತೀಕರಿಸಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಪುಸ್ತಕಾಭಿರುಚಿಯನ್ನು ಹೆಚ್ಚಿಸಲು ಬಳಕೆ ಮಾಡಿಕೊಳ್ಳಲು ಕಾಲಮಾನಕ್ಕೆ ತಕ್ಕಂತೆ ಪರಿಷ್ಕರಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಪ್ರಾಧಿಕಾರ ಪ್ರಕಟಿತ ಪುಸ್ತಕಗಳನ್ನು ಆನ್ ಲೈನ್ ಮೂಲಕ ಆಸಕ್ತರಿಗೆ ತಲುಪಿಸುವ ಅಗತ್ಯವಿರುವಂತೆ ಸಿರಿಗನ್ನಡ ಮಾರಾಟ ಮಳಿಗೆಯ ತಂತ್ರಜ್ಞಾನವನ್ನು ಪರಿಷ್ಕರಿಸಲಾಗಿದೆ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಪುಸ್ತಕಗಳ ಮಾರಾಟ ಆನ್ ಲೈನ್ ಮೂಲಕ ಸಾರ್ವಜನಿಕರು ಈಗಾಗಲೇ ಖರೀದಿಸುತ್ತಿದ್ದಾರೆ.

ವೆಬ್ ಸೈಟ್ ನಲ್ಲಿ ಎಲ್ಲಾ ಪುಸ್ತಕಗಳ ಸಂಕ್ಷಿಪ್ತ ಮಾಹಿತಿಯನ್ನು ಮುದ್ರಿಸಲಾಗಿದೆ. ಮನೆಯಲ್ಲೇ ಕುಳಿತು ಬುಕ್ ಅವರ ಮನೆಬಾಗಿಲಿಗೆ ಪುಸ್ತಕ ತಲುಪಿಸುವ ಸೇವೆ ನೀಡಲಾಗಿದೆ.

ನಿಮ್ಮ ಆಡಳಿತ ಅವಧಿಯಲ್ಲಿ ಪ್ರಾರಂಭವಾದ ಕೆಲಸಗಳು: ‘ಲೋಕ ಕಾಣದ ಲೋಕ’ ಎಂಬ ಮಹಿಳೆಯರ ಕಮ್ಮಟ. ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಒಗ್ಗೂಡಿಸಿ, ಒಂದು ಕಮ್ಮಟವನ್ನು ಏರ್ಪಡಿಸಿ, ಅವರ ಸಮಸ್ಯೆಯನ್ನು ಕುರಿತಾದ ವಿಚಾರ ಸಂಕಿರಣ, ಸಂವಾದ ಅಥವ ಒಂದು ಲೇಖನವನ್ನು ಬರೆಯಿಸಿ, ಆ ಕಮ್ಮಟದಲ್ಲಿ ಬೆಳಕಿಗೆ ಬಂದ ವಿಚಾರವನ್ನು ಪುಸ್ತಕ ರೂಪದಲ್ಲಿ ಹೊರತರುವ ಯೋಜನೆ ನಡೆಯುತ್ತಿದೆ.

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ‘ಅಚ್ಚು ಪುಸ್ತಕ’ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಅವರ ನೆಚ್ಚಿನ ಪುಸ್ತಕ ಕುರಿತು ಚರ್ಚೆಯನ್ನು ಏರ್ಪಡಿಸುವ ಮೂಲಕ ಅವರ ಪುಸ್ತಕಾಭಿರುಚಿಯನ್ನು ಹೆಚ್ಚಿಸಲು ಕೆಲಸ ಅರಂಭವಾಗಿದೆ. ಅಲ್ಲದೇ ‘ಜಾಣ ಜಾಣೆ’ಯರ ಬಳಗ ಯೋಜನೆ ಮೂಲಕ ಕಾಲೇಜಿನಿಂದ ಕಾಲೇಜಿಗೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಿಸುವ ಮೂಲಕ ಪುಸ್ತಕಾಭಿರುಚಿಯನ್ನು ಹೆಚ್ಚಿಸಲಾಗುತ್ತದೆ. ಈಗಾಗಲೇ ಈ ಎರಡು ಯೋಜನೆಗಳು ಕಾರ್ಯರೂಪದಲ್ಲಿದ್ದು, ವಿದ್ಯಾರ್ಥಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರಾಧಿಕಾರದ ಇನ್ನಿತರ ಕರಡಚ್ಚು ಶಿಬಿರ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳ ಸ್ಥಾಪಿಸಿ, ಯುವ ಬರಹಗಾರರ ಚೊಚ್ಚಲ ಕೃತಿಗೆ 15000 ರು. ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದನ್ನು 30 ರಿಂದ 50 ಜನರಿಗೆ ಹೆಚ್ಚಿಸಲಾಗಿದೆ. ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಸಾಹಿತಿಗಳ ಕೃತಿಗೆ 35000 ಪ್ರೋತ್ಸಾಹ ಧನವನ್ನು ನೀಡಲಾಗುವುದು, ಮುದ್ರಕರಿಗೆ ಮುದ್ರಣ ಸೊಗಸು ಬಹುಮಾನವನ್ನು ಆರಂಭಿಸಲಾಗಿದೆ.

ಬೆಳ್ಳಿ ಹಬ್ಬದ ಸಂಭ್ರಮದ ಬಗ್ಗೆ: ಕನ್ನಡ ಪುಸ್ತಕ ಪ್ರಾಧಿಕಾರದ ಬೆಳ್ಳಿ ಹಬ್ಬದ ವರ್ಷದಲ್ಲಿ, ನಾನು ತುಂಬಾ ಸಂತೋಷ ತಂದಿದೆ. ಕರ್ನಾಟಕದ ಎಲ್ಲ ಪ್ರಕಾಶಕರನ್ನು ಒಗ್ಗೂಡಿಸಿ ಪ್ರಕಾಶಕರ ಪ್ರಥಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು, ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿಯವರ ಅಧ್ಯಕ್ಷತೆಯಲ್ಲಿ ಅದು. ಜರುಗಿತು. ಇದೇ ಸಂದರ್ಭದಲ್ಲಿ ಪ್ರಕಾಶಕರ ಕೈಪಿಡಿ ಮತ್ತು ಹೆಜ್ಜೆ ಗುರುತು ಕೈಪಿಡಿಗಳನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಬೈಲಾ ಗೆ ಸರಕಾರದ ಅನುಮೋದನೆ ಪಡೆಯಲಾಯಿತು. ಪ್ರಕಾಶಕರಿಗೆ ಜಿಎಸ್‌ಟಿ ಬಗ್ಗೆ ವಿಚಾರ ಸಂಕಿರಣ, ಮುದ್ರಣ, ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಯಾವ ಯಾವ ಕಾರ್ಯಕ್ರಮಗಳನ್ನು ಪ್ರಾಧಿಕಾರ ಹಮ್ಮಿಕೊಂಡಿದೆ ?
ದಾವಣಗೆರೆಯಲ್ಲಿ ಡಾ. ಎಲ್ ಹನುಮಂತಯ್ಯನವರ ಅಧ್ಯಕ್ಷತೆಯಲ್ಲಿ ದಲಿತ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಯಿತು. ಗಡಿನಾಡಿನ ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ, ರಾಜ್ಯದ ಆರು ಕಡೆ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ವಿಶ್ವ ಪುಸ್ತಕ ದಿನಾಚರಣೆ ರಾಜ್ಯದ 18 ಕಡೆ ಕಾರ್ಯಕ್ರಮ. ದೇಸಿ ಜ್ಞಾನ ಪರಂಪರೆ ಕಮ್ಮಟ, ಪುಸ್ತಕೋದ್ಯಮದ ಬಗ್ಗೆ ಮೂರು ಬೃಹತ್ ಸಂಪುಟಗಳನ್ನು 19,20,21 ಶತಮಾನ ಪ್ರಕಟಿಸುವ ಯೋಜನೆ ಕೈಗೆತ್ತಿಕೊಂಡಿದ್ದೇವೆ.

ಸಾಹಿತಿಗಳ ಸಮಗ್ರ ಸಾಹಿತ್ಯ ಸೇರಿದಂತೆ, ವಿವಿಧ ಪ್ರಕಾರ ಪುಸ್ತಕಗಳ ಮುದ್ರಣ. ಇ – ಬುಕ್ ‘‘ಇಂದಿರಾ ಬಾಯಿ’’ ಕನ್ನಡದ ಪ್ರಥಮ ಕಾದಂಬರಿ ಮುದ್ರಿಸಲಾಗಿದೆ. ದನಿ ಹೊತ್ತಿಗೆ, ಶ್ರಾವ್ಯ ಪುಸ್ತಕ ಪಂಪ ಭಾರತ, ಆದಿ ಪುರಾಣದ ಆಯ್ದ ಪ್ರಸಂಗಗಳು,ಮಾಸ್ತಿ, ನರಂಜನ, ಕಥೆಗಳು, ಬೀಛಿ ಅವರ ಹಾಸ್ಯ ಲೇಖನಗಳು,ಪ್ರಾಧಿಕಾರ ನಡೆದು ಬಂದ ಹಾದಿ ಕುರಿತು ಅಧ್ಯಕ್ಷರುಗಳ ಸಾಕ್ಷ ಚಿತ್ರ, ಮನೆ ಮನೆಗೆ ಪುಸ್ತಕ, ಪುಸ್ತಕ ಜಾತ್ರೆ, ಪುಸ್ತಕ ಸೂಚಿ 2017 , ಕುರಿತು ಸರ್ಟಿಫಿಕೇಟ್ ಮತ್ತು ಡಿಪ್ರೋಮೊ ಕೋರ್ಸನ್ನು ವಿಶ್ವ ವಿದ್ಯಾಲಯಗಳಲ್ಲಿ ಆಯೋಜಿಸುವುದು, ಪುಸ್ತಕ ನೀತಿ ತರುವ ಬಗ್ಗೆ ಯೋಚನೆ, ಈ ವಿಷಯಕ್ಕೆ ಸಂಬಂಧ ಪಟ್ಟಹಾಗೆ ಸರ್ಕಾರವನ್ನು ಒತ್ತಾಯ ಮಾಡಲಾಗುವುದು. ಆಗ ಪ್ರಕಾಶಕರಿಂದ ಲೇಖಕರಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ. ಪುಸ್ತಕೋದ್ಯಾನ ಆರಂಭಿಸ ಬೇಕೆಂಬ ಬಹು ದೊಡ್ಡ ಕನಸು ನನ್ನದು, ಈಗಾಗಲೇ ಇದ್ದಕ್ಕೆ ಮನವಿ ಸಲ್ಲಿಸಲಾಗಿದೆ.

ಬೆಹರಿನ್ನಲ್ಲಿ ಕನ್ನಡ ಪ್ರೀತಿ ಹೇಗಿತ್ತು?
ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಬೆಹರಿನ್ ಸಂಘ ಜೊತೆಯಾಗಿ, ಬೆಹರಿನ್ನಲ್ಲಿ 2 ದಿನಗಳ ಕಾಲ ಕನ್ನಡ ಸಾಹಿತ್ಯ ಸಮ್ಮೇಳನ ತುಂಬ ಅರ್ಥಪೂರ್ಣ ಯಶಸ್ವಿಯಾಗಿ ನಡೆಯಿತು. ಕನ್ನಡ ಭಾಷೆ ಗೆ ವಿಶ್ವ ಮನ್ನಣೆ ದೊರೆತದರ ಬಗ್ಗೆ ಗೋಷ್ಠಿ ಏರ್ಪಡಿಸಲಾಗಿತ್ತು. ಹಿರಿಯ ಸಾಹಿತಿಗಳ ಜೊತೆ ಸಂವಾದ, ಕವಿ ಗೋಷ್ಠಿ, ಹಾಗೇ ಗಲ್‌ಫ್ ಕನ್ನಡಿಗರ ಸಾಧನೆ , ಸಮಸ್ಯೆಗಳನ್ನ ಆಲಿಸಲಾಯಿತು. ಅಲ್ಲಿನ ಕನ್ನಡ ಸಂಘದ ಪದಾಧಿಕಾರಿಗಳನು ನಮ್ಮನ್ನು ಆದರದಿಂದ ನೋಡಿಕೊಂಡರು.3 ನೇದಿನ ಬೆಹರಿನ್ನ ಪ್ರವಾಸಮಾಡಿದೆವು.

ಬೆಹರಿನ್ನಲ್ಲಿ ಜನಸಂಖ್ಯೆ 15 ಲಕ್ಷ ಸುಮಾರು ಅರ್ಧದಷ್ಟು ಜನ ಭಾರತೀಯರು ಆದರೆ 25000 ರಷ್ಟು ಮಾತ್ರ ಕನ್ನಡಿಗರು ವಾಸವಾಗಿದ್ದಾರೆ. 1915 ಬೆಹರಿನ್ನಲ್ಲಿ, ಎಲ್ಲಾ ಭಾರತೀಯರು ಸೇರಿ ಇಂಡಿಯನ್ ಕ್ಲಬ್ ಮಾಡಿಕೊಂಡಿದ್ದಾರೆ. ಒಂದು ಸಾಮ್ಯತೆ ಅಂದರೆ ಬೆಹರಿನ ಇಂಡಿಯನ್ ಕ್ಲಬ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದದ್ದು 1915 ರಲ್ಲೇ. ಕನ್ನಡ ಸಾಹಿತ್ಯ ಪರಿಷತ್ತಿನ 100 ವರ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನವನ್ನ ಆಯೋಜಿಸಿತ್ತು.

ಅಲ್ಲಿನ ಎತ್ತರದ ಕಟ್ಟಡ ಫಿನಾನ್ಸ್ ಅದರ ವಿನ್ಯಾಸಕರು ಕನ್ನಡಿಗರು ತುಂಬಾ ಇಂಜಿನಿಯರ್‌ಸ್ ಕನ್ನಡಿಗರು, ಅಲ್ಲಿನ ಕನ್ನಡ ಸಂಘ, ಬೆಹರಿನ್ ಕನ್ನಡ ಭವನವನ್ನು ಕಟ್ಟಲು ಮುಂದಾಗಿದೆ, ಅದಕ್ಕೆ ಅವರು ಕರ್ನಾಟಕ ಸರ್ಕಾರದ ಸಹಾಯವನ್ನು ಬಯಸುತ್ತಿದ್ದಾರೆ.  ಕನ್ನಡ ಕಲಿಸಬೇಕು ಎನ್ನುವುದು ಇಲ್ಲಿನ ಶಾಲೆಗಳಿಂದ ಸಾಧ್ಯವಾಗುತ್ತಲ್ಲ ಆದರೆ ಅಲ್ಲಿನ ಏಶಿಯನ್ ಶಾಲೆಯಲ್ಲಿ 8 ನೇ ತರಗತಿಯಿಂದ ಕನ್ನಡವನ್ನು ಕಲಿಸಲಾಗುತ್ತದೆ. ಪ್ರತಿ ಕನ್ನಡದ ಮಗು ಕನ್ನಡ ಕಲಿಯಲೇಬೇಕು ಇದಂತು ನಿಜಕ್ಕೂ ಹೆಮ್ಮೆಯ ಸಂಗತಿ.

ಇನ್ನು ಹೋಟೆಲ್ ಗೌರಿ ಕೃಷ್ಣ, ವನಿತ ಪಾರ್ಲರ್ ಕನ್ನಡ ಫಲಕ ನೋಡಿ ನಮಗಂತು ಸಂತೋಷವಾಯಿತು. ಕರ್ನಾಟಕದಲ್ಲಿ ಕನ್ನಡ ಶಾಲೆ ಮುಚ್ಚುತ್ತಿರುವುದಕ್ಕೆ ಗಲ್ಫ್ ಕನ್ನಡಿಗರು ಕಳವಳ ವ್ಯಕ್ತ ಪಡಿಸಿದರು
ಶಾಲೆಗಳನ್ನು ಉಳಿಸಿಕೊಳ್ಳಲು ಸಹಕರಿಸುವುದಾಗಿ ಹೇಳಿದರು. ಅಲ್ಲಿ ಕೆಲಸ ಮಾಡಲು ಇಂಗ್ಲೀಷ್ ಮುಖ್ಯವಲ್ಲ ಎಂದು ತಿಳಿದ ನಮಗೆ ಖುಷಿಕೊಟ್ಟಿತು. ಒಟ್ಟಾರೆಯಾಗಿ ಬೆಹರಿನ್ ಸಾಹಿತ್ಯ ಸಮ್ಮೇಳನ ಖುಷಿ ನೀಡಿದೆ.

Tags

Related Articles

Leave a Reply

Your email address will not be published. Required fields are marked *

Language
Close