About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಭಾರತದಲ್ಲಿ ಗೂಢಚಾರಿಕೆ ಶಂಕೆ: ಚೀನಾ ಮೂಲದ ವ್ಯಕ್ತಿ ಅರೆಸ್ಟ್

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಚೀನಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಾರ್ಲಿಂ ಪೆಗ್(39) ಬಂಧಿತ ಆರೋಪಿ. ಈತನಿಂದ ಭಾರತೀಯ ಪಾಸ್​ಪೋರ್ಟ್​, ಆಧಾರ್​ ಕಾರ್ಡ್​, 3.5 ಲಕ್ಷ ರೂ. ನಗದು, ಎಸ್​ಯುವಿ ಕಾರು ಮತ್ತು ಮಹತ್ವದ ದಾಖಲೆಗಳನ್ನು, 2000 ಅಮೆರಿಕನ್​ ಡಾಲರ್​ ಮತ್ತು 2000 ಥಾಯ್​ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.  ಬಂಧಿತ ಚಾರ್ಲಿ ಪೆಂಗ್‍ನನ್ನು ಸೆಪ್ಟೆಂಬರ್ 13ರಂದು ದೆಹಲಿಯ ಮಂಜು ಕಾ ತಿಲ್ಲಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. ಈತನನ್ನು ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಹಾಜರುಪಡಿಸಿದ ಪೊಲೀಸರು, ಈತ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ವಿಚಾರಣೆಗೆ ತಮ್ಮ ಕಸ್ಟಡಿಗೆ ವಹಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಈತನನ್ನು ಪೊಲೀಸರ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಚೀನಾದ ನಂಜಿಂಗ್​ ಪ್ರದೇಶಕ್ಕೆ ಸೇರಿದ ಈತ ತರಬೇತಿ ಪಡೆದ ನುರಿತ ಗೂಢಚಾರನಾಗಿದ್ದಾನೆ ಎನ್ನಲಾಗಿದೆ. 5 ವರ್ಷಗಳ ಹಿಂದೆ ಭಾರತಕ್ಕೆ ಬಂದು, ದೆಹಲಿಯಲ್ಲಿ ನೆಲೆಸಿದ್ದ. ಅಲ್ಲದೆ ಈತ ಪದೇಪದೆ ಹಿಮಾಚಲ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದ. ಮಾತ್ರವಲ್ಲ ಈತ ಭಾರತೀಯ ಯುವತಿಯನ್ನು ವಿವಾಹವಾಗಿ, ಮಣಿಪುರದ ವಿಳಾಸದ ಆಧಾರದ ಮೇಲೆ ಪಾಸ್​ಪೋರ್ಟ್​ ಪಡೆದಿದ್ದ. ಜೊತೆಗೆ ವಿದೇಶಿ ಕರೆನ್ಸಿ ವಿನಿಮಯ ಕಚೇರಿ ಹೊಂದಿದ್ದ. ಹವಾಲಾ ದಂಧೆಯಲ್ಲೂ ಭಾಗಿಯಾಗಿದ್ದ ಎಂಬ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ.

ಇನ್ನು ಮಣಿಪುರದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಚೀನಾದ 55 ವರ್ಷದ ಕಿನ್ ಮಿನ್ ಕ್ಸಿವ್ ಕ್ಸಿಯಾಂಗ್ ಎಂಬವನನ್ನು ಬಂಧಿಸಲಾಗಿತ್ತು.

Tags

Related Articles

Leave a Reply

Your email address will not be published. Required fields are marked *

Language
Close