About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಶ್ರೀಲಂಕಾ: ಗೋತಾ ಹೊಡೆದ ರಾಜಪಕ್ಸೆ ಕನಸು

ಕೊಲಂಬೋ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾಗೆ ದೊಡ್ಡ ಹಿನ್ನಡೆಯಾಗುವ ಬೆಳವಣಿಗೆಯೊಂದರಲ್ಲಿ, ನೂತನ ಪ್ರಧಾನಿ ಮಹಿಂದಾ ರಾಜಪಕ್ಸೆ ಸರಕಾರದ ವಿರುದ್ಧವಾಗಿ ದ್ವೀಪರಾಷ್ಟ್ರ ಮತದಾನ ಮಾಡಿದೆ.

ಈ ಕುರಿತು ಮಾತನಾಡಿದ ಕರು ಜಯಸೂರ್ಯ, “ಸಂಸತ್ತಿನಲ್ಲಿ ಬಂದ ದನಿಯ ಆಧಾರವಾಗಿ, ಸರಕಾರಕ್ಕೆ ಯಾವುದೇ ಬಹುಮತವಿಲ್ಲ ಎಂದು ಘೋಷಿಸುತ್ತಿದ್ದೇನೆ. ಮಹಿಂದಾ ರಾಜಪಕ್ಸೆ ವಿರುದ್ಧ ಅವಿಶ್ವಾಸವನ್ನು ಸಂಸತ್ತು ಎತ್ತಿ ಹಿಡಿದಿದೆ” ಎಂದು ಹೇಳಿದ್ದಾರೆ.

ಸಂಸತ್ತನ್ನು ವಿಸರ್ಜಿಸಿ, ದಿಢೀರ್‌ ಚುನಾವಣೆ ಘೋಷಿಸಿದ್ದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾರ ನಡೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ತಂದಿತ್ತು. ಸಂಸತ್ತನ್ನು ವಿಸರ್ಜಿಸಿದ್ದನ್ನು ಪ್ರಶ್ನಿಸಿ 13 ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ಇವುಗಳ ಪೈಕಿ ಸ್ವತಂತ್ರ ಚುನಾವಣಾ ಆಯೋಗದ ರತ್ನಜೀವನ್‌ ಹೂಲೆ ಸಹ ಒಬ್ಬರು.

ಅಕ್ಟೋಬರ್‌ 26ರಂದು ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ, ಪ್ರಧಾನ ಮಂತ್ರಿ ರಾನಿಲ್‌ ವಿಕ್ರಮಸಿಂಘೆರನ್ನು ಉಚ್ಛಾಟಿಸಿದ್ದ ಅಧ್ಯಕ್ಷ ಸಿರಿಸೇನಾ, ಮಹಿಂದಾ ರಾಜಪಕ್ಸೆಯನ್ನು ನೂತನ ಪ್ರಧಾನಿ ಎಂದು ಘೋಷಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close