ವಿಶ್ವವಾಣಿ

ಶ್ರೀರಾಮ ಚಂದ್ರರೂ ತಮ್ಮ ಪತ್ನಿಯನ್ನು ಶಂಕಿಸಿದ್ದರು: ಕಾಂಗ್ರೆಸ್‌ ಸಂಸದ ಹುಸೇನ್‌

ದೆಹಲಿ: ತ್ರಿವಳಿ ತಲಾಖ್‌ ನಿಷೇಧಕ್ಕೆ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿರುವ ಕಾಂಗ್ ಇದೇ ವಿಚಾರವಾಗಿ ಕೇಂದ್ರ ಸರಕಾರದ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸುತ್ತಿದೆ.

ಈ ಕುರಿತಂತೆ ಮಾತನಾಡಿದ ಕಾಂಗ್ರೆಸ್‌  ಸಂಸದ ಹುಸೇನ್‌ ದಲ್ವಾಯ್‌ , “ಶ್ರೀರಾಮಚಂದ್ರನೂ ತನ್ನ ಪತ್ರಿ ಸೀತೆಯನ್ನು ಅನುಮಾನದಿಂದ ನೋಡಿದ್ದ. ಕೇವಲ ಮುಸ್ಲಿಮರಲ್ಲಿ ಮಾತ್ರವಲ್ಲ, ಹಿಂದೂ, ಸಿಖ್ಖರು, ಕ್ರೈಸ್ತರ ಸೇರಿದಂತೆ ಎಲ್ಲ ಸಮುದಾಯಗಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ” ಎಂದಿದ್ದಾರೆ.