About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಶ್ರೀ ರಾಮ ವೈಷ್ಣವರಿಗೆ ಸೀಮೀತವಲ್ಲ: ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ

ಮೈಸೂರು: ಹಿಂದೂಗಳ ಆರಾಧ್ಯ ದೈವವಾಗಿರುವ ರಾಮ ಭಾರತೀಯ ಸಂಸ್ಕೃತಿಯ ಪ್ರತೀಕ. ರಾಮ ಬರೀ ವೈಷ್ಣವರಿಗೆ ಮಾತ್ರ ಮೀಸಲಲ್ಲ ಎನ್ನುವುದನ್ನು ಮನಗಾಣಬೇಕು ಎಂದು ಹಿರಿಯ ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ತಿಳಿಸಿದರು.

ಕರಾಮುವಿ ಕಾವೇರಿ ನಡೆದ ಡಾ. ಸುಧಾಕರ್ ಹೊಳ್ಳಿ ಅವರ ‘ರಾಮಮಂದಿರ ಮತ್ತು ಸುಗ್ರೀವಾಜ್ಞೆ ಸಾಧ್ಯತೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ದೇಶದ ಇತಿಹಾಸದಲ್ಲಿ ಎಲ್ಲಿಯೂ ಮಸೀದಿ ಕೆಡವಿ ದೇವಾಲಯ ಕಟ್ಟಿದ ನಿರ್ದಶನವಿಲ್ಲ. ಆದರೆ, ದೇವಸ್ಥಾನ ಕೆಡವಿ ಮಸೀದಿ ಕಟ್ಟಿರುವುದಕ್ಕೆ ನಮ್ಮ ಮುಂದೆ ಅನೇಕ ಜೀವಂತ ಸಾಕ್ಷಿಗಳಿವೆ. ಟಿಪ್ಪು ಸುಲ್ತಾನ್ ಹಿಂದೂಗಳ ಕೊಲೆ ಮಾಡುವಂತೆ ಹೇಳಿ ಕಲ್ಲಿಕೋಟೆ ಸೇನಾಧಿಪತಿಗೆ ಬರೆದಿರುವ ಪತ್ರ ಇಂಗ್ಲೆಂಡಿನ ವಸ್ತು ಸಂಗ್ರಹಾಯದಲ್ಲಿದೆ. ಇತಿಹಾಸವನ್ನು ಹೇಳುವವರೂ ವಾಸ್ತವ ಮತ್ತು ಸತ್ಯವನ್ನು ಎಂದು ಚಾಟಿ ಬೀಸಿದರು.

ರಾಮ-ಸೀತೆ ಹೆಂಡ ಕುಡಿಯುತ್ತಿದ್ದರು. ಮಾಂಸಹಾರಿಗಳೆಂದು ಪ್ರೊ. ಕೆ.ಎಸ್.ಭಗವಾನ್ ಹೇಳುತ್ತಿದ್ದಾರೆ. ಈಗಾಗಲೇ ಅವರ ರಕ್ಷಣೆಗೆ 60 ಲಕ್ಷ ರು. ಖರ್ಚು ಆಗಿದೆಯಂತೆ. ಹೀಗಿದ್ದರೂ ಅವರ ಪ್ರಾಣಕ್ಕೆ ತೊಂದರೆಯಾಗಬಾರದು. ಚಂಪಾ ಅವರು, ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ. ನಾನು ಎಡನೂ ಅಲ್ಲ, ಬಲನೂ ಅಲ್ಲ ವಸ್ತುನಿಷ್ಠ ಮಾತನಾಡುವ ಸತ್ಯಪಂಥೀಯ ಎಂದು ನೇರವಾಗಿ ನುಡಿದರು.

ಡಾ.ಸುಧಾಕರ್ ಹೊಳ್ಳಿ ಅವರ ‘ರಾಮ ಮಂದಿರ ಮತ್ತು ಸುಗ್ರೀವಾಜ್ಞೆ ಸಾಧ್ಯತೆ’ ಕೃತಿ ಬಿಡುಗಡೆ ಸಮಾರಂಭ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಉದ್ಘಾಟಿಸಿದರು.

ಬಾಬರ್ ಭಗವಾನ್: ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಾಂಡ ಕಾರ್ಯಪ್ಪ ಮಾತನಾಡಿ, ಭಗವಾನ್ ಅವರನ್ನು ಬಾಬರ್ ಎಂದು ಗೌರವದಿಂದ ಕರೆಯೋಣ. ಚಂಪಾ ಮತ್ತು ಭಗವಾನ್ ಇಬ್ಬರಿಗೂ ಭಾಷೆಯೇ ಗೊತ್ತಿಲ್ಲ. ಉರುಸ್ ಆಚರಿಸುವ ನಮಗೇ ಜಾತ್ಯಾತೀತರು ಸಹಿಷ್ಣುತೆ ಬಗ್ಗೆ ಹೇಳಿಕೊಡಲು ಬರುತ್ತಾರೆ. ಸಹಿಷ್ಣುತೆ ಪದವೇ ಕ್ರಿಶ್ಚಿಯನಿಟಿಯಿಂದ ಬಂದದ್ದು. ಕೇಂದ್ರದಲ್ಲಿ ತಾಯಿ-ಮಗ, ರಾಜ್ಯದಲ್ಲಿ ತಂದೆ-ಮಗ ಆಡಳಿತವಿದೆ. ಇವರು ರಾಷ್ಟ್ರೀಯತೆ ಪರವಾಗಿರುವವರನ್ನು ಟೀಕೆ ಮಾಡುತ್ತಾರೆ ಎಂದು ತಿಳಿಸಿದರು.

ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರಿವಾಜ್ಞೆ ತರಲು ಕೇಂದ್ರಸರಕಾರಕ್ಕೆ ಇದೆ. ಆದರೆ, ಆರು ತಿಂಗಳಲ್ಲಿ ಚುನಾವಣೆ ಬರುವ ಹಿನ್ನೆಲೆಯಲ್ಲಿ ಮತ್ತು ರಾಜಕೀಯ ಕಾರಣಗಳಿಗಾಗಿ ಸುಗ್ರಿವಾಜ್ಞೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ ಎಂದು ವಕೀಲ ಪಿ.ಕೃಷ್ಣಮೂರ್ತಿ ಹೇಳಿದರು.

Tags

Related Articles

Leave a Reply

Your email address will not be published. Required fields are marked *

Language
Close