About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಹಳಿಗೆ ಬಂತು ಶ್ರೀ ರಾಮಾಯಣ ಎಕ್ಸ್‌ಪ್ರೆಸ್

ದೆಹಲಿ: ದೇಶದ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ, ರಾಮಾಯಣ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದೆ.

ರಾಮಾಯಣ ಹಾಗು ಶ್ರೀರಾಮಚಂದ್ರರ ಜೀವನಕ್ಕೆ ಸಂಬಂಧಿಸಿದಂತೆ ದೇಶದ ಅನೇಕ ಕಡೆ ಇರುವ ಮಹತ್ವದ ಜಾಗಗಳನ್ನು ಸಂದರ್ಶಿಸುವ ಅವಕಾಶವನ್ನು ಕೊಡಮಾಡುವ 16 ದಿನಗಳ ಪ್ಯಾಕೇಜ್‌ ಪ್ರವಾಸವನ್ನು ರೈಲ್ವೇ ಇಲಾಖೆ ನಡೆಸಿಕೊಡಲಿದೆ. ಇದೇ ಸಂದರ್ಭ ಶ್ರೀಲಂಕಾದಲ್ಲಿರುವ ಪುರಾಣ ಪ್ರಸಿದ್ಧ ಪ್ರದೇಶಗಳಿಗೂ ಪ್ರವಾಸಿಗರನ್ನು ಕರೆದೊಯ್ಯಲಾಗುವುದು.

ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌ ಎಂದು ಕರೆಯಲಾಗುವ ಈ ರೈಲು ದೆಹಲಿಯಲ್ಲಿ ಪ್ರಯಾನ ಅರಂಭಿಸಿ, ಮೊದಲ ನಿಲುಗಡೆಯನ್ನು ಅಯೋಧ್ಯೆಯಲ್ಲಿ ಮಾಡಲಿದೆ. ಬಳಿಕ ಹನುಮ ಘರ್‌, ರಾಮ್‌ಕೋಟ್‌, ಕನಕ ಭವಾನಿ ಮಂದಿರ, ನಂದಿಗ್ರಾಮ, ಸೀತಾಮಾರ್ಹಿ, ಜನಕಪುರ, ವಾರಣಾಸಿ, ಪ್ರಯಾಗ, ಶೃಂಗ್ವರ್‌ಪುರ, ಚಿತ್ರಕೂಟ, ನಾಶಿಕ್‌, ಹಂಪಿ ಹಾಗು ರಾಮೇಶ್ವರಮ್‌ಗಳಿಗೆ ಭೇಟಿ ನೀಡಲಾಗುವುದು.

ಪ್ರಾವಾಸದಲ್ಲಿ ಭಾರತ ಹಾಗು ಶ್ರೀಲಂಕಾ ಎಂಬ ಎರಡು ಪ್ರತ್ಯೇಕ ಭಾಗಗಳಿವೆ.

ರೈಲಿನಲ್ಲಿ ಒಟ್ಟಾರೆ 800 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಇದೆ.

ಶ್ರೀಲಂಕಾದ ಭಾಗಕ್ಕೆ ಹೋಗುವವರು ಚೆನ್ನೈನಿಂದ ಕೊಲಂಬೋಗೆ ವಿಮಾನವೇರಬಹುದಾಗಿದೆ. ಇದಕ್ಕೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ https://www.irctc.co.in/nget/train-searchಗೆ ಭೇಟಿ ನೀಡಬಹುದಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close