ವಿಶ್ವವಾಣಿ

ಮರೀನಾ ಬಳಿ ಜಾಗ ಸಿಗದಿದ್ದಲ್ಲಿ ಸತ್ತೇ ಹೋಗುತ್ತಿದ್ದೆ: ಸ್ಟಾಲಿನ್‌

ಚೆನ್ನೈ: ತಮ್ಮ ತಂದೆ ಎಂ ಕರುಣಾನಿಧಿರನ್ನು ಚೆನ್ನೈನ ಮರಿನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ನೀಡದೇ ಹೋಗಿದ್ದಲ್ಲಿ ತಾವು ಅಲ್ಲೇ ಸತ್ತು ಹೋಗುತ್ತಿದ್ದದ್ದಾಗಿ ಡಿಎಂಕೆ ಪಕ್ಷದ ಕಾರ್ಯಧ್ಯಕ್ಷ ಎಂ ಕೆ ಸ್ಟಾಲಿನ್‌ ತಿಳಿಸಿದ್ದಾರೆ.

ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟಾಲಿನ್‌, ಆಗಸ್ಟ್‌ 7ರಂದು ಮುಖ್ಯಮಂತ್ರಿ ಪಳನಿಸ್ವಾಮಿರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದರು.

“ಕರುಣಾನಿಧಿ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬದುಕಿರಲಿದ್ದಾರೆ ಎಂದು ವೈದ್ಯರು ತಿಳಿಸಿದರು. ಈ ಸಂದರ್ಭದಲ್ಲಿ, ಮರೀನಾ ಬೀಚ್‌ನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸುವುದು ಹೇಗೆ ಎಂದು ಆಲೋಚನೆ ಮಾಡಲು ತೊಡಗಿದೆವು. ಮುಖ್ಯಮಂತ್ರಿಯನ್ನು ಖುದ್ದು ನಾನೇ ಭೇಟಿಯಾಗಬಾರದೆಂದು ಪಕ್ಷದ ಹಿರಿಯ ನಾಯಕರು ನನಗೆ ತಿಳಿಸಿದರು. ಆದರೆ ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟ ನಾನು ಖುದ್ದಾಗಿ ಮುಖ್ಯಮಂತ್ರಿ ಕಚೇರಿಗೆ ತೆರಳಿದೆ” ಎಂದು ಸ್ಟಾಲಿನ್‌ ತಿಳಿಸಿದ್ದಾರೆ.

“ಮುಖ್ಯಮಂತ್ರಿ ಪಳನಿಸ್ವಾಮಿ ಕೈಹಿಡಿದು, ನನ್ನ ತಂದೆಯ ಶವಸಂಸ್ಕಾರ ಮಾಡಲು ಮರೀನಾ ಬೀಚ್‌ ಬಳೀ ಅವಕಾಶ ಕೋರಿದೆ. ಆದರೆ ಮರೀನಾದಲ್ಲಿ ಅಂತ್ಯಸಂಸ್ಕಾರ ಮಾಡಲು ಕಾನೂನು ಅವಕಾಶ ನೀಡುವುದಿಲ್ಲ ಎಂದು ಪಳನಿಸ್ವಾಮಿ ತಿಳಿಸಿದರು. ಆದರೆ ನಾವೂ ಅಧಿಕಾರದಲ್ಲಿದ್ದ ಕಾರಣ, ಈ ವಿಚಾರವಾಗಿ ಏನನ್ನಾದರೂ ಮಾಡಬಹುದು ಎಂದೆ. ನಮ್ಮನ್ನು ಮನೆಯಿಂದ ಕಳುಹಿಸಲು, ಮನವಿಯನ್ನು ಪರಿಗಣಿಸುವುದಾಗಿ ಹೇಳಿದರು” ಎಂದು ಸ್ಟಾಲಿನ್‌ ತಿಳಿಸಿದ್ದಾರೆ.

“ಕರುಣಾ ಸಾವನ್ನು ಘೋಷಿಸಿದ ಬಳಿಕ ತಮ್ಮ ಪಕ್ಷದ ಹಿರಿಯ ನಾಯಕರು ಇನ್ನೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಜಾಗ ನೀಡಲು ಕೋರಿದರು, ಆದರೆ ಹತ್ತು ನಿಮಿಷದ ಬಳಿಕ ನನ್ನ ಬಳಿಗೆ ಬಂದ ಅವರೆಲ್ಲ, ಮರಿನಾದಲ್ಲಿ ಜಾಗ ನೀಡಲು ನಿರಾಕರಿಸಲಾಗಿದೆ ಎಂದು ತಿಳಿಸಿದರು” ಎಂದು ಸ್ಟಾಲಿನ್ ಹೇಳಿದ್ದಾರೆ.

“ಈ ಸಂದರ್ಭ ನನ್ನನ್ನು  ಭೇಟಿ ಮಾಡಿದ ವಕೀಲ ವಿಲ್ಸನ್‌, ವಿಚಾರವನ್ನು ಮದ್ರಾಸ್‌ ಹೈಕೋರ್ಟ್‌ನಲ್ಲಿ ಹೋರಾಡುವುದಾಗಿ ತಿಳಿಸಿದರು” ಎಂದು ಸ್ಟಾಲಿನ್‌ ವಿವರಿಸಿದ್ದಾರೆ.

ಹುತಾತ್ಮ ಯೋಧರ ಸ್ಮರಣಾರ್ಥ ರಾಷ್ಟ್ರೀಯ ಸ್ಮಾರಕ ನಿರ್ಮಾಣದ ವಿಚಾರವಾಗಿ ರಾಜಕೀಯ ಇಚ್ಛಾಶಕ್ತಿ ಮೂಡದ ಕಾರಣ, ಈ ಪರಿಕಲ್ಪನೆ ಇನ್ನೂ ಸಾಕಾರವಾಗುವ ಲಕ್ಷಗಣಗಳು ಕಾಣುತ್ತಿಲ್ಲ.