ಟಿಕೆಟ್ ಮಾಡಿದ್ದರೂ ನಿಂತೇ ಪ್ರಯಾಣ: ರೈಲ್ವೆಗೆ ದಂಡ

Posted In : ರಾಜ್ಯ

ಮೈಸೂರು: ಜೈಪುರ್- ಮೈಸೂರು ಎಕ್ಸ್ ಪ್ರೆಸ್​ನಲ್ಲಿ ಮಧ್ಯಪ್ರದೇಶದಿಂದ ಮೈಸೂರಿಗೆ ಬರಲು ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದರೂ, ಸೀಟ್ ಸಿಗದೆ 33 ಗಂಟೆಗಳ ಕಾಲ ಮೈಸೂರಿನ ಕುಟುಂಬ ನಿಂತೇ ಪ್ರಯಾಣ ಮಾಡಿದ ಹಿನ್ನೆಲೆ ಯಲ್ಲಿ ಇಲಾಖೆಗೆ 37 ಸಾವಿರ ರು. ದಂಡವನ್ನು ಗ್ರಾಹಕರ ನ್ಯಾಯಾಲಯ ವಿಧಿ ಸಿದೆ.

ಮೈಸೂರಿನ ಸಿದ್ಧಾರ್ಥ ಬಡಾವಣೆ ನಿವಾಸಿ ವಿಜೇಶ್ ಕುಟುಂಬ ಮಧ್ಯಪ್ರದೇಶ ದಿಂದ ಮೈಸೂರುವರೆಗೆ (1,950 ಕಿ.ಮೀ.) ನಿಂತು ಕೊಂಡೇ ಪ್ರಯಾಣ ಮಾಡಿದ್ದಾರೆ. ಇಲಾಖೆ ಸೇವೆ ಕುರಿತು ಕುಪಿತರಾದ ವಿಜೇಶ್ ಕುಟುಂಬ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ರೈಲ್ವೆ ಇಲಾಖೆಗೆ ದಂಡ ವಿಧಿಸಿದೆ. ದಂಡದ ಹಣವನ್ನು ವಿಜೇಶ್ ಕುಟುಂಬಕ್ಕೆ ಪರಿಹಾರದ ರೂಪದಲ್ಲಿ ನೀಡಲು ಸೂಚಿಸಿದೆ.

 

Leave a Reply

Your email address will not be published. Required fields are marked *

sixteen − 11 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top