About Us Advertise with us Be a Reporter E-Paper

Breaking Newsದೇಶಪ್ರಚಲಿತ

(ವಿಡಿಯೊ) ಇದೀಗ ತಾರೆಯರ ಮಕ್ಕಳಿಂದ ಫಿಟ್ನೆಸ್‌ ಚಾಲೆಂಜ್‌..!

ಮುಂಬೈ: ಪ್ರಧಾನಿ ಮೋದಿ ಅವರು ಹಾಕಿದ್ದ ಫಿಟ್ನೆಸ್‌ ಚಾಲೆಂಜ್‌ಅನ್ನು ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ, ಕೆ.ಎಲ್‌.ರಾಹುಲ್‌, ಮಾಜಿ ಪ್ರಧಾನಿ ದೇವೇಗೌಡ ಸೇರಿಂತೆ ಎಲ್ಲ ಕಲಾವಿದರು, ಕ್ರೀಡಾಪಟುಗಳು, ಜನಸಾಮಾನ್ಯರು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಆದರೆ ಈಗ ಬಚ್ಚಾ ಪಾರ್ಟಿ ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ.

ಇತ್ತೀಚೆಗೆ ರಿತೇಶ್ ದೇಶಮುಖ್ ಕಿಚ್ಚ ಸುದೀಪ್ ಅವರ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅಲ್ಲದೇ ತಮ್ಮ ಫಿಟ್ನೆಸ್ ಚಾಲೆಂಜ್ ಸ್ವೀಕರಿಸುವಂತೆ ತಮ್ಮ ಮಗ ರಹೈಲ್‍ನಿಗೆ ಟ್ಯಾಗ್ ಕೂಡ ಮಾಡಿದ್ದರು.

ರಹೈಲ್ ಇನ್‍ಡೋರ್ ರಾಕ್ ಕ್ಲೈಬಿಂಗ್ ಮಾಡುವ ಮೂಲಕ ತಮ್ಮ ತಂದೆ ನೀಡಿದ ಚಾಲೆಂಜ್ ಅನ್ನು ಸ್ವೀಕರಿಸಿದ್ದಾನೆ. ರಿತೇಶ್ ಅವರ ಪತ್ನಿ ಜೆನಿಲಿಯಾ ದೇಶಮುಖ್ ತಮ್ಮ ಮಗನ ಫಿಟ್ನೆಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಜೆನಿಲಿಯಾ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ, ರಹೈಲ್ ಈ ಬೇಬಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸುತ್ತಿದ್ದಾನೆ. ಅಲ್ಲದೇ ಕರೀನಾ ಹಾಗೂ ಸೈಫ್ ಮಗ ತೈಮೂರ್ ನಿಗೆ, ಕರಣ್ ಜೋಹರ್ ಅವಳಿ ಮಕ್ಕಳಾದ ರೂಹಿ ಹಾಗೂ ಯಶ್, ತುಶಾರ್ ಕಪೂರ್ ಮಗ ಲಕ್ಷ್ಯ ಹಾಗೂ ಅರ್ಪಿತಾ ಖಾನ್ ಮಗ ಅಹಿಲ್ ಗೆ ಈ ಚಾಲೆಂಜ್ ನೀಡಿದ್ದಾನೆ.

ಓ ಮೈ ಗಾಡ್‌. ಆತನನ್ನು ನೋಡಿ. ಅವನೊಬ್ಬ ರಾಕ್‍ಸ್ಟಾರ್. ಆತನನ್ನು ನೋಡಿ ನನಗೆ ತುಂಬಾ ಭಯವಾಗುತ್ತಿದೆ ಎಂದು ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಅಜಯ್‌ ದೇವಗನ್‌ ಮಗನೂ ಕೂಡಾ ಈ ಚಾಲೆಂಜೆ ಸ್ವೀಕರಿಸಿ ವೀಡಿಯೋ ಜಾಲತಾಣದಲ್ಲಿ ಹಾಕಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close