ಸಿನಿಮಾಸ್
‘ನಮ್ ಹುಡುಗ್ರು ಕಥೆ’ ಚಿತ್ರಕ್ಕೆ ಚಾಲನೆ
ಸ್ಯಾಂಡಲ್ವುಡ್ನಲ್ಲಿ ಟೈಟಲ್ಗಳದ್ದೇ ಕಾರುಬಾರು. ಇತ್ತೀಚಿಗಂತು ಟೈಟಲ್ಗಳೇ ಹೆಚ್ಚು ಸದ್ದು ಮಾಡುತ್ತಿವೆ. ಅಂತಹ ಡಿಫರೆಂಟ್ ಟೈಟಲ್ನಲ್ಲಿ ಮೂಡಿ ಹೊಸ ಚಿತ್ರ ‘ನಮ್ ಹುಡುಗ್ರು ಕಥೆ’. ಇತ್ತೀಚಿಗೆ ಕಂಠೀರವ ಸ್ಟುಡಿಯೋದಲ್ಲಿ ‘ನಮ್ ಹುಡುಗ್ರು ಕಥೆ ’ ಚಿತ್ರದ ಮಹೂರ್ತ ನೆರವೇರಿತು. ರಿಯಲ್ ಸ್ಟಾರ್ ಉಪೇಂದ್ರ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಸೆಕೆಂಡ್ ಹಾಫ್ ಸಿನಿಮಾದಲ್ಲಿ ನಟಿಸಿದ್ದ ನಿರಂಜನ್ ಸುರೇಂದ್ರ ಚೊಚ್ಚಲ ಬಾರಿಗೆ ನಾಯಕನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಲಿದ್ದಾರೆ. ಇವರು ಉಪೇಂದ್ರ ಅವರ ಅಣ್ಣನ ಮಗ ಕೂಡ. ‘ನಮ್ ಹುಡುಗ್ರು ಕಥೆ’ ಸಿನಿಮಾವನ್ನು ಹೆಚ್. ಬಿ. ಸಿದ್ದು ಮೂಲತಃ ಕೊಪ್ಪಳ ಜಿಲ್ಲೆಯ ಹಾಲಳ್ಳಿ ತಾಲ್ಲೂಕಿನವರಾದ ಸಿದ್ದು, ನಿರ್ದೇಶಕರಾದ ಆರ್. ಚಂದ್ರು, ಎಸ್. ಮಹೇಂದರ್, ಚಂದ್ರ ಮೋಹನ್ ಅವರ ಜೊತೆಯಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ನಮ್ಮ ಹುಡುಗ್ರು ಕಥೆ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿಟ್ಟುಕೊಂಡು ಹೀರೋ ಹುಡುಕಾಟದಲ್ಲಿದ್ದಾಗ ಕ್ಯಾಮೆರಾಮನ್ ಸೂರ್ಯಕಿರಣ್ ಅವರ ಸಲಹೆಯ ಮೇಲೆ ಸೆಕೆಂಡ್ ಹಾಫ್ನಲ್ಲಿ ಅಭಿನಯಿಸಿದ್ದ ನಿರಂಜನ್ ಅವರನ್ನು ಆಯ್ಕೆ ಮಾಡಲಾಯ್ತು ಎನ್ನುತ್ತಾರೆ ಸಿದ್ದು.
ಕಾಮಿಡಿ, ಪ್ರೇಮ, ಕೌಟುಂಬಿಕ ಜಾನರ್ನ ಚಿತ್ರ ಇದಾಗಿದ್ದು, ಉತ್ತಮ ಸಂದೇಶವನ್ನು ಮಂಡ್ಯ ಶೈಲಿಯಲ್ಲಿ ಚಿತ್ರವನ್ನು ತರಲು ಯೋಜಿಸಲಾಗಿದೆಯಂತೆ. ಸ್ನೇಹಿತರ ಸರ್ಕಲ್ನಲ್ಲಿ ಮೋಸ, ದ್ರೋಹ, ವಂಚನೆ ನಡೆಯುವುದು ತೀರ ಕಡಿಮೆ. ಅಕಸ್ಮಾತ್ ನಡೆದರೆ ಏನಾಗಬಹುದು ಅನ್ನೋದೆ ಚಿತ್ರದ ಎಳೆ. ಸತ್ಯ ಸುಳ್ಳಿನ ಶಕ್ತಿಯನ್ನು ಈ ಚಿತ್ರದ ಮೂಲಕ ತೋರಿಸಲಾಗುತ್ತದೆ ಎಂಬುದು ನಿರ್ದೇಶಕರ ಅಂಬೋಣ.
ಈ ಚಿತ್ರದಲ್ಲಿ 6 ಹಾಡುಗಳಿದ್ದು, ಅಭಿಮನ್ ರೈ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ‘ನಮ್ ಹುಡುಗ್ರು ಕಥೆ’ ಚಿತ್ರವನ್ನು ರೋಷನ್, ಆಸಿಫ್, ನಟರಾಜ್, ಕೃಷ್ಣಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ದೀಪು ಎಸ್ ಕುಮಾರ್ ಸಂಕಲನವಿದೆ. ನಮ್ ಹುಡುಗ್ರು ಕಥೆ ಚಿತ್ರವನ್ನು ಬೆಂಗಳೂರು, ಮಂಡ್ಯ, ಮೈಸೂರು, ಧರ್ಮಸ್ಥಳ, ಕಾರವಾರ, ಚಿತ್ರದುರ್ಗದಲ್ಲಿ ಶೂಟ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಉಪೇಂದ್ರ, ಆರ್. ಚಂದ್ರು ಹಾಗೂ ಜಯ ಕರ್ನಾಟಕ ಸಂಘದ ಕರ್ನಾಟಕ ಅಧ್ಯಕ್ಷರುಗಳು ಉಪಸ್ಥಿತರಿದ್ದರು.