About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

‘ಏಕತೆ ಪ್ರತಿಮೆ’ ಲೋಕಾರ್ಪಣೆಗೆ ಕ್ಷಣಗಣನೆ: ಸ್ವಾಗತ ಕೋರಲ್ಲ ಎಂದು ಪ್ರಧಾನಿಗೆ ಬಹಿರಂಗ ಪತ್ರ

ಕೆವಡಿಯಾ: ಅಕ್ಟೋಬರ್ 31ರಂದು ಪ್ರಧಾನಿಯ ಕನಸಿನ ಕೂಸಾದ ‘ಏಕತೆಯ ಪ್ರತಿಮೆ’ ಲೋಕಾರ್ಪಣೆಗೊಳ್ಳುತ್ತಿದೆ. ಇದೀಗ ಕೆವಾಡಿಯಾ ಗ್ರಾಮಸ್ಥರು ಯೋಜನೆ ವಿರೋಧಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಸರ್ದಾರ್ ವಲ್ಲಭ ಭಾಯ್ ಪಟೇಲರ ವಿಗ್ರಹ ಸ್ಥಾಪನೆಯಾಗಿರುವ ಸರ್ದಾರ್ ಸರೋವರ ಡ್ಯಾಂ ನ ಸುತ್ತಮುತ್ತಲಿನ ಸುಮಾರು 22 ಗ್ರಾಮಗಳ ಮುಖ್ಯಸ್ಥರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪ್ರತಿಮೆ ನಿರ್ಮಾಣದಿಂದ ತಮಗಾದ ಸಮಸ್ಯೆಗಳನ್ನು ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೆ ”ಅಮಾಯಕರ ಶವದ ಮೇಲೆ ವಿಶ್ವದ ಬೃಹತ್ ವಿಗ್ರಹ ಸ್ಥಾಪನೆಯಾಗಿದೆ. ಉದ್ಘಾಟನಾ ಸಮಾರಂಭಕ್ಕೆ ನಾವು ಯಾರೂ ಬರುವುದಿಲ್ಲ. ನಿಮಗೆ ಸ್ವಾಗತವನ್ನೂ ಕೂಡ ಕೋರುವುದಿಲ್ಲ” ಎಂದು ಹೇಳಿದ್ದಾರೆ.

‘ನಿಮ್ಮ ಈ ಯೋಜನೆಯಿಂದಾಗಿ ಇಲ್ಲಿನ ನೈಸರ್ಗಿಕ ಪರಿಸರ ಸಂಪೂರ್ಣ ಹಾಳಾಗಿದೆ. ಅಪರೂಪದ ತಳಿಯ ಕೀಟ, ಪಕ್ಷಿ ಪ್ರಾಣಿ ಪ್ರಬೇಧಗಳು ನಶಿಸಿ ಹೋಗಿವೆ. ಇಲ್ಲಿನ ಅರಣ್ಯ, ನದಿಗಳು, ಜಲಪಾತಗಳು, ಭೂಮಿ ಮತ್ತು ಕೃಷಿ ಭೂಮಿಗಳೇ ನಮಗೆ ಜೀವನಾಡಿಗಳಾಗಿದ್ದವು. ಆದರೆ ಅವೆಲ್ಲವನ್ನೂ ನೀವು ನಾಶ ಮಾಡಿದ್ದೀರಿ. ಸರ್ದಾರ್ ವಲ್ಲಭ ಭಾಯ್ ಪಟೇಲರೂ ಕೂಡ ಇಲ್ಲಿ ಆಗಿರುವ ವಿಧ್ವಂಸವನ್ನು ನೋಡಿದರೆ ಖಂಡಿತ ಕಣ್ಣೀರು ಹಾಕುತ್ತಾರೆ” ಎಂದು ಗ್ರಾಮಸ್ಥರು ಪತ್ರದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

”ಈ ಪ್ರತಿಮೆ ನಿರ್ಮಾಣಕ್ಕಾಗಿ ಸುಖಾಸುಮ್ಮನೆ ಜನರ ಹಣವನ್ನು ವ್ಯರ್ಥ ಮಾಡಿದ್ದೀರಿ. ಈಗಲೂ ಹಲವಾರು ಗ್ರಾಮಗಳು ಶಾಲೆ, ಆಸ್ಪತ್ರೆಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ. ಇಂತಹ ಯೋಜನೆಗಳ ಹಣ ಸುರಿಯುವುದರ ಬದಲು ವ್ಯರ್ಥ ಮಾಡಿದ್ದೀರಿ” ಎಂದು ಪತ್ರದಲ್ಲಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಹಿಂದೆ ಸ್ಥಳೀಯ ಬುಡುಕಟ್ಟು ಜನಾಂಗ ಮತ್ತು ಸುಮಾರು 75 ಸಾವಿರ ಅರಣ್ಯ ನಿವಾಸಿಗಳು ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದೀಗ ಅಕ್ಟೋಬರ್ 31ರಂದು ಪ್ರತಿಮೆ ಲೋಕಾರ್ಪಣೆಗೊಳ್ಳುತ್ತಿದ್ದು, ಈ ಸಮಾರಂಭಕ್ಕೆ ಗ್ರಾಮಸ್ಥರ ಪ್ರತಿಭಟನೆಯ ಬಿಸಿ ತಟ್ಟಿದೆ.

Tags

Related Articles

Leave a Reply

Your email address will not be published. Required fields are marked *

Language
Close