About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪಿತೃಪಕ್ಷವಿದೆ ಅಪರಾಧದಿಂದ ದೂರವಿರಿ: ಸುಶೀಲ್ ಮೋದಿ

ಗಯಾ: ಪಿತೃಪಕ್ಷದ ಅವಧಿಯಲ್ಲಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೆ ಅನೈತಿಕ ಚಟುವಟಿಕೆಗಳಿಂದ ದೂರ ಇರುವಂತೆ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ.

ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಿಮಗೆ ಕೈ ಜೋಡಿಸಿ ಬೇಡಿಕೊಳ್ಳುತ್ತೇನೆ, ನೀವು ದಯಾ ಮಾಡಿ ಪಿತೃಪಕ್ಷದ ವೇಳೆ ಅಪರಾಧ ಪ್ರಕರಣಗಳಿಂದ ದೂರವಿರಿ. ಬೇರೆ ದಿನಗಳಲ್ಲಿ ನೀವು ಮತ್ತೊಬ್ಬರಿಗೆ ಏನಾದರೂ ಮಾಡದಿರಿ ಎಂದು ಹೇಳಿದ್ದಾರೆ.

ಭಾದ್ರಪದ ಮಾಸದ ಪೂರ್ಣಿಮೆಯ ನಂತರದ 16 ದಿನಗಳನ್ನು ಹಿಂದೂ ಕ್ಯಾಲೆಂಡರ್ ಪದ್ಧತಿಯ ಪ್ರಕಾರ ಪಿತೃಪಕ್ಷ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಹಿಂದೂಗಳು ತಮ್ಮ ಪೂರ್ವಜರಿಗೆ ವಿಶೇಷವಾದ ತಿಂಡಿ ತಿನಿಸು ಮಾಡುತ್ತಾರೆ. ಸೋಮವಾರ ಆರಂಭವಾಗಿರುವ ಪಿತೃಪಕ್ಷ ಅಕ್ಟೋಬರ್ 8ರ ವರೆಗೂ ಇರುತ್ತದೆ. ಪಿತೃಪಕ್ಷದ ಅವಧಿಯಲ್ಲಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೆ ಅನೈತಿಕ ಚಟುವಟಿಕೆಗಳಿಂದ ದೂರ ಇರುವಂತೆ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close