About Us Advertise with us Be a Reporter E-Paper

Breaking Newsದೇಶಪಾಲಿಟಿಕ್ಸ್ಪ್ರಚಲಿತ
Trending

ಸಮಾಜ ಒಡೆಯಲು ರಾಹುಲ್‌ ಮೊಸಳೆ ಕಣ್ಣೀರು ಹಾಕಿದ್ದು ಸಾಕು: ಬಿಜೆಪಿ (ಟ್ವೀಟ್‌ ಸರಣಿ)

ದೆಹಲಿ: ದೇಶದಲ್ಲಿ ಘಟಿಸುವ ಎಲ್ಲ ಅಹಿತಕರ ಘಟನೆಗಳಿಗೆ ಆರ್‌ಎಸ್‌ಎಸ್‌-ಬಿಜೆಪಿ ಕಾರಣ ಎಂಬ ಸಿದ್ಧ ಟೀಕಾಸ್ತ್ರವನ್ನು ಬಳಸುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ಇತ್ತೀಚೆಗೆ ದನಗಳ್ಳನೊಬ್ಬನನ್ನು ಕೊಂದ ಕುರಿತಂತೆ ಸಾಕಷ್ಟು ರಾಜಕೀಯ ಕೆಸರೆರಚಾಟ ನಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪಿಯುಶ್‌ ಗೋಯೆಲ್, ರಾಹುಲ್ ಗಾಂಧಿಯನ್ನು ದ್ವೇಷದ ವ್ಯಾಪಾರಿ ಎಂದಿದ್ದಾರೆ.

ಘಟನೆ ಕುರಿತಂತೆ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರದ ಪರವಾಗಿ ಭರವಸೆ ನೀಡಿದ ಗೋಯೆಲ್‌, “ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಹುಲ್‌ ಗಾಂಧಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ” ಎಂದಿದ್ದಾರೆ.

ಈ ಕುರಿತಂತೆ ಟ್ವೀಟ್‌ ಮಾಡಿದ ಗೋಯೆಲ್‌, “ಪ್ರತಿ ಬಾರಿ ಅಪರಾಧ ನಡೆದಾಗೆಲ್ಲಾ ಖುಷಿ ಪಡುವುದನ್ನು ನಿಲ್ಲಿಸಿ ಮಿಸ್ಟರ್‌ ರಾಹುಲ್ ಗಾಂಧಿ. ಕಠಿಣ ಹಾಗು ಪ್ರಾಮಾಣಿಕ ಕ್ರಮ ತೆಗೆದುಕೊಳ್ಳುವುದಾಗಿ ಸರಕಾರ ಅದಾಗಲೇ ಭರವಸೆ ನೀಡಿದೆ. ಚುನಾವಣಾ ಲಾಭಕ್ಕಾಗಿ ಎಲ್ಲ ರೀತಿಯಲ್ಲೂ ಸಮಾಜವನ್ನು ಒಡೆಯುವ ನೀವು ಮೊಸಳೆ ಕಣ್ಣೀರು ಹಾಕುತ್ತೀರಿ. ಸಾಕು ನಿಲ್ಲಿಸಿ. ನೀವೊಬ್ಬ ದ್ವೇಷದ ವ್ಯಾಪಾರಿ” ಎಂದು ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್‌ ಗಾಂಧಿ ವಿರುದ್ಧ ಸ್ಫರ್ಧಿಸಿ ಭರ್ಜರಿ ಹೋರಾಟ ನೀಡಿದ್ದ ಸ್ಮೃತಿ ಇರಾನಿ ಕೂಡ ಟ್ವೀಟ್ ಮಾಡಿದ್ದು, “1984ರಲ್ಲಿ, ಭಾಗಲ್ಪುರ, ನೆಲ್ಲಿ ಸೇರಿದಂತೆ ಅನೇಕ ನಿದರ್ಶನಗಳಲ್ಲಿ ರಾಹುಲ್‌ ಗಾಂಧಿ ಕುಟುಂಬ ದ್ವೇಷ ಸಾಧನೆಯ ನೀಚಮಟ್ಟ ಮುಟ್ಟಿದೆ. ರಣಹದ್ದಿನ ರಾಜಕೀಯದಿಂದ ರಾಹುಲ್‌ ಅದನ್ನೇ ಮುಂದುವರೆಸುತ್ತಿರುವುದು ನಾಚಿಗೇಡು. ಚುನಾವಣಾ ಲಾಭಕ್ಕಾಗಿ ಸಮಾಜ ಒಡೆಯಲು ಅವರು ಯತ್ನಿಸದಿರುವ ಒಂದೇ ಒಂದು ಘಟನೆ ಇಲ್ಲ” ಎಂದು ಹೇಳಿದ್ದಾರೆ.

ಅಲ್ವಾರ್‌ ಘಟನೆಯನ್ನು ಬಳಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಈ ಪ್ರತಿಕ್ರಿಯೆಗಳು ಬಂದಿವೆ. “ಘಟನಾ ಸ್ಥಳಕ್ಕೆ ಬರುವ ಹಾದಿಯಲ್ಲಿ ಪೊಲೀಸರು ಟೀ ಕುಡಿಯುತ್ತಾ ಕುಳಿತಿದ್ದ ಕಾರಣ ಸಾಕಷ್ಟು ವಿಳಂಬವಾಗಿದೆ, ಇದು ಮೋದಿಯವರ ಕ್ರೂರ ಭಾರತ” ಎಂದು ರಾಹುಲ್ ಟ್ವೀಟ್ ಮಾಡಿಕೊಂಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close