About Us Advertise with us Be a Reporter E-Paper

ಪ್ರಚಲಿತವಿದೇಶ
Trending

ಮೊಸಳೆ ಜತೆ ಫೋಟೋ ಕ್ಲಿಕ್ಕಿಸಿ ಸಂಭ್ರಮ..!

ಟೆಕ್ಸಾಸ್ : ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಅಂತಾರೆ. ಪದವಿ ನೆನಪಿಗಾಗಿ ಏನಾದರೂ ಮಾಡಬೇಕಲ್ಲ ಅನ್ನೋ ಹಪಹಪಿ ಹಲವು ವಿದ್ಯಾರ್ಥಿಗಳು. ಹೀಗಂತ ಯೋಚಿಸುತ್ತಾ ಟೆಕ್ಸಾಸ್‍ನ ವಿದ್ಯಾರ್ಥಿಯೊಬ್ಬಳು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾಳೆ.

ಅಬ್ಬಾ.. ಮೊಸಳೆ ಅಂದ್ರೆ ಯಾರಿಗೆ ತಾನೆ ಭಯವಿಲ್ಲ ಹೇಳಿ. ಅಷ್ಟು ದೂರದಲ್ಲಿ ಮೊಸಳೆ ಕಂಡರೆ ಎಲ್ಲ ಎದ್ನೋ ಬಿದ್ನೋ ಅಂತಾ ಓಡಿ ಹೋಗುತ್ತಾರೆ. ಆದ್ರೆ ಅಮೆರಿಕದ ಯುವತಿಯೊಬ್ಬಳು ಇದ್ಯಾವುದಕ್ಕೂ ಅಂಜದೆ ಮೊಸಳೆ ಜತನೇ ಫೋಟೋ ತೆಗೆಸಿಕೊಂಡಿದ್ದಾಳೆ..!

ಹೌದು, 21 ವರ್ಷ ವಯಸ್ಸಿನ ಮಕೆಂಜೀ ನೋಲ್ಯಾಂಡ್ ಎಂಬಾಕೆ 14 ಅಡಿ ಉದ್ದದ ಮೊಸಳೆಯೊಂದಿಗೆ ಫೋಟೋ ತೆಗೆದುಕೊಂಡಿದ್ದಾಳೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಟೆಕ್ಸಾಸ್‍ನ ಎ & ಎಮ್ ಯುನಿವರ್ಸಿಟಿಯಲ್ಲಿ ವನ್ಯಜೀವಿ ಮತ್ತು ಮೀನುಗಾರಿಕಾ ವಿಜ್ಞಾನದಲ್ಲಿ ಪದವಿ ಓದುತ್ತಿದ್ದ ಈಕೆ ಮೊಸಳೆ ಜತೆ ಫೋಟೋ ತೆಗೆಯುವುದರ ಮೂಲಕ ಡಿಗ್ರಿ ಪೂರೈಸಿರೋದಾಗಿ ಫುಲ್ ಖುಷಿ ಆಗಿದ್ದಾಳೆ.

Tags

Related Articles

Leave a Reply

Your email address will not be published. Required fields are marked *

Language
Close