About Us Advertise with us Be a Reporter E-Paper

Breaking Newsರಾಜ್ಯ

ವಿದ್ಯಾರ್ಥಿಗಳಿಂದ ಗಬ್ಬು ನಾರುತ್ತಿದ್ದ ಶೌಚಾಲಯ ಕ್ಲೀನ್ ಮಾಡಿಸಿದ ಶಿಕ್ಷಕರು

ಚಿಕ್ಕಬಳ್ಳಾಪುರ: ಗಬ್ಬುನಾರುತ್ತಿದ್ದ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದಲೇ ಕ್ಲೀನ್ ಮಾಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕು ನಗರಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಶಾಲಾ ವಿದ್ಯಾರ್ಥಿಗಳಿದಂಲೇ ಶಿಕ್ಷಕರು ಕಸ ಕಡ್ಡಿಯಿಂದ ಗಬ್ಬು ನಾರುತ್ತಿರುವ ಶೌಚಾಲಯಗಳ ಸ್ವಚ್ಚತೆ ಮಾಡಿಸಿದ್ದು, ಇದನ್ನ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಪೆನ್ನು, ಪುಸ್ತಕ ಹಿಡಿಯಬೇಕಾದ ವಿದ್ಯಾರ್ಥಿಗಳು ಪೊರಕೆ ಹಿಡಿದು ಟಾಯ್ಲೆಟ್ ಕ್ಲೀನ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಶಿಕ್ಷಕರ ನಡೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಂದ ಶೌಚಾಲಯಗಳನ್ನು ಕ್ಲೀನ್ ಮಾಡಿಸಿರೋದಲ್ಲದೆ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿಲ್ಲ. ಸ್ವಚ್ಚತೆಗೆ ಬಳಸಬೇಕಾದ ಪರಿಕರಗಳನ್ನು ಬಳಸದೆ ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟ ಆಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close