About Us Advertise with us Be a Reporter E-Paper

Breaking Newsರಾಜ್ಯ
Trending

ಶಾಮಿಯಾನದ ಕೆಳಗೆ ಕೂತು ಪರೀಕ್ಷೆ ಬರೆದ ವಿದ್ಯಾರ್ಥಿಗಳು!

ದಾವಣಗೆರೆ: ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೂರಲು ಜಾಗವಿಲ್ಲದೆ ಇರೋದರಿಂದ ಶಾಮಿಯಾನ, ಖುರ್ಚಿ ಬಾಡಿಗೆಗೆ ತಂದು ಪರೀಕ್ಷೆ ಬರೆಸಲಾಗಿರುವ ಘಟನೆ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ನಡೆದಿದೆ.

ಹರಪ್ಪನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ವಿದ್ಯಾರ್ಥಿಗಳು ಶಾಮಿಯಾನದಡಿ ಪರೀಕ್ಷೆ ಬರೆಯುತ್ತಿದ್ದಾರೆ. ಕಾಲೇಜಿನಲ್ಲಿ ಎಲ್ಲಾ ವಿಭಾಗ ಸೇರಿ 1,394 ವಿದ್ಯಾರ್ಥಿಗಳಿದ್ದಾರೆ. ಆದರೆ ಕಾಲೇಜಿನಲ್ಲಿ ಕೇವಲ ಏಳು ಕೊಠಡಿಗಳು ಮಾತ್ರ ಇವೆ. ಇದರಿಂದ ಪರೀಕ್ಷೆ ಬರೆಯಲು ಜಾಗವಿಲ್ಲದಂತಾಗಿದೆ. ಇದನ್ನು ಮನಗಂಡ ಉಪನ್ಯಾಸಕರು ಪ್ರತಿನಿತ್ಯ ಊಟದ ಟೇಬಲ್, ಚೇರ್, ಶಾಮಿಯಾನಕ್ಕೆ 7,660 ರೂಪಾಯಿ ಬಾಡಿಗೆ ಕೊಟ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸುತ್ತಿದ್ದಾರೆ.

ವಿದ್ಯಾರ್ಥಿಗಳು ಇಷ್ಟೆಲ್ಲಾ ಕಷ್ಟಪಡುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಎಷ್ಟೇ ಸಾರಿ ಕಾಲೇಜಿನ ಪರಿಸ್ಥಿತಿ ಕುರಿತು ತಿಳಿಸಿದರು ನಮಗೆ ಸ್ಪಂದಿಸುತ್ತಿಲ್ಲ ಎಂದು ಕಾಲೇಜಿನ ಉಪನ್ಯಾಸಕರು ಆರೋಪಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close