About Us Advertise with us Be a Reporter E-Paper

ಅಂಕಣಗಳು

ಕನ್ನಡತಿ ಸುಧಾ ಮೂರ್ತಿ, ನಾಡಿನ ಸಂಸ್ಕೃತಿಯ ಪ್ರತೀಕ!

- ಡಾ. ಆರ್.ಜಿ. ಹೆಗಡೆ, ಪ್ರಾಧ್ಯಾಪಕರು

ಕನ್ನಡ ಸಂಸ್ಕೃತಿಯ ಕೇಂದ್ರ ಬಿಂದುವಾದ ಮೈಸೂರು ದಸರಾವನ್ನು ಅಕ್ಕ ಸುಧಾ ಮೂರ್ತಿ ಉದ್ಘಾಟಿಸಿದ್ದು ತುಂಬ ಸಂತಸದ ವಿಷಯ. ಏಕೆಂದರೆ ಸುಧಾ ಮೂರ್ತಿಸಂಸ್ಕೃತಿಯ ಪ್ರತೀಕವಾಗಿ ನಿಂತು ಕನ್ನಡದ ಕಂಪನ್ನುಜಾಗತಿಕವಾಗಿ ಪಸರಿಸಿದವರು. ಜಾಗತೀಕರಣದ ಈ ಸಂದರ್ಭದಲ್ಲಿ ನಮ್ಮಸಂಸ್ಕೃತಿಯ ಶ್ರೇಷ್ಠತೆಯನ್ನು ಮೆರೆಸಿದವರು. ಜಾಗತೀಕರಣಕ್ಕೆ ಭಯಪಡುವ ಅಗತ್ಯವಿಲ್ಲ ಹಾಗೂ ಅದನ್ನುನಮ್ಮ ಸಂಸ್ಕೃತಿಯನ್ನು ಬಲಗೊಳಿಸಿಕೊಳ್ಳಲು ಹೇಗೆ ಉಪಯೋಗಿಸಿಕೊಳ್ಳಬಹುದುಎಂಬುದಕ್ಕೆ ದೃಷ್ಟಾಂತವಾಗಿ ನಿಂತವರು ಮೂರ್ತಿ.

ಕನ್ನಡ ಸಂಸ್ಕೃತಿ ಎಂದರೇನು ಎನ್ನುವ ಪ್ರಶ್ನೆ ಇದೆ.ಇದನ್ನು ಸರಳೀಕೃತವಾಗಿ ಅರಿಯಲು ನಾವು ರಾಜಕುಮಾರ್ ಅವರ ಸಿನಿಮಾಗಳನ್ನು ನೋಡಬೇಕು. ಕನ್ನಡ ಸಂಸ್ಕೃತಿಯ ದಟ್ಟ ಚಿತ್ರಣಗಳು ಅವು. ಉದಾಹರಣೆಗೆ ‘ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲು, ಜೀವನಚೈತ್ರ, ಗಂಧದ ಗುಡಿ’ ಇತ್ಯಾದಿ ಸಿನಿಮಾಗಳು. ಅವು ನಮಗೆ ಕಣ್ಣಿಗೆ ಹೊಡೆಯುವಂತೆ ತೋರಿಸುವುದು ಸರಳತೆ, ವಿನಯ, ಜೀವನ ಪ್ರೇಮ ಹಾಗೂ ನಮ್ಮದೇ ಆದ ಸುಂದರ ವಿಶಿಷ್ಟ ಉಡುಗೆ, ಅಡುಗೆ, ತೊಡುಗೆೆ. ಸಂಪತ್ತು ಗಳಿಕೆಯೇ ಜೀವನದ ಪರೋಪಕಾರಿಯಾಗಿ, ಸಮಾಜದ ನಡುವೆ, ಪ್ರಕೃತಿಯ ನಡುವೆ ಬದುಕುವುದು ಮಹತ್ವ ಎನ್ನುವುದು ಅಲ್ಲಿಯ ಸ್ಥಾಯಿ ಭಾವ. ರಾಜಕುಮಾರ್ ಸಿನಿಮಾಗಳು ನಮಗೆ ಹೇಳಿಕೊಡುವುದೆಂದರೆ ಕನ್ನಡ ಸಂಸ್ಕೃತಿಯೆಂದರೆ ಒಂದು ಸರಳ, ಸಂಪನ್ನ ಬದುಕಿನ ದಾರಿ. ಮುಖ್ಯವಾಗಿ ಜನಪದ ಸಂಸ್ಕೃತಿಯನ್ನು, ಕೃಷಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ, ಸಂಪತ್ತಿನ ಹಿಂದೆ ಬೀಳದ, ಸಮಾಜಕ್ಕೆ ಆಸ್ತಿಯಾಗಿ ಬದುಕುವ ಒಂದು ಸಾಂಸ್ಕೃತಿಕ ಮನೋಭಾವ.
ಹಾಗೆಯೇ ಕನ್ನಡ ಸಂಸ್ಕೃತಿಯ ಸ್ನಿಗ್ಧತೆಯನ್ನು, ಮಾರ್ದವತೆಯನ್ನು, ಸವಿಯಲು ಕುವೆಂಪು ಅವರ ಕಾದಂಬರಿಗಳನ್ನು, ಬೇಂದ್ರೆಯವರ ಕವಿತೆಗಳನ್ನು ನರಸಿಂಹ ಸ್ವಾಮಿಯವರ ‘ಮೈಸೂರು ಮಲ್ಲಿಗೆ’ಯಲ್ಲಿನ ಕವಿತೆಗಳನ್ನು ಓದಬೇಕು. ಅಲ್ಲಿ ಲಕ್ಷಣವಾದ, ಸುಂದರಿಯಾದ, ಸಂಸ್ಕಾರವಂತ ಮಹಿಳೆಯರ ಕಾವ್ಯ ರೂಪಕಗಳು ಬರುತ್ತವೆ. ಉದಾಹರಣೆಗೆ ಇರುವಸಾಲುಗಳು ಕೆಎಸ್‌ನ ಅವರ ‘ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು’. ಕೈ ತುಂಬ ಅಸಹ್ಯರೀತಿಯಲ್ಲಿ ಬಂಗಾರ ಪ್ರದರ್ಶಿಸುವುದು ಕನ್ನಡತನವಲ್ಲ ಎಂದೇ ಕವಿತೆಯ ಸಾಲು ಸೂಚಿಸುತ್ತದೆ. ಹಾಗೆಯೇ ‘ಬಳೆಗಾರ ಚೆನ್ನಯ್ಯ’ ಇತ್ಯಾದಿ ಕವಿತೆಗಳು ಮಲ್ಲಿಗೆ ಮುಡಿದ, ಮೃದು ಮಾತಿನ ಮಂದಹಾಸದ, ಕುರುಳು ಗಾಳಿಗೆ ಹಾರುವ, ಸುಂದರ ಹೂವಿನಂತೆ ಇರುವ, ಸಂಸ್ಕೃತಿಯ ಪ್ರತೀಕವೇ ಆಗಿಹೋದ ಕನ್ನಡ ಸ್ತ್ರೀಯರನ್ನು ಬಿಂಬಿಸುತ್ತವೆ. ಅಕ್ಕ ಸುಧಾ ಮೂರ್ತಿ ಬಹುಶಃ ಹೀಗೆ ರಾಜ್‌ಕುಮಾರ್ ಸಿನಿಮಾದಿಂದ ನೇರವಾಗಿ ತೆಗೆದುಕೊಂಡ ಅಥವಾ ಕೆಎಸ್‌ನ ಅವರ ಕವಿತೆಗಳಲ್ಲಿ ಮೂಡಿ ಬರುವ ಸ್ತ್ರೀಯರ ಪ್ರತಿಬಿಂಬ ಎನಿಸುವಂಥಾ ಅಚ್ಚ ಕನ್ನಡತಿ. ಸದಾ ಮುಂಗುರುಳು ಹಾರುತ್ತಿರುವ, ಹಣೆಯಲ್ಲಿ ಕುಂಕುಮವಿಟ್ಟು, ಕೈಗೆ ಹಸಿರು ಬಳೆಗಳನ್ನು ತೊಟ್ಟು, ಮುಖದಲ್ಲಿ ನಗುವಿನ ಕಿರಣಗಳನ್ನು ಸೂಸುವ ಮಹಿಳೆ. ಕನ್ನಡಪ್ರಜ್ಞೆಯಲ್ಲಿ ಸ್ಥಾಯಿಯಾಗಿ ಹೋದ ಶ್ರೇಷ್ಠ, ಸುಸಂಸ್ಕೃತ ಜೀವಿ. ಕನ್ನಡದ ಭೂಮಿಯ ಕೋಟ್ಯಂತರ ಮಹಿಳೆಯರ ಜೀವನಕ್ಕೊಂದು ರೂಪಕವಾದವರು. ಅಂಥವರನ್ನು ಈ ಸಲದ ರಾಜ್ಯೋತ್ಸವ ಉದ್ಘಾಟಿಸಲು ಕರೆದ ಕರ್ನಾಟಕ ಸರಕಾರ ಕನ್ನಡದ ಎಲ್ಲ ಸುಸಂಸ್ಕೃತ ಮಹಿಳೆಯರನ್ನು ಮತ್ತು ಒಂದು ಮಹಿಳಾ ಸಂಸ್ಕೃತಿಯನ್ನು ಗೌರವಿಸಿದೆ ಎನ್ನಬೇಕು.
ಹೀಗೆ ಹೇಳಲು ಕಾರಣವಿದೆ. ತುಂಬ ಮಹತ್ವದ ವಿಷಯವೆಂದರೆ, ಸುಧಾ ಮೂರ್ತಿಯವರ ಹಾಗೆ ಬಾಳಲು ಆಳವಾದ ಸಾಂಸ್ಕೃತಿಕ ಬೇರುಗಳು ಬೇಕಾಗುತ್ತವೆ. ಅಲ್ಲದೆ ಸ್ಪಷ್ಟವಾದ ಮೌಲ್ಯಗಳನ್ನು ಗುರುತಿಸಿಕೊಂಡ ಮತ್ತು ಆ ಮೌಲ್ಯಗಳಿಗೆ ತನ್ನನ್ನು ಸಮರ್ಪಿಸಿಕೊಂಡ ವ್ಯಕ್ತಿತ್ವ ಬೇಕಾಗುತ್ತದೆ. ಅಕ್ಕ ಜಾಗತೀಕರಣದ ಸಂಸ್ಕೃತಿಯ ಮಧ್ಯೆಯೇ ಇರುವವರು. ಅವರಿಗೆ ಕನ್ನಡತನದಿಂದ ದಾರಿ ತಪ್ಪಲು, ಸಂಸ್ಕೃತಿಯಿಂದ ದಾರಿ ತಪ್ಪಲು ಸಾಕಷ್ಟು ಅವಕಾಶಗಳು ಅಷ್ಟೇ ಅಲ್ಲ, ಸಾಂಸ್ಕೃತಿಕ ಒತ್ತಡಗಳು ಇದ್ದವು ಎಂದೇ ಅವರ ಜೀವನದಲ್ಲಿ ಬಂದ ಘಟನೆಗಳು ಹೇಳುತ್ತವೆ. ಸಾಫ್‌ಟ್ವೇರ್‌ನಲ್ಲಿ ಬಿಇ, ಎಂಇ ಮಾಡಿದ ಬಹುಶಃ ಕರ್ನಾಟಕದ ಪ್ರಥಮ ಮಹಿಳೆಯರಲ್ಲೊಬ್ಬರು ಆಕೆ. ಅಲ್ಲದೆ ನಂತರದ ಕಥೆ ಎಲ್ಲರಿಗೂ ಗೊತ್ತು. ದೇಶದ ಹೆಮ್ಮೆಯ ಮಾಹಿತಿ ತಂತ್ರಜ್ಞಾನ ಉದ್ಯಮಿ ನಾರಾಯಣ ಮೂರ್ತಿಯವರನ್ನು ಮದುವೆಯಾಗಿ ಅಕ್ಷರಶಃ ಕುಬೇರನಂತಹ ಸಂಪತ್ತನ್ನುಕಂಡವರು. ಸಾಲಿಗೆ ಸೇರಿ ಇಡೀ ಜಗತ್ತನ್ನು ಸುತ್ತಾಡಿದವರು. ಎಲ್ಲ ಕೀರ್ತಿಯನ್ನು, ಸುಖ ಸಂಪತ್ತನ್ನು, ಕೌಂಟುಬಿಕ ನೆಮ್ಮದಿಯನ್ನು, ಸೌಭಾಗ್ಯವನ್ನು ಅನುಭವಿಸಿದವರು. ಪ್ರಸಿದ್ಧಿಯ ಬರಹಗಾರರು. ಬಹುಶಃ ಸ್ವರ್ಗಕ್ಕೆ ಮೂರೇಗೇಣು ಎನ್ನುವಂತೆ ಬದುಕಿದವರು. ಮಗ ಮತ್ತು ಮಗಳು ಕೂಡ ಅಂತಾರಾಷ್ಟ್ರೀಯ ಖ್ಯಾತಿಯ ಸಾಧಕರು.
ಮಹತ್ವದ ಒಂದು ವಿಷಯ ಏನೆಂದರೆ ಸಂಪತ್ತಿಗೆ ವ್ಯಕ್ತಿತ್ವಗಳನ್ನು ನಾಶಮಾಡುವ ಶಕ್ತಿ ಇರುತ್ತದೆ. ವ್ಯಕ್ತಿತ್ವಗಳನ್ನು ಸಂಪೂರ್ಣವಾಗಿ ಬದಲಾಯಿಸಿಬಿಡಬಲ್ಲ ಶಕ್ತಿ ಇರುತ್ತದೆ. ಸಾಧಾರಣವಾಗಿ ದೊಡ್ಡ ಪ್ರಮಾಣದ ಸಂಪತ್ತುಹೊಂದಿದವರಿಗೆ ಬಡವರೆಲ್ಲರೂ ಆಲಸಿಗಳು, ಕೀಳು ಮಟ್ಟದವರುಎನ್ನುವ ಮನಸ್ಸನ್ನು ತುಂಬಿಕೊಳ್ಳಲಾರಂಭಿಸುತ್ತದೆ. ಬಡತನದ ಜೀವನ ವಿಧಾನ ಅನಾಗರಿಕ ಎಂದು ಅನಿಸಲಾರಂಭಿಸುತ್ತದೆ. ಅಂತಹ ಸಂಸ್ಕೃತಿಯೇ ಅಸಡ್ಡಾಳ ಮತ್ತು ಅನಿವಾರ್ಯವಾಗಿ ಬದುಕಬೇಕಾದ ಜೀವನ ವಿಧಾನ ಎಂದು ಅನಿಸಲಾರಂಬಿಸುತ್ತದೆ. ಸಮಾಜದ ಜತೆ ಮುಕ್ತವಾಗಿ ಬೆರೆಯಲುಮನಸ್ಸು ಬರುವುದಿಲ್ಲ. ಯಾರಿಗಾದರೂ ಸಹಾಯ ಮಾಡುವುದಿದ್ದರೂ ಏನೋ ಒಂದಿಷ್ಟು ಹಣ ನೀಡಿದರೆ ಆಯಿತು ಎನ್ನುವ ಭಾವನೆ ಬರುತ್ತದೆ.
ಅಲ್ಲದೆ ಶ್ರೀಮಂತಿಕೆಯ ಮನಸ್ಸಿನ ಇನ್ನೊಂದು ಮುಖವೆಂದರೆ ವೈಯಕ್ತಿಕತೆಯ ಭಾವನೆ ಜಾಗೃತವಾಗುತ್ತಾ ಹೋಗುತ್ತದೆ. ತಾವು ,ತಮ್ಮಕುಟುಂಬದವರ ಜತೆ ಅಥವಾ ಬೇಕಾದವರ ಜತೆ ದೇಶ-ವಿದೇಶಗಳಲ್ಲಿ ಎಂಜಾಯ್ ಮಾಡಬೇಕೆನ್ನುವ ಆಸೆ ಜಾಗೃತವಾಗುತ್ತದೆ. ಜನರ ಜತೆ ಬದುಕುವುದು ಕಿರಿಕಿರಿ ಅನ್ನಿಸಲಾರಂಭಿಸುತ್ತದೆ. ಬಹುಶಃ ಹಲವು ಬಿಲಿಯನ್ ಡಾಲರ್ ಆಸ್ತಿವಂತರು ಬದುಕುವುದು ಹೀಗೆ. ಸಾರ್ವಜನಿಕವಾಗಿ ಭಾರೀ ಗಾತ್ರದ ಕಪ್ಪು ಕನ್ನಡಕ ಧರಿಸಿಬಿಡುವ ಅವರು ಜನರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ.ಅಂತಹ ಅವಶ್ಯಕತೆ ಇದ್ದರೆ ಒಂದು ದಿನ ವೇದಿಕೆಗೆ ಬಂದು, ಕೃತ್ರಿಮ ಸರಳತೆ ನಟಿಸಿ ಮಾಯವಾಗಿ ಬಿಡುತ್ತಾರೆ. ತನ್ನ ಸುತ್ತಲಿನ ಸಮಾಜದ ಜೊತೆ ಕೊಂಡಿಯಾಗಿ ಬದುಕಲು ಅಥವಾ ದೀರ್ಘ ಕಾಲ ಬದ್ಧತೆ ಇಟ್ಟುಕೊಂಡು ಅವರು ಇಷ್ಟಪಡುವುದೇ ಇಲ್ಲ. ಸಾಹಿತ್ಯ, ಪುಸ್ತಕಗಳು ಮತ್ತು ಸ್ಥಳೀಯ ಸಾಂಸ್ಕೃತಿಕ ಬದುಕು ಅವರಿಗೆ ಅರ್ಥಹೀನವಾಗಿ ತೋರುತ್ತದೆ. ಹಾಗೆ ನೋಡಿದರೆ ಅದು ಅವರ ತಪ್ಪೂ ಅಲ್ಲ. ಅವರನ್ನು ಹಾಗೆ ಯೋಚಿಸುವಂತೆ ಮಾಡುವುದು ಹಣ.
ಸುಧಾಮೂರ್ತಿ ಕನ್ನಡದ ಶ್ರೇಷ್ಠ ಮಹಿಳೆಯಾಗುವದು ಇಲ್ಲಿ. ಇಂತಹ ರೀತಿಯ ಬದುಕನ್ನು ಆಯ್ಕೆ ಮಾಡಿಕೊಳ್ಳಲು ಇಚ್ಛಿಸದೆ ಕನ್ನಡ ಸಂಸ್ಕೃತಿಯ ಬದುಕನ್ನು ಬದುಕಲು ಅವರು ನಿರ್ಧರಿಸಿದ್ದರಲ್ಲಿ ಇಂತಹ ಅವರ ನಿರ್ಣಯ ನಿಜಕ್ಕೂ ಅಸಾಧಾರಣವಾದದ್ದು. ಅದು ಅವರ ವ್ಯಕ್ತಿತ್ವದಲ್ಲಿಯೇಎದ್ದುಕಾಣುತ್ತದೆ. ಉಡುವುದು ಸೀರೆ. ಇದು ಅಪ್ಪಟ ಕನ್ನಡತಿಯ ಉಡುಗೆ ತೊಡುಗೆ. ಮಲ್ಲಿಗೆ ಹೂವೆಂದರೆ ಅವರಿಗೆ ಬಲು ಪ್ರೀತಿ ಎಂದು ಕೇಳಿದ್ದೇನೆ. ಬಂಗಾರ, ವಜ್ರ-ವೈಢೂರ್ಯಗಳನ್ನು ಅವರು ಮೈಮೇಲೆ ಹೇರಿಕೊಂಡಿದ್ದಂತೂ ನೋಡಿಯೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವರ ಶರೀರ ಭಾಷೆಯನ್ನು ಗಮನಿಸಬೇಕು. ಅದು ಅವರ ಒಳಗಿರುವ ಅಪ್ಪಟ ಸಾಂಸ್ಕೃತಿಕತೆಯನ್ನು ನೇರವಾಗಿ ಬಿಂಬಿಸುತ್ತದೆ. ಅವರ ಸರಳತೆ ಕೃತಕ ಸರಳತೆಯಲ್ಲ. ನೇರವಾಗಿ ವ್ಯಕ್ತಿತ್ವದ ಒಳಗಿನಿಂದ ಹೊರಹೊಮ್ಮುವ ನಡಾವಳಿ.
ಅವರ ಕನ್ನಡ ಜನಪದೀಯತೆ ಅವರು ಹಮ್ಮಿಕೊಂಡಿರುವ ಚಟುವಟಿಕೆಗಳಲ್ಲಿ ಎದ್ದು ನಾನು ಬಹುವಾಗಿ ಮೆಚ್ಚಿಕೊಂಡ ಅವರ ಚಟುವಟಿಕೆಗಳಲ್ಲೊಂದು, ಮಕ್ಕಳಿಗೆ ಕಥೆ ಹೇಳುವುದನ್ನುಪುನರುಜ್ಜೀವನಗೊಳಿಸಿದ ಪ್ರಯತ್ನ. ಸ್ವತಃ ಸುಧಾ ಮೂರ್ತಿಉತ್ತಮ ಕಥೆಗಾರ್ತಿ. ಆದ್ದರಿಂದ ಅತ್ತ ಅವರ ಚಿತ್ತ ಹರಿದುದು ಸಹಜ. ಅಲ್ಲದೇ ಮಕ್ಕಳಿಗೆ ಕಥೆ ಹೇಳುವುದರಲ್ಲಿಯೂ ಅವರು. ಸಿದ್ಧ ಹಸ್ತರು. ಅವರು ಬರೆದ ಪುಸ್ತಕಗಳು ಕನ್ನಡದ ಗ್ರಾಮಿಣ ಸೊಗಡಿನ, ಸಂಸ್ಕೃತಿಗಳ ಕಥೆಗಳನ್ನು ಹೇಳುತ್ತವೆ. ಇನ್‌ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆಯಾಗಿ ಹಾಗೂ ಗೇಟ್‌ಸ್ ಫೌಂಡೇಶನ್‌ನ ಸದಸ್ಯೆಯಾಗಿಅವರು ಹಮ್ಮಿಕೊಂಡ, ಸಾಧಿಸಿದ ಸಾಮಾಜಿಕ ಕಾರ್ಯಗಳು ಅನುಪಮವಾದವುಗಳು. ಅವಶ್ಯಕತೆಯುಳ್ಳ ಸಾವಿರಾರು ಕಣ್ಣೀರನ್ನು ಒರೆಸಿ ಘನ ಕಾರ್ಯ ಮಾಡಿವೆ.
ಇನ್ನೂಒಂದು ಮಹತ್ವದ ಕಾರ್ಯಕ್ರಮವೆಂದರೆ ಅವರು ಕೈಗೆತ್ತಿಕೊಂಡ ‘ಶಾಲೆಗಳಿಗೊಂದು ಲೈಬ್ರರಿ ಕಾರ್ಯಕ್ರಮ’. ನಾನು ಓದಿದಂತೆ ಈಗಾಗಲೇ ಈ ಯೋಜನೆಯಡಿಯಲ್ಲಿಅವರು ಸುಮಾರು ಐವತ್ತು ಸಾವಿರ ಶಾಲೆಗಳಿಗೆ ಲೈಬ್ರರಿಗಳನ್ನು ಒದಗಿಸಿಕೊಟ್ಟಿದ್ದಾರೆ. ಕಂಪ್ಯೂಟರ್ ಶಿಕ್ಷಣದ ಜಾಗೃತಿಗಾಗಿ ಸಾವಿರಾರು ಶಾಲೆಗಳಿಗೆ ಕಂಪ್ಯೂಟರ್ ನೀಡಿದ್ದಾರೆ. ಕಂಪ್ಯೂಟರ್ ಕಲಿಕೆಯ ಮೇಲೆ ಪ್ರಾಥಮಿಕ ಶಾಲೆಗಳಲ್ಲಿ ಒತ್ತು ನೀಡಿದ್ದಾರೆ. ಇನ್ನೂಒಂದು ಮಹತ್ವದ ವಿಷಯವೆಂದರೆ ಅವರುಹಮ್ಮಿಕೊಂಡ ಕಾರ್ಯಕ್ರಮದಡಿಯಲ್ಲಿ ಈಗಾಗಲೇ ಹಳೆಯ ಮತ್ತು ಶ್ರೇಷ್ಠ ಪುಸ್ತಕಗಳ ‘ಮೂರ್ತಿ ಲೈಬ್ರರಿ ಆಫ್‌ಇಂಡಿಯಾ’ ಅನ್ನುಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ದತ್ತಿಯಾಗಿ ಆರಂಭಿಸಿದ್ದಾರೆ. ಕಾನ್ಪುಪುರ್ ಐಐಟಿಯಲ್ಲಿರುವ ಕಂಪ್ಯೂಟರ್ ಸೈನ್‌ಸ್ ವಿಭಾಗ ಹಾಗೂ ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರಿನ ಗ್ರಂಥಾಲಯಗಳನ್ನು ಇನ್‌ಫೋಸಿಸ್ ಫೌಂಡೇಶನ್ ದತ್ತಿಯಾಗಿ ನೀಡಿದೆ. ಅವರು ಹಲವು ಸಾಹಿತ್ಯ ಕೃತಿಗಳನ್ನು, ಪ್ರವಾಸ ಕಥನಗಳನ್ನು, ತಾಂತ್ರಿಕ ಪುಸ್ತಕಗಳನ್ನು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದಾರೆ. ಸಿನಿಮಾಗಳ ಕುರಿತುತೀವ್ರ ಆಸಕ್ತಿ ಹೊಂದಿರುವ ಅವರು ಸ್ವತಃ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿಗಳು ಸುಧಾ ಮೂರ್ತಿಯವರ
ಇನ್ನೂ ಒಂದು ಮಾತು ಹೇಳಬೇಕು. ಬಹುಶಃ ಭಾರತೀಯ ಮಹಿಳಾವಾದದ ಪರಿಕಲ್ಪನೆಗೆ ಅವರೊಂದು ಉತ್ತಮ ಉದಾಹರಣೆ. ಮಹಿಳೆಯೊಬ್ಬರು ಭಾರತೀಯ, ಕರ್ನಾಟಕದ ಸಾಂಸ್ಕೃತಿಯ ಚೌಕಟ್ಟನ್ನು ಬಿಟ್ಟುಕೊಳ್ಳದೆಯೇ ಅಥವಾ ವಿದೇಶೀಕರಣಗೊಳ್ಳದೆಯೇ ಹೇಗೆ ವಿಶ್ವಮಟ್ಟದಲ್ಲಿ ಬೆಳೆಯಬಹುದು ಎನ್ನುವುದಕ್ಕೆ ಇದು ಸಾಕ್ಷಿ. ಒಟ್ಟಾರೆ ಕನ್ನಡ ಸಂಸ್ಕೃತಿ ಹಾಗೂ ಜಾಗತೀಕರಣದ ಹದವಾದ ಪಾಕವನ್ನು ತಮ್ಮ ವ್ಯಕ್ತಿತ್ವವಾಗಿಕೊಂಡಿರುವ ಈ ಮಹಾನ್ ಮಹಿಳೆ ದೇಶದ ಕೋಟ್ಯಂತರ ಯುವತಿಯರಿಗೆ ಮಾದರಿಯಾಗಿ ನಿಲ್ಲಬಲ್ಲವರು.

Related Articles

One Comment

  1. Dear Sir:

    Thank you for the above article on Sudha Murthy.
    I was quite pleased to read the great work done by smt. Sudha Murthy in your article.

    Raj Bykadi

Leave a Reply

Your email address will not be published. Required fields are marked *

Language
Close