About Us Advertise with us Be a Reporter E-Paper

Breaking Newsರಾಜ್ಯ
Trending

ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಗೆ ಹೋಗುವೆ: ಸತೀಶ ಜಾರಕಿಹೊಳಿ

ಬೆಳಗಾವಿ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನಲ್ಲಿ ನಡೆಯುವ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಗೆ ಹೋಗುವುದಾಗಿ ಶಾಸಕ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕ ಸತೀಶ ಜಾರಕಿಹೊಳಿ ಹೇಳಿದರು.

ಬುಧವಾರ ಮಾತನಾಡಿದ ಅವರು, “ಸರಕಾರ ರೈತರು ಹಾಗೂ ಕಾರ್ಖಾನೆ ಮಾಲೀಕರ ರಕ್ಷಣೆ ಮಾಡಬೇಕು. ರೈತರು, ಕಾರ್ಖಾನೆ ಮಾಲೀಕರು ಇಬ್ಬರು ಉಳಿಯಬೇಕು. ಹೀಗಾಗಿ ಸರಕಾರ ಎಲ್ಲರ ಪರವಾಗಿ ಇರಬೇಕಾಗುತ್ತೆ” ಎಂದರು. “ನನ್ನ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ನೀಡಬೇಕಾದ ಯಾವುದೇ ಬಾಕಿ ಹಣವನ್ನು ಇಟ್ಟುಕೊಂಡಿಲ್ಲ. ನಾಳೆ ಸಭೆಯಲ್ಲಿ ಸಿಎಂ ಎಲ್ಲ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದರು.

ಈ ವೇಳೆ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿರುವ ವದಂತಿಯ ಕುರಿತು ನನಗೆ ಮಾಹಿತಿ ಇಲ್ಲ ಅವರನ್ನೇ ಕೇಳಿ ಎಂದು ಜಾರಿಕೊಂಡರು.

Tags

Related Articles

Leave a Reply

Your email address will not be published. Required fields are marked *

Language
Close