About Us Advertise with us Be a Reporter E-Paper

ವಿ +

ಮಿತ್ರನಂತಿರುವ ಶತ್ರುವೇ ಆತ್ಮಹತ್ಯೆ

* ನಾಗು ಹೆಚ್ ಪುರ

ಸಾಮಾನ್ಯವಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇ ಬೇಕು. ಮನುಷ್ಯ ಯಾವಾಗ ಜನಿಸುತ್ತಾನೆ ಎಂದು ಒಂದು ಅಂದಾಜಿನ ಮೇಲೆ ಮುಂಚಿತವಾಗಿ ಹೇಳಬಹುದೇ ಹೊರತು ಅದೇ ಮನುಷ್ಯ ಯಾವ ದಿನ, ಯಾವ ಸಮಯದಲ್ಲಿ ಸಾಯುತ್ತಾನೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಈ ಎಂಬುದು ಯಾವ ಸಮಯದಲ್ಲಿ ಯಾವ ರೂಪದಲ್ಲಿ ಹೇಗೆ ಬರುತ್ತದೆ ಯಾರಿಗೆ ಬರುತ್ತದೆ ಎಂದು ಊಹಿಸಲಸಾಧ್ಯ. ನಿಜ ಹೇಳಬೇಕೆಂದರೆ ಈ ಪ್ರಪಂಚದಲ್ಲಿ ಸಾವಿಗೆ ಹೆದರದ ಮನುಷ್ಯನೇ ಇಲ್ಲ, ಪ್ರತಿಯೊಬ್ಬರಿಗೂ ಸಾವು ನಡುಕ ಹುಟ್ಟಿಸುತ್ತದೆ. ಆದರೆ ಇತ್ತೀಚೆಗೆ ಮನುಷ್ಯನ ಸಾವು ದೈವ ನಿಶ್ಚಿತ ಎನ್ನುವುದಕ್ಕಿಂತ ಸ್ವಯಂ ನಿಶ್ಚಿತವಾಗಿ ಮಾರ್ಪಾಡಾಗುತ್ತಿರುವುದು ಮಾತ್ರ ಹೇಯ ಕೃತ್ಯವೇ ಸರಿ.

ಮನುಷ್ಯನಿಗೆ ದೈಹಿಕವಾಗಿ ಕಾಯಿಲೆಗಳು ಬಂದರೆ ಔಷಧಿ ತೆಗೆದುಕೊಂಡು ಗುಣಪಡಿಸಿಕೊಳ್ಳಬಹುದು ಆದರೆ ಆಂತರಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಿರುವವರಿಗೆ ಯಾವುದೇ ಕೊಟ್ಟರು ಗುಣವಾಗಲು ಸಾಧ್ಯವಾಗುವುದಿಲ್ಲ. ಇಂತಹವರ ಕೊನೆಯ ಔಷಧಿ ಯಾವುದೆಂದರೆ, ಅದು ‘ಆತ್ಮಹತ್ಯೆ’. ಆತ್ಮಹತ್ಯೆ ಮಾಡಿಕೊಂಡರೆ ಎಲ್ಲಾ ಆಂತರಿಕ ಸಮಸ್ಯೆಗಳಿಂದ ಪರಿಹಾರ ಸಿಕ್ಕಂತೆ ಎನ್ನುವುದ ಕೆಲವರ ಭಾವನೆ. ಇತ್ತೀಚಿನ ದಿನಗಳಲ್ಲಿ ಈ ಆತ್ಮಹತ್ಯೆ ಎಂಬುದು ಜನಸಂಖ್ಯೆ ಬೆಳೆಯುವ ರೀತಿಯಲ್ಲಿ ಬೆಳೆಯುತ್ತಲೇ ಇದೆ. ಸರಿಯಾಗಿ ಬುದ್ದಿ ಬೆಳೆವಣಿಗೆಯಾಗದೆ ಇರುವ ಇನ್ನು ಸರಿಯಾಗಿ ಸಮಾಜವನ್ನು ತಿಳಿಯದ ವಿದ್ಯಾರ್ಥಿಗಳು ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ತುಂಬಾ ನೋವಿನ ಸಂಗತಿ. ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗದೆ ಹೇಡಿಗಳಂತೆ ಸಾವಿಗೆ ದೊಡ್ಡ ಸಾಧನೆ ನ್ನುವಂತಾಗಿಬಿಟ್ಟಿದೆ.

ಈ ಆತ್ಮಹತ್ಯೆಗೆ ಕಾರಣಗಳೆಂದರೆ ಆರ್ಥಿಕ ಸಮಸ್ಯೆ, ಓದುವ ವಿಷಯದಲ್ಲಿ ಒತ್ತಡ, ಪ್ರೀತಿಯಲ್ಲಿ ನಿರಾಸೆ, ಸೊನ್ನೆಯಿಂದ ಸ್ವಲ್ಪ ಮೇಲಿರುವ ಅಥವಾ ಸಣ್ಣ ತಪ್ಪಿಗೆ ಕಳೆದುಕೊಂಡ ಒಂದಂಕಿಯ ಮಾರ್ಕ್‌ಸ್, ಭಯ, ಜವಾಬ್ದಾರಿಯನ್ನು ನಿಭಾಯಿಸಲು ಆಗದೆ ಇರುವುದು, ಜೀವನದ ಜಿಗುಪ್ಸೆ, ಅವಮಾನ, ಇನ್ನು ಹಲವು. ಎಲ್ಲಾ ಸಮಸ್ಯೆಗೂ ನಮ್ಮ ಯುವಜನತೆಗೆ ಕಾಣ ಸಿಗುವ ಏಕೈಕ ಮಾರ್ಗ ಆತ್ಮಹತ್ಯೆ. ಆದರೆ ಈ ಮಾರ್ಗವನ್ನು ಬಿಟ್ಟು ಬೇರೆ ದಾರಿ ಹೊಳೆಯಲು ಏನು ತಿಳಿದುಕೊಳ್ಳಿ.

*ಯಾರಾದರೂ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಒಂದು ಚಿಕ್ಕ ಸುಳಿವು ಸಿಕ್ಕ ತಕ್ಷಣ ಅವರನ್ನು ಆ ಯೋಚನೆಯಿಂದ ಹೊರ ತರುವ ಕೆಲಸವನ್ನು ಪೋಷಕರು, ಸಹಪಾಠಿಗಳು, ನೆರೆಹೊರೆಯವರು ಅಥವಾ ಶಿಕ್ಷಕರು ಮಾಡಲೇ ಬೇಕಾಗುತ್ತದೆ.

*ಅವರನ್ನು ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಬೇಕು, ಅವರ ಮನಸ್ಸಿನ ಭಾವನೆಗಳನ್ನು ಬದಲಾವಣೆ ಮಾಡಬೇಕು.

*ಅವರಲ್ಲಿ ಬದುಕುವ ಆಸೆ ಹುಟ್ಟಿಸಬೇಕು.

*ಆತ್ಮಹತ್ಯೆ ಬಗ್ಗೆ ಯೋಚಿಸುವವರನ್ನು ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿ ಬಿಡಬಾರದು ಅವರ ಜತೆ ಒಬ್ಬರು ಇರಬೇಕು ಮತ್ತು ಅವರಿಗೆ ಬದುಕಿನ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕು.

* ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುವರಿಗೆ ಜೀವನದಲ್ಲಿ ಸೋತು ಗೆದ್ದವರ ಹಲವಾರು ನಿದರ್ಶನಗಳನ್ನು ಹೇಳುತ್ತಿರಬೇಕು ಮತ್ತು ಅವರಿಗೆ ಆತ್ಮಹತ್ಯೆ ಬಗ್ಗೆ ಯೋಚಿಸಲು ಸಮಯ ಕೊಡದ ಹಾಗೆ ಅವರಿಗೆ ಒಂದಲ್ಲ ಒಂದು ಕೆಲಸಗಳಲ್ಲಿ, ಚಟುವಟಿಕೆಯಲ್ಲಿ ತೊಡಗುವಂತೆ ಸಹಕರಿಸಬೇಕು.

* ನೀನು ಒಬ್ಬಂಟಿಯಲ್ಲಿ ನಿನಗಾಗಿ ಜೀವಿಸುವವರು ಇದ್ದಾರೆ ಹಾಗೆ ನಿನ್ನ ನಂಬಿ ಜೀವಿಸುವವರಿದ್ದಾರೆ ಎಂದು ಮನವರಿಸಬೇಕು.

* ಖಿನ್ನತೆಗೆ ಒಳಗಾಗಿರುವವರ ಯಾವುದೇ ಕಾರಣಕ್ಕೂ ಹರಿತ ಆಯುಧಗಳು, ಕೀಟನಾಶಕ, ಮಾತ್ರೆಗಳನ್ನು ಕೈಗೆ ಸಿಗುವ ಹಾಗೆ ಇಡಬಾರದು.

*‘ಕಷ್ಟ, ನೋವು, ಸಂಕಟ, ಸಮಸ್ಯೆ ಎಂಬುದು ಮನುಷ್ಯನಿಗೆ ಬರುವುದು ಸಹಜ. ಅದಕ್ಕೆ ಆತ್ಮಹತ್ಯೆಯೊಂದೆ ಪರಿಹಾರವಲ್ಲ? ಅದರಿಂದ ನಿಮ್ಮನ್ನ ನಾಶಮಾಡಿಕೊಳ್ಳವುದರ ಜತೆಗೆ ಮನೆಯವರಿಗೆ ನೋವು ? ಹಾಗಾಗಿ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಖಂಡಿತ ಇರುತ್ತದೆ. ಆತ್ಮಹತ್ಯೆ ಎಂಬುದನ್ನು ಕನಸಿನಲ್ಲೂ ಸಹ ಯೋಚಿಸಬೇಡಿ. ಈ ಆತ್ಮಹತ್ಯೆ ಎಂಬುದು ಮನುಷ್ಯನ ಧೈರ್ಯವನ್ನು ನುಂಗುವ ಕಾಯಿಲೆ ಇದಕ್ಕೆ ಬಲಿ ಅಗಬೇಡಿ.’ ನಿಧಾನವಾಗಿ ಅವರ ಮನವೊಲಿಸಿ.

Tags

Related Articles

Leave a Reply

Your email address will not be published. Required fields are marked *

Language
Close