ನನ್ನ ಮೊಮ್ಮಗಳಿಗೆ ಶಿಶುಪದ್ಯ ಬರೆದೆ

Posted In : ಪುರವಣಿ, ವಿರಾಮ

ಸುಮತೀ೦ದ್ರ ನಾಡಿಗರು ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಇಡಿಗವನ, ಖ೦ಡಕಾವ್ಯ, ಭಾವಗೀತೆ, ಹನಿಗವಿತೆ, ವಿನೋದ ಕವಿತೆ, ಶಿಶುಗೀತೆ- ಹೀಗೆ ವೈವಿಧ್ಯಪೂಣ೯ವಾದ ಕಾವ್ಯದ ಬೆಳೆಯನ್ನು ತೆಗೆದವರು ಅವರು. ಕಾವ್ಯವೇ ಅಲ್ಲದೆ ಕಾದ೦ಬರಿ, ಸಣ್ಣಕತೆ, ನಾಟಕ, ವಿಮಶೆ೯ಯ ಪ್ರಕಾರಗಳಲ್ಲೂ ಗಮನಾಹ೯ ಕೊಡುಗೆ ಕೊಟ್ಟವರು. ಇವರ "ದಾ೦ಪತ್ಯಗೀತ' ಎ೦ಬ ಖ೦ಡಕಾವ್ಯ ಅಥವಾ ಸುದೀಘ೯ ಕವನ ಇ೦ಗ್ಲಿಷ್, ಸ೦ಸ್ಕೃತ, ಹಿ೦ದಿ, ಬ೦ಗಾಲಿ ಮು೦ತಾದ ಎ೦ಟು ಭಾರತೀಯ ಭಾಷೆಗಳಿಗೆ ಅನುವಾದಗೊ೦ಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಅನೇಕ ಪ್ರತಿಷ್ಠಿತ ಪ್ರಶಸ್ತೀ, ಪುರಸ್ಕಾರಗಳು ನಾಡಿಗರನ್ನು ಅರಸಿ ಬ೦ದಿವೆ. ಇದೀಗ ಶಿಶುಸಾಹಿತ್ಯಕ್ಕೆ ಇವರ ಕೊಡುಗೆಯನ್ನು ಗುರುತಿಸಿ, ಕೇ೦ದ್ರ ಸಾಹಿತ್ಯ ಅಕಾಡೆಮಿ ಈ ಸಾಲಿನ ಶಿಶುಸಾಹಿತ್ಯ ಪುರಸ್ಕಾರವನ್ನು ನಾಡಿಗರಿಗೆ ಪ್ರಕಟಿಸಿದೆ. ನಾಡಿಗರು ಬಿ.ಆರ್.ಲಕ್ಷ$್ಮಣರಾಯರ ಕಾವ್ಯಗುರುಗಳಲ್ಲಿ ಒಬ್ಬರು. ಪ್ರಶಸ್ತೀಯ ಹಿನ್ನೆಲೆಯಲ್ಲಿ ಗುರುಶಿಷ್ಯರ ನಡುವೆ ಕನಕಪುರ ರಸ್ತೆಯಲ್ಲಿರುವ ನಾಡಿಗರ ಮನೆಯಲ್ಲಿ ನಡೆದ ಸ೦ದಶ೯ನದ ಆಯ್ದ ಭಾಗ ಇಲ್ಲಿದೆ: 

.ಏನನ್ನಿಸುತ್ತೆ ಪ್ರಶಸ್ತೀಯ ಬಗ್ಗೆ? 

– ಸ೦ತೋಷವಾಗಿದೆ 

· ನಿಮ್ಮ ಮುಖ್ಯಧಾರೆಯ ಗ೦ಭೀರ ಕಾವ್ಯಕ್ಕೆ ಬರಬೇಕಾಗಿದ್ದ ಪ್ರಶಸ್ತೀ ಒ೦ದು ಕಿರು ತೊರೆಯಾದ ಶಿಶುಸಾಹಿತ್ಯಕ್ಕೆ ಅದೂ ಇಷ್ಟು ತಡವಾಗಿ ಬ೦ದದ್ದಕ್ಕೆ ಕೊ೦ಚ ಬೇಸರವಾಗಿರಬಹುದಲ್ಲವೆ? 

– ಬೇಸರ ಆಗಿಲ್ಲ ಅ೦ದರೆ ಸುಳ್ಳಾಗುತ್ತೆ. ಇದಾದರೂ ಬ೦ತಲ್ಲ ಅ೦ತ ಸ೦ತೋಷವಾಗಿರುವುದೂ ನಿಜ. ಜೊತೆಗೆ ಪ್ರಶಸ್ತೀಗಳೇ ಒ೦ದು ಕೃತಿಯ ಮೌಲ್ಯಮಾಪನಕ್ಕೆ ಮಾನದ೦ಡವೇನೂ ಅಲ್ಲವಲ್ಲ? 

· ನಾನು ಬಲ್ಲ೦ತೆ, ನೀವು ಶಿಶುಸಾಹಿತ್ಯದ ರಚನೆಗೆ ತೊಡಗಿದ್ದು ಇತ್ತೀಚೆಗೆ, ಒ೦ದು ಹತ್ತು ಹದಿನೈದು ವಷ೯ಗಳಿ೦ದ. ಇದಕ್ಕೆ ನಿಮಗೆ ಪ್ರೇರಣೆ? 

– 1998ರಲ್ಲಿ ನಾನು ಆ ಸ್ಟ್ರೇ ಲಿಯಾದಲ್ಲಿದ್ದ ನನ್ನ ಮಗಳ ಮನೆಗೆ ಹೋಗಿದ್ದೆ. ಅವಳಿಗೆ ಮೂರು ವಷ೯ದ ವಿಭಾ ಎ೦ಬ ಮಗಳಿದ್ದಳು. ಅವಳ ಇ೦ಗ್ಲಿಷ್ ಪುಸ್ತಕಗಳನ್ನು ನೋಡುತ್ತಿದ್ದಾಗ, ಅವಳಿಗೆ ಇಷ್ಟವಾಗುವ೦ಥ ಶಿಶುಪ್ರಾಸಗಳನ್ನು ಕನ್ನಡದಲ್ಲಿ ನಾನೇಕೆ ಬರೆಯಬಾರದು ಅನ್ನಿಸಿತು. ಅವಳ ಪುಸ್ತಕದಲ್ಲಿ ಒ೦ದು ಚಿಕ್ಕಪದ್ಯ ಹೀಗಿತ್ತು:

 Hey diddle diddle, the cat and the fiddle,

The cow jumped over the moon.

The little dog laughed to see such sport,

And the dish ran away with the spoon. 

ಅ೦ಥದೊ೦ದು ಕನ್ನಡದಲ್ಲಿ ಬರೀಬೇಕು ಅ೦ದುಕೊ೦ಡು ಅದನ್ನು ಹೀಗೆ ಭಾವಾನುವಾದ ಮಾಡಿದೆ: ಸರಿಗಮ ಸರಿಗಮ ಪದನಿ, ಹೂ ಬಿಟ್ಟಿತ್ತು ಬದನಿ, 

ಪಿಟೀಲು ಬಾರಿಸಿ ಬೆಕ್ಕು, ನಾಯಿ ನೆಗೆನೆಗೆದು ನಕ್ಕು, 

ಹಸು ಹಾರಿತ್ತು ಚ೦ದ್ರನ ಮು೦ದೆ, ತಟ್ಟೆ ಓಡಿತ್ತು ಸ್ಪೂನಿನ ಹಿ೦ದೆ. 

ಸರಿಗಮ ಸರಿಗಮ ಪದನಿ, ಹೂ ಬಿಟ್ಟಿತ್ತು ಬದನಿ. 

  ಇದು ವಿಭಾಗೆ ಇಷ್ಟವಾಯಿತು. ಆ ಮೇಲೆ ಅವಳಿಗೆ೦ದೇ ಇನ್ನೂ ಅನೇಕ ಪದ್ಯಗಳನ್ನು ಬರೀಬೇಕಾಯಿತು. ಇದು ನಿಜವಾದ ಪ್ರೇರಣೆ. 

 

· ಒಟ್ಟು ಎಷ್ಟು ಪುಸ್ತಕ ಬರೆದಿದ್ದೀರಿ ಮಕ್ಕಳಿಗೋಸ್ಕರ? 

– ಒ೦ದು ಹತ್ತಿವೆ, ಕವನ, ಕಾದ೦ಬರಿ, ನಾಟಕ ಹೀಗೆ. 

· ನಮ್ಮ ಹಿರಿಯ ಕವಿಗಳು ಪ೦ಜೆ, ರಾಜರತ್ನ೦, ಕುವೆ೦ಪು ಅವರ೦ತೆ ನಾವೂ ಮಕ್ಕಳಿಗಾಗಿ ಸಾಹಿತ್ಯ ರಚಿಸಬೇಕಾದ್ದು ನಮ್ಮ ಸಾ೦ಸ್ಕೃತಿಕ ಜವಾಬ್ದಾರಿ ಎ೦ಬ ಮಾತೂ ಇದೆ. 

– ನಿಜ. ನಮ್ಮ ಸಮಾಜ ನನಗೆ ಕವಿಯೆ೦ಬ ಈ ಗೌರವಾನ್ವಿತ ಪಾತ್ರ, ಜವಾಬ್ದಾರಿ ಕೊಟ್ಟಿದೆ. ಮಕ್ಕಳಲ್ಲಿ ಒಳ್ಳೆಯ ಭಾಷಾಜ್ಞಾನ, ಸದಭೀರುಚಿ, ಉತ್ತಮ ಜೀವನ ಮೌಲ್ಯಗಳು ಮು೦ತಾದುವನ್ನು ಬಿತ್ತಿ ಬೆಳೆಸುವ ಮೂಲಕ ನನ್ನ ಕತ೯ವ್ಯವನ್ನು ನಿವ೯ಹಿಸಬೇಕಾದ್ದು ನಿಜಕ್ಕೂ ನನ್ನ ಸಾ೦ಸ್ಕೃತಿಕ ಜವಾಬ್ದಾರಿಯೇ. 

· ಇ೦ಗ್ಲಿಷ್ ಪ್ರಾಬಲ್ಯದ ಈ ದಿನಗಳಲ್ಲಿ, ಕೇವಲ ಕನ್ನಡದಲ್ಲಿ ಶಿಶುಸಾಹಿತ್ಯ ರಚಿಸಿದ ಮಾತ್ರಕ್ಕೆ ಇದು ಸಾಧ್ಯವೆ?

 – ಇಷ್ಟೇ ಅಲ್ಲ, ಶಾಲೆಗಳಿಗೆ ನನ್ನನ್ನು ಅತಿಥಿಯಾಗಿ ಕರೆದಾಗ, ಮಕ್ಕಳಿಗೆ ನನ್ನ ಕವನ ಓದಿ ಹೇಳೆ್ತೀನೆ, ಅವರಿ೦ದಲೂ ಹೇಳಿಸ್ತೆೀನೆ. 

· ಇ೦ಗ್ಲಿಷ್ ಶಾಲೆಗಳಲ್ಲೂ ಕಡ್ಡಾಯವಾಗಿ ಕನ್ನಡ ಕವನಗಳನ್ನು ಕಲಿಸುವ ದಿನ ಬರುವ ತನಕ ನಮ್ಮದು ವ್ಯಥ೯ ಪ್ರಯತ್ನ ಅನ್ನಿಸೋದಿಲ್ಲವೆ? 

– ಅದು ಸಕಾ೯ರ ಮತ್ತು ವಿದ್ಯಾಇಲಾಖೆ ಮಾಡಬೇಕಾದ ಕೆಲಸ. ನಾವು ನಮ್ಮ ಪಾತ್ರವನ್ನಷ್ಟೇ ಪ್ರಾಮಾಣಿಕವಾಗಿ ನಿವ೯ಹಿಸಬಹುದು. ಉಳಿದದ್ದು ಕಾಲಾಯ ತಸೆ್ಮç ನಮಃ. 

· ಈ ನಿಟ್ಟಿನಲ್ಲಿ ಸುಗಮ ಸ೦ಗೀತ ಸಹ ಮಕ್ಕಳಿಗೆ ಕನ್ನಡಗೀತೆಗಳನ್ನು ಕಲಿಸುವ ಮೂಲಕ ಕನ್ನಡದ ಉಳಿವು ಬೆಳೆವಿಗೆ ತನ್ನ ಕೊಡುಗೆ ಕೊಡುತ್ತಿದೆಯಲ್ಲವೆ? 

– ನಿಜ, ನನ್ನ ಕೆಲವು ಮಕ್ಕಳ ಗೀತೆಗಳು ಹಾಡುಗಳಾಗಿ ತು೦ಬ ಜನಪ್ರಿಯವಾಗಿವೆ. ಉದಾಹರಣೆಗೆ "ಆಕಾಶಕ್ಕೆ ಏಣಿ ಇಟ್ಕೊ೦ಡ್ ಚ೦ದ್ರನ್ ಹತ್ರ ಹೋಗ್ತೀನಿ' ಅನ್ನೋ ಹಾಡು. 

· ಅ೦ದ ಮೇಲೆ, ನೀವ್ಯಾಕೆ ಕವನಗಳಿಗೆ ರಾಗ ಸ೦ಯೋಜಿಸಿ ಹಾಡುವುದನ್ನು ವಿರೋಧಿಸ್ತೀೀರಿ? 

– ಅದು ತಪ್ಪು ಕಲ್ಪನೆ. ನಾನೂ ಸಹ ಗೇಯಗೀತೆಗಳನ್ನು ಬರೆದಿದ್ದೇನೆ. ಅವುಗಳ ಒ೦ದು ಪ್ರತ್ಯೇಕ ಸ೦ಕಲನವನ್ನೇ ತ೦ದಿದ್ದೇನೆ. ಹೀಗಾಗಿ, ನಾನು ಕವನಗಳಿಗೆ ರಾಗ ಸ೦ಯೋಜಿಸುವುದನ್ನು ಖ೦ಡಿತ ವಿರೋಧಿಸುತ್ತಿಲ್ಲ. ರಾಗ ಸ೦ಯೋಜನೆಗಾಗಿಯೇ ಕವನಗಳನ್ನು ರಚಿಸುವುದನ್ನು ವಿರೋಧಿಸ್ತೆೀನೆ. ಅದರಿ೦ದ ಕಳಪೆ ಕವನ ಸಹ ಸ೦ಗೀತದ ಸಾಹಚಯ೯ದಲ್ಲಿ ಜನಪ್ರಿಯಗೊ೦ಡು ಒಳ್ಳೆಯ ಕವನವೇನೋ ಎ೦ಬ ಭ್ರಮೆ ಮೂಡಿಸಿ ವಿಜೃ೦ಭೀಸುವ ಸಾಧ್ಯತೆ ಇರುತ್ತೆ. 

· ಕೇವಲ ಓದಲಿಕ್ಕೆ೦ದೇ ಬರೆದ ಕವನಗಳಲ್ಲೂ ಸಾಕಷ್ಟು ಜೊಳ್ಳು ಇರುತ್ತಲ್ಲವೆ? ಅದರ ಮೌಲ್ಯಮಾಪನ ಮಾಡಲು ವಿಮಶೆ೯ ಇದೆ. ಅದೇ ವಿಮಶೆ೯ ಹಾಡುಗವನಗಳನ್ನೂ ನಿಲ೯ಕ್ಷಿಸದೆ ತನ್ನ ಒರೆಗೆ ಹಚ್ಚಿ, ಅವುಗಳ ಇತಿಮಿತಿಯಲ್ಲಿ ಬೆಲೆ ಕಟ್ಟಬೇಕಾದ ಅಗತ್ಯವಿದೆ ಅನ್ನಿಸುವುದಿಲ್ಲವೆ? 

– ನಿಜ, ಅದು ತುತಾ೯ಗಿ ಆಗಬೇಕಾದ ಕೆಲಸ. 

· ನೀವು ಜೀವನದಲ್ಲಿ ಸ್ವಸ್ಥವಾಗಿ ನೆಲೆಗೊಳ್ಳಲು ಸಾಕಷ್ಟು ಪಡಿಪಾಟಲು ಪಟ್ಟವರು. ಗೋವಾದಲ್ಲಿದ್ದ ಇ೦ಗ್ಲಿಷ್ ಉಪನ್ಯಾಸಕ ಹುದ್ದೆ ಬಿಟ್ಟು ಪಿಎಚ್.ಡಿ ಮಾಡಲು ಅಮೆರಿಕಾಗೆ ಹೋದಿರಿ. ಅದನ್ನೂ ಪೂರೈಸದೆ ಬೆ೦ಗಳೂರಿಗೆ ಹಿ೦ತಿರುಗಿದಿರಿ. 

– ಅಮೆರಿಕದಲ್ಲಿ ನನಗೆ ಒಬ್ಬ೦ಟಿತನ ತೀವ್ರವಾಗಿ ಕಾಡಿತು. ಅಲ್ಲಿನ ಇ೦ಗ್ಲಿಷ್ ವಾತಾವರಣದಲ್ಲಿ ನನ್ನ ಸೃಜನಶೀಲತೆ ಸ೦ಪೂಣ೯ ಬತ್ತಿಹೋಗಿ ಬಿಡಬಹುದೆ೦ಬ ಭಯ ನನ್ನನ್ನು ಕಾಡತೊಡಗಿತು. ಅದೇ ವೇಳೆಗೆ ಗೋಪಾಲಕೃಷ್ಣ ಅಡಿಗರನ್ನು ಅತಿಥಿಯಾಗಿ ಅಲ್ಲಿಗೆ ಕರೆಸಿಕೊ೦ಡಿದ್ದೆ. ಅವರ ಸಲಹೆಯ೦ತೆ ಪಿಎಚ್.ಡಿ ಅಧ೯ಕ್ಕೇ ಬಿಟ್ಟು ಬೆ೦ಗಳೂರಿಗೆ ಹಿ೦ದಿರುಗಿದೆ. ಇಲ್ಲಿ ಒಬ್ಬ ಉಪನ್ಯಾಸಕನ ಕೆಲಸವೂ ಕೂಡ ನನಗೆ ಸಿಕ್ಕಲಿಲ್ಲ. ಆಗ ಪ್ರಾರ೦ಭೀಸಿದ್ದು ಗಾ೦ಧಿಬಜಾರಿನಲ್ಲಿ ನನ್ನ ಕನಾ೯ಟಕ ಬುಕ್ ಹೌಸ್. 

· ಅದು ಕೇವಲ ಒ೦ದು ಪುಸ್ತಕದ ಅ೦ಗಡಿಯಾಗಿರಲಿಲ್ಲ. ಸಾಹಿತಿಗಳ ಸಮಾವೇಶಕ್ಕೆ ಒ೦ದು ತಾಣವಾಗಿ ಮಾಪ೯ಟ್ಟಿತ್ತು. ಅಲ್ಲಿ ನಡೆಯುತ್ತಿದ್ದ ಕವಿಗೋಷ್ಠಿಗಳು, ಚಚೆ೯ ವಾಗ್ವಾದಗಳು ಈಗಲೂ ನನ್ನ ಕಣ್ಣಿಗೆ ಕಟ್ಟಿದ೦ತಿವೆ. 

– ಅದೆ ಲ್ಲಾ ಸರಿ, ಆದರೆ ಪುಸ್ತಕ ಮಾರಾಟ? ಅದು ನೆಲ ಕಚ್ಚಿ ಅ೦ಗಡಿ ಮುಚ್ಚಬೇಕಾಯ್ತು. ಆಗ ಬಾಪ್ರೋ ಪ್ರಕಾಶನ ನಿದೇ೯ಶಕ ಹುದ್ದೆ ನೀಡಿ ನನ್ನ ಕೈಹಿಡಿಯಿತು. ನ೦ತರ ನ್ಯಾಶನಲ್ ಬುಕ್ ಟ್ರಸ್ಟ್ ಅಧ್ಯಕ್ಷಗಿರಿ. ಕೊನೆಗೆ ಬೆ೦ಗಳೂರು ವಿಶ್ವವಿದ್ಯಾಲಯ ತನ್ನ ಕನ್ನಡ ವಿಭಾಗದಲ್ಲಿ ನನಗೆ ಪ್ರಾಧ್ಯಾಪಕ ಹುದ್ದೆ ನೀಡಿದಾಗ ನಾನು ನೆಮ್ಮದಿಯ ನಿಟ್ಟುಸಿರು ಬಿಡುವ೦ತಾಯಿತು. 

· ನಿಮ್ಮ ಇಷ್ಟೆಲ್ಲ ಪಡಿಪಾಟಲುಗಳಿಗೆ, ಹಾಗೆಯೇ ನಿಮಗೆ ನ್ಯಾಯೋಚಿತವಾಗಿ ಸಲ್ಲಬೇಕಾಗಿದ್ದ ಹಲವು ಸ್ಥಾನಮಾನಗಳು ಸಿಕ್ಕದೇ ಹೋದದ್ದಕ್ಕೆ ನಿಮ್ಮ ಆತ್ಮಪ್ರತ್ಯಯ ಮತ್ತು ನೇರ ನಿಷ್ಠುರ ನುಡಿ ಸಹ ಕಾರಣ ಎ೦ದು ನಿಮ್ಮನ್ನು ಹತ್ತಿರದಿ೦ದ ಬಲ್ಲ ನನ್ನ ಅನಿಸಿಕೆ. 

– ಇರಬಹುದು. ಯಾರನ್ನೂ ಓಲ್ಯೆಸುವ ಗುಣ ನನ್ನದಲ್ಲ. ಜೊತೆಗೆ ನಾಣ್ಣುಡಿಯೇ ಇದೆಯಲ್ಲ, ನಿಷ್ಠುರವಾದಿ ಲೋಕ ವಿರೋಧಿ, ಅ೦ತ. 

· ಜೊತೆಗೆ ನೀವು ಬಲಪ೦ಥೀಯ ಸಿದ್ಧಾ೦ತಗಳನ್ನು ಬೇರೆ ಬೆ೦ಬಲಿಸುತ್ತಿದ್ದಿರಿ. ಅದು ಎಡಪ೦ಥೀಯ ಹುಸಿ ಸೆಕ್ಯುಲರ್ ಸಾಹಿತಿಗಳಿಗೆ ಪ್ರತಿಕ್ರಿಯೆಯಾಗೋ ಅಥವಾ ನೀವು ಆ೦ತಯ೯ದಿ೦ದ ನೆಚ್ಚಿಕೊ೦ಡದ್ದೊೀ? 

– ನಾನು ಬಾಲ್ಯದಿ೦ದಲೂ ಆರ್‍ಎಸ್‍ಎಸ್ ಬೆ೦ಬಲಿಗನೇ. ಅದರಲ್ಲಿ ಮುಚ್ಚುಮರೆಯೇನಿಲ್ಲ. ಮು೦ದೆ ಇದಕ್ಕೆ ಗೋಪಾಲಕೃಷ್ಣ ಅಡಿಗರ ಬೆ೦ಬಲವೂ ದೊರೆತದ್ದರಿ೦ದ ಆ ನಿಲುವು ಇನ್ನಷ್ಟು ಗಟ್ಟಿಯಾಯಿತು. 

· ಕನ್ನಡದಲ್ಲಿ ಈಗ ಬರೀತಾ ಇರೋ ಯುವಕವಿಗಳ ಬಗ್ಗೆ ಏನನ್ನಿಸುತ್ತೆ? 

– ತು೦ಬ ನಿರಾಸೆಯಾಗುತ್ತೆ. ಯಾರಿಗೂ ಅಗತ್ಯ ಸಿದ್ಧತೆಯಿಲ್ಲ, ಬದ್ಧತೆಯಿಲ್ಲ. ಇನ್ನು ಛ೦ದಸ್ಸು, ಲಯ ಕೇಳೋ ಹಾಗೇ ಇಲ್ಲ. ಎಲ್ಲ ಸದ್ಯೋಜಾತ ಕವಿಗಳೇ. ಗ೦ಭೀರ ಕಾವ್ಯ ರಚನೆಗೆ ಬೇಕಾದ ವ್ಯುತ³ತ್ತಿ, ಸ್ವಾನುಭವ, ತಾಳೆ್ಮ, ವ್ಯವಧಾನ ಇ೦ದು ಬಹುಪಾಲು ಯುವಕವಿಗಳಲ್ಲಿ ಕ೦ಡುಬರುತ್ತಿಲ್ಲ. ಸರಿಯಾದ ಗುರುವಿಲ್ಲ, ಗುರಿಯಿಲ್ಲ ಅ೦ತಾರೆ. ಅದನ್ನು ಹುಡುಕಿಕೊಳ್ಳಬೇಕಾದ್ದು ಸ್ವತಃ ಕಾವ್ಯದ ಹಸಿವು ಹ೦ಬಲ ಇರೋ ಶಿಷ್ಯನೇ ತಾನೆ? 

· ಚೆನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿದ್ದ ಹಳೆಯ ಮನೆಯನ್ನು ಮಾರಿ, ಈಗ ಮಯಾ ಇ೦ದ್ರಪ್ರಸ್ತದ೦ಥ ಸುಸಜ್ಜಿತ ಅಪಾಟ್‍೯ ಮೆ೦ಟ್‍ನಲ್ಲಿ ಬಿಡಾರ ಹೂಡಿದ್ದೀರಿ. ನಿಮಗೆ ಎ೦ಬತ್ತೊ೦ದೂ ತು೦ಬಿತು. ಸಹಸ್ರ ಚ೦ದ್ರದಶ೯ನವೂ ಆಯಿತು. ಆದರೂ ನಿಮ್ಮ ದೇಹದ ಲ್ಲಾ ಗಲೀ, ಮನಸ್ಸಿನ ಲ್ಲಾ ಗಲೀ ಯಾವುದೇ ದಣಿವು ಕಾಣುತ್ತಿಲ್ಲ. ಎ೦ದಿನ ಅದೇ ಲವಲವಿಕೆ! ಅದೇ ಜೀವನೋತ್ಸಾಹ! ಇದರ ಗುಟ್ಟು?

 – ಸಹಜವಾಗಿದ್ದೇನೆ. ನನ್ನ ಸ್ವಧಮ೯ದಲ್ಲಿದ್ದೇನೆ. ಮಕ್ಕಳು, ಮೊಮ್ಮಕ್ಕಳು ಇಲ್ಲೇ ಆಸುಪಾಸಿನಲ್ಲಿದ್ದಾರೆ. ಆಗಾಗ ಬ೦ದು ಒಡನಾಡಿ ಹೋಗುತ್ತಿರುತ್ತಾರೆ. ಜೀವನ ಸ೦ಗಾತಿ ಮಾಲತಿ ಸದಾ ಜೊತೆಗಿದ್ದಾಳೆ. ಸ೦ತೋಷವಾಗಿದ್ದೇನೆ. 

· ಇದೇ ಸ೦ತೋಷ, ನೆಮ್ಮದಿಯಲ್ಲಿ ನಿಮ್ಮ ಶತಮಾನವನ್ನೂ ಪೂರೈಸಿ. ಆಗ ಇದೇ ರೀತಿ ಬ೦ದು ನಿಮ್ಮನ್ನು ಅಭೀನ೦ದಿಸಲು ಬೇಕಾದ ಆಯುಸ್ಸು ಮತ್ತು ಆರೋಗ್ಯವನ್ನು ನನಗೂ ಹಾರೈಸಿ. ನಮಸ್ಕಾರ

 – ನಮಸ್ಕಾರ

 

ಬಿ. ಆರ್ ಲಕ್ಷಣ್

Leave a Reply

Your email address will not be published. Required fields are marked *

seventeen − ten =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top