Breaking Newsದೇಶಪ್ರಚಲಿತ
ಮತದಾರರ ಪಟ್ಟಿಯಲ್ಲಿ ಆನೆ, ಪಾರಿವಾಳ ಜತೆ ಸನ್ನಿ ಲಿಯೋನ್…!

ಲಖನೌ: ಮತದಾರರ ಪಟ್ಟಿಯಲ್ಲಿ ಆನೆ, ಪಾರಿವಾಳ ಜತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾವಚಿತ್ರ ಕಾಣಿಸಿಕೊಂಡಿರುವ ಪ್ರಕರಣ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಕಂಡು ಬಂದಿವೆ.
ಲೋಕಸಭೆ ಚುನಾವಣೆ ಸಮೀಸಿಸುತ್ತಿದಂತೆ ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಪ್ರಕ್ರಿಯೆ ನಡೆಯುತ್ತವೆ. ಆದರೆ ಬಲಿಯಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರುಗಳ ಜತೆ ಆನೆ, ಪಾರಿವಾಳ, ಸನ್ನಿ ಲಿಯೋನ್ ಮತ್ತು ಜಿಂಕೆ ಸ್ಥಾನ ಗಿಟ್ಟಸಿಕೊಂಡಿವೆ. ಈ ಅವಘಡಗಳಿಗೆ ವ್ಯಾಪಕ ಟೀಕೆಗಳು ಎದುರಾಗುತ್ತಿದ್ದಂತೆ ಈ ಪಟ್ಟಿಯನ್ನು ಹಿಂಪಡೆಯಲಾಗಿದೆ.
ಬಲಿಯಾದ ವಿವೇಕಾನಂದ ಕಾಲೋನಿಯ ದುರ್ಗಾವತಿ ಸಿಂಗ್ ಅವರ ಹೆಸರಿನ ಜೊತೆಗೆ ಸನ್ನಿ ಲಿಯೋನ್ ಅವರ ಚಿತ್ರವನ್ನು ಜೋಡಿಸಲಾಗಿದೆ. ಕುನ್ವಾರ್ ಅಂಕುರ್ ಸಿಂಗ್ ಎನ್ನುವರ ಚಿತ್ರದ ಬದಲು ಜಿಂಕೆಯ ಚಿತ್ರ ಪ್ರಕಟವಾಗಿದೆ. ರಾಜ್ಯದ ಮಾಜಿ ಸಚಿವ ನಾರದ್ ರೈ ಅವರ ಭಾವಚಿತ್ರ ಇರಬೇಕಾದ ಜಾಗದಲ್ಲಿ ಆಫ್ರಿಕಾ ಆನೆಯ ಚಿತ್ರ ಕಾಣಿಸಿಕೊಂಡಿದೆ. ಇದೇ ರೀತಿ ಇನ್ನೂ ಹಲವರ ನಾಪತ್ತೆಯಾಗಿದ್ದು ಪ್ರಣಿ ಪಕ್ಷಿಗಳ ಚಿತ್ರಗಳು ಪ್ರಕಟವಾಗಿವೆ.
ಇದು ಕೇವಲ ತಾತ್ಕಾಲಿಕ ಪಟ್ಟಿಗೆ ಹಾಕಿರುವ ಚಿತ್ರಗಳಾಗಿವೆ. ಅಂತಿಮ ಪಟ್ಟಿಯನ್ನು ಪರೀಕ್ಷಿಸಿಯೇ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.