About Us Advertise with us Be a Reporter E-Paper

Breaking Newsದೇಶಪ್ರಚಲಿತ

ರಾಜಸ್ಥಾನದ ಸಾಮೂಹಿಕ ಹಲ್ಲೆಯ ವಿರುದ್ಧ ಕೈಗೊಂಡ ಕ್ರಮದ ಕುರಿತು ಪ್ರಶ್ನಿಸಿದ ಸುಪ್ರೀಂ

ದೆಹಲಿ: ರಾಜಾಸ್ತಾನದ ಅಲ್ವಾರ್​ ಜಿಲ್ಲೆಯಲ್ಲಿ ಜು.20ರಂದು ನಡೆದ ಸಾಮೂಹಿಕ ಹತ್ಯೆಗೆ ಸಂಬಂಧಪಟ್ಟಂತೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸುಪ್ರೀಂಕೋರ್ಟ್​ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಸಾಮೂಹಿಕ ಹಲ್ಲೆ ಹಾಗೂ ಹತ್ಯೆ ವಿರುದ್ಧ ಸುಪ್ರೀಂ ಎಚ್ಚರಿಕೆ ಕೊಟ್ಟಿದ್ದರೂ 20 ರಂದು ಹಸು ಕಳ್ಳಸಾಗಣೆ ಮಾಡುತ್ತಿದ್ದ ಎಂಬ ಆರೋಪದ ಮೇಲೆ ರಕ್ಬರ್​ ಖಾನ್​ ಎಂಬುವನ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಿದ್ದು, ಆತ ಮೃತಪಟ್ಟಿದ್ದ. ಅಲ್ಲದೆ, ಆತನನ್ನು ಪೊಲೀಸರು ಬೇಗ ಆಸ್ಪತ್ರೆಗೆ ಸೇರಿಸದೆ ಅವರ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟಿದ್ದ ಎಂಬ ಆರೋಪವೂ ಕೇಳಿಬಂದಿತ್ತು.

ಈ ಗಲಭೆ ಸಂಬಂಧ ರಾಜಸ್ತಾನ ಸರ್ಕಾರದ ವಿರುದ್ಧ ತುಷಾರ್​ ಗಾಂಧಿ ಹಾಗೂ ಕಾಂಗ್ರೆಸ್​ ಮುಖಂಡ ತೆಹ್ಸೆನ್​ ಪೂನವಾಲ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್​ ತೀರ್ಪಿನ ನಂತರವೂ ದೊಂಬಿ ಹತ್ಯೆ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಪ್ರಕರಣದ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಲು ಸೂಚಿಸಿದೆ.

ಸೋಮವಾರ ಅರ್ಜಿ ವಿಚಾರಣೆ ನಡೆಸಿದ ದೀಪಕ್​ ಮಿಶ್ರಾ ನೇತೃತ್ವದ ಪೀಠ, ಸಾಮೂಹಿಕ ಹಲ್ಲೆ, ಹತ್ಯೆ ಘಟನೆಗಳನ್ನು ಅಪರಾಧ ಎಂದು ಹೇಳಿದ್ದರೂ ಮತ್ತೆ ಅಲ್ವಾರ್​ನಲ್ಲಿ ಪುನರಾವರ್ತನೆಯಾಗಿದೆ. ಈ ದೊಂಬಿ ಹತ್ಯೆಯ ಬಗ್ಗೆ ಅಷ್ಟೇ ಅಲ್ಲದೆ ಮುಂದೆ ಆಗದಂತೆ ಹೇಗೆ ತಡೆಗಟ್ಟುವಿರಿ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close