About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಇಹಲೋಕ ತ್ಯಜಿಸಿದ ಜಗದಾತ್ಮಾನಂದಜಿ

ಮೈಸೂರು: ‘ಬದುಕಲು ಕಲಿಯಿರಿ’ ಖ್ಯಾತಿಯ ಜಗದಾತ್ಮಾನಂದಜಿ ಮೃತಪಟ್ಟಿದ್ದಾರೆ. ಜಿಲ್ಲೆಯ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿಯಾಗಿದ್ದ ಜಗದಾತ್ಮನಂದ ಜೀ ಇಂದು ಸಂಜೆ ಮೈಸೂರಿನಲ್ಲಿ ನಿಧನರಾಗಿದ್ದಾರೆ.

ಜಗದಾತ್ಮಾನಂದ ಜೀ ಅವರಿಗೆ 90 ವರ್ಷ ವಾಗಿತ್ತು. ಇವರು 9 ಭಾಷೆಗಳಿಗೆ ಭಾಷಾಂತರವಾಗಿರುವ ‘ಬದುಕಲು ಕಲಿಯಿರಿ’ ಕೃತಿ ರಚಿಸಿ ಖ್ಯಾತರಾಗಿದ್ದರು. ಈ ಕೃತಿಯ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ.

ರಾಮಕೃಷ್ಣಾಶ್ರಮದ ಸ್ವಾಮಿ ಜಗದಾತ್ಮಾನಂದ ಅವರು ಬರೆದ ‘ಬದುಕಲು ಕಲಿಯಿರಿ ಎಂಬ ಪುಸ್ತಕ ಕನ್ನಡ ಪ್ರಕಾಶನದಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿದೆ. ಮೊದಲನೆಯ ಭಾಗ 1981ರಲ್ಲಿ ಪ್ರಕಟವಾಗಿದ್ದು, ಹದಿಮೂರನೆಯ ಮುದ್ರಣ 2003 ರಲ್ಲಿ ಪ್ರಕಟವಾಯ್ತು. ಈ ವೇಳೆ, ಒಟ್ಟು 85 ಸಾವಿರ ಪ್ರತಿಗಳು ಮಾರಾಟವಾದವು. ಇದರ ಎರಡನೆಯ ಭಾಗ 1986ರಲ್ಲಿ ಬೆಳಕಿಗೆ ಬಂತು. ಇದರ ಒಂಭತ್ತನೆಯ ಮುದ್ರಣ 2002 ರಲ್ಲಿ ಪ್ರಕಟವಾಯ್ತು. ಒಟ್ಟು 78,000 ಮಾರಾಟವಾಗಿವೆ.

ಇವುಗಳ ಮೂರು ಪರಿಷ್ಕೃತ ಸಂಯುಕ್ತ ಆವೃತ್ತಿಗಳು ಪ್ರಕಟವಾಗಿವೆ. ಮತ್ತೆ 20,000 ಪ್ರತಿಗಳು ಮಾರಾಟವಾಗಿವೆ. ಕನ್ನಡದ ಮಟ್ಟಿಗೆ ಇದೊಂದು ದಾಖಲೆಯೇ. ಇಲ್ಲಿಯವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ.

Tags

Related Articles

Leave a Reply

Your email address will not be published. Required fields are marked *

Language
Close