ಟಿ20: ಟಾಸ್ ಗೆದ್ದ ಭಾರತ, ಫೀಲ್ಡಿಂಗ್ ಆಯ್ಕೆ

Posted In : ಕ್ರೀಡೆ

ರಾಂಚಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ.

ಬ್ಯಾಟಿಂಗ್ ಆರಂಭಿಸಿದ ಆಸೀಸ್ ಪರ ವಾರ್ನರ್ 8ರನ್ನಿಗೆ ಆಟ ಮುಗಿಸಿದರು. ಫಿಂಚ್ ಮಿಂಚಿನ 42 ರನ್ ಗಳಿಸಿ ಕುಲ್‌ದೀಪ್ ಬೌಲ್ಡ್ ಆದರು. ಮ್ಯಾಕ್ಸ್‌ವೆಲ್ ಕೂಡ ಭಾರತೀಯ ಸ್ಪಿನ್ನರ್ ಎದುರು ಹೆಚ್ಚು ಹೊತ್ತು ತಳವೂರಲಿಲ್ಲ. ಕ್ರೀಸ್‌ ನಲ್ಲಿ ಟ್ರಾವಿಸ್ ಹೆಡ್ (6)ಮತ್ತು ಮೊಯ್ಸಸ್ ಹೆನ್ರಿಕ್ಸ್ (1) ಬ್ಯಾಟಿಂಗ್ ನಡೆಸು ತ್ತಿದ್ದಾರೆ.

ಜಾರ್ಖಂಡ್‌ನ ರಾಂಚಿಯಲ್ಲಿ ಮೊದಲ ಪಂದ್ಯ ಆರಂಭವಾಗಿದ್ದು, ಏಕದಿನ ಸರಣಿಯಲ್ಲಿ 4-1 ಅಂತರದ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಟಿ20 ಯಲ್ಲೂ ಗೆಲುವಿನ ಶುಭಾರಂಭ ಮಾಡುವ ಯತ್ನದಲ್ಲಿದೆ. ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ಕಾರಣ, ಉಪ ನಾಯಕ ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.

ಸ್ಕೋರ್ ವಿವರ: ಆಸ್ಟ್ರೇಲಿಯಾ 78/3
ಫಿಂಚ್ 42, ಹೆಡ್ 7 ಬ್ಯಾಟಿಂಗ್, ಹೆನ್ರಿಕ್ಸ್ 2 ಬ್ಯಾಟಿಂಗ್
ಬೌಲಿಂಗ್ ವಿವರ: ಭುವನೇಶ್ವರ್ ಕುಮಾರ್ 11/1, ಚಾಹಲ್ 19/1, ಕುಲ್‌ದೀಪ್ ಯಾದವ್ 10/1

Leave a Reply

Your email address will not be published. Required fields are marked *

five × 1 =

 
Back To Top