About Us Advertise with us Be a Reporter E-Paper

ಯಾತ್ರಾಯಾತ್ರಾ panel 1

TABO ಎಂಬ ಸಣ್ಣ ಮಾಯಾಜಗತ್ತು..!

ಸುಧೀರ್ ಸಾಗರ್

ಹಿಮಾಚಲ ಪ್ರದೇಶದ ಉತ್ತರಕ್ಕೆ ಟಿಬೆಟ್ ಹಾಗೂ ಚೀನಾ ಗಡಿಗಳಿಗೆ ಅಂಟಿಕೊಂಡಂತಿರುವ, ಅತ್ಯಂತ ಹೆಚ್ಚು ಹಿಮ ಬೀಳುವ ಶೀತ ಮರುಭೂಮಿ ಪ್ರದೇಶ ವಾಗಿದ್ದರೂ ತನ್ನಲ್ಲಿರೋ ಲೆಕ್ಕವಿಲ್ಲದಷ್ಟು ಜಲಪಾತ  ಸರೋವರಗಳು, ಸಹಸ್ರ ವರ್ಷಗಳ ಇತಿಹಾಸ ವಿರೋ ಬೌದ್ಧ ದೇವಾಲಯಗಳು, ವಿಸ್ಮಯಕಾರಿ ಗುಹಾ ಸಮುಚ್ಛಯಗಳು, ವಿರಳ ಸಸ್ಯ ಪ್ರಾಣಿ ಪ್ರಭೇದಗಳು, ಕುತೂಹಲಕಾರಿ ಹಳ್ಳಿಗಳು ಹಾಗೂ ನಯನ ಮನೋಹರ ಪ್ರಕೃತಿ ಸೌಂದರ್ಯದಿಂದಾಗಿ ಇನ್ನಿಲ್ಲದಂತೆ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ರಾಜಧಾನಿ ಶಿಮ್ಲಾದಿಂದ ಕೇವಲ ನೂರಾ ಅರವತ್ತು ಕಿಮೀ ದೂರದಲ್ಲಿರೋ ಅವಳಿ ಕಣಿವೆ ಪ್ರದೇಶವೇ ಲಾಹುಲ್-ಸ್ಪಿತೀ ವ್ಯಾಲಿ.

ಸಮುದ್ರ ಮಟ್ಟದಿಂದ ಸುಮಾರು ಹತ್ತು ಸಾವಿರ ದಿಂದ ಹದಿನೈದು ಸಾವಿರ ಅಡಿಗಳ ಎತ್ತರದವರೆಗೂ ಹಬ್ಬಿರುವ,  ಮೂವತ್ತೈದು ಸಾವಿರ ಜನಸಂಖ್ಯೆ ಯನ್ನು ಹೊಂದಿರುವ ಲಾಹುಲ್-ಸ್ಪಿತಿ ವ್ಯಾಲಿ ಒಂದು ಕಾಲದಲ್ಲಿ ಸಮುದ್ರ ಪ್ರದೇಶವಾಗಿತ್ತು ಎಂದರೆ ನಂಬಲೇ ಬೇಕು. ಮಿಲಿಯನ್ ವರ್ಷಗಳ ಪ್ರಾಕೃತಿಕ ಸ್ಥಾನ ಪಲ್ಲಟ ಗಳಿಂದಾಗಿ ಸಾಗರವೊಂದು ಪರ್ವತ ಪ್ರದೇಶವಾಗಿ ಮಾರ್ಪಾಡು ಹೊಂದಿದ್ದರೂ, ಮೈಲಿ ಗಟ್ಟಲೆ ಹರಡಿಕೊಂಡಿರೋ ಮರಳು ದಿಬ್ಬಗಳು ಹಾಗೂ ಅಲ್ಲಲ್ಲಿ ಕಂಡುಬರುವ ಸಮುದ್ರದಾಳದ ಪಳಯುಳಿಕೆ ಗಳು ಮೂಕಸಾಕ್ಷಿಗಳಾಗಿ ಉಳಿದುಕೊಂಡಿವೆ. ಹಿಮಾಲ ಯದ ತಪ್ಪಲುಗಳಲ್ಲಿಯೇ ಅತ್ಯಂತ ದುರ್ಗ ಮವೂ, ರೋಮಾಂಚನಕಾರಿಯೂ ಆದ ಪ್ರಯಾಣ ವೊಂದರ ಅನುಭವ  ಇಂತಹದ್ದೊಂದು ಅದ್ಭುತ ಪ್ರದೇಶವೊಂದರ ಸಣ್ಣದೊಂದು ಪಕ್ಷಿನೋಟ.

ಟಾಬೋ

ಹಿಮಾಚಲ ಪ್ರದೇಶದ ಲಾಹುಲ್-ಸ್ಪಿತಿ ವ್ಯಾಲಿ ಯಲ್ಲಿರೋ ಕಾಜಾ ಪಟ್ಟಣದಿಂದ ರೇಕಾಂಗ್ ತಲುಪೋ ಹಾದಿಯಲ್ಲಿ 46ಕಿಮೀ ಸಾಗಿದರೆ ಎದು ರಾಗೋ ಸ್ಪಿತಿ ನದಿಗೆ ಅಡ್ಡಲಾಗಿ ಹಾಕಲಾಗಿರೋ ಸೇತುವೆಯನ್ನು ದಾಟುತ್ತಿದ್ದಂತೆಯೇ ಬೋಗುಣಿ ಯಾಕಾರದಲ್ಲಿರುವ ಪುಟ್ಟ ಹಳ್ಳಿ ಟಾಬೋ ನಿಮ್ಮನ್ನು ಸ್ವಾಗತಿಸುತ್ತದೆ. ವಿಪರೀತ ಹಿಮಪಾತದಿಂದ ಶೀತಲ ವಾತಾವರಣ ಹೊಂದಿರೋ ಟಾಬೋ, ಕೇವಲ ನಾಲ್ಕು ತಿಂಗಳುಗಳ ಕಾಲವಷ್ಟೇ ಜಗತ್ತಿಗೆ ತೆರೆದುಕೊಳ್ಳುತ್ತದೆ. ಉಳಿದಂತೆ ಎಂಟು ತಿಂಗಳು  ರಸ್ತೆ ಸಂಪರ್ಕ ವನ್ನು ಕಡಿದುಕೊಂಡು ಸಂಪೂರ್ಣ ಹಿಮದ ಹೊದಿಕೆ ಹೊದ್ದು ಮಲಗಿ ಬಿಟ್ಟಿರುತ್ತದೆ ತನ್ನದೇ ಲೋಕದಲ್ಲಿ.

ಮೊನಾಸ್ಟರಿ

ಕ್ರಿಸ್ತಶಕ 996ರಲ್ಲಿ ಬೌದ್ಧರ ಮಹಾಗುರು, ಸಂಸ್ಕೃತ ದಲ್ಲಿದ್ದ ಅಷ್ಟೂ ಬೌದ್ಧ  ಗ್ರಂಥಗಳನ್ನು ಟಿಬೆಟಿಯನ್ ಭಾಷೆಗೆ ಅನುವಾದಿಸಿದ ಮಹಾಜ್ಞಾನಿ ರಿಂಚೆನ್ ಝಾಂಪೋ ನಿರ್ಮಿಸಿದ ಟಾಬೊ ಮೊನಾಸ್ಟರಿ, ಗೋಲ್ಡನ್ ಟೆಂಪಲ್, ಮಹಾಕಾಳ ವಜ್ರ ಭೈರವ, ಮೈತ್ರೇಯ, ವೈರೋಕಾ, ಬ್ರಹ್ಸೋಲಾ ಖಾಂಗ್ ಸೇರಿದಂತೆ ಒಟ್ಟು ಒಂಬತ್ತು ದೇವಸ್ಥಾನಗಳು ಹಾಗೂ 23 ಸ್ಥೂಪಗಳನ್ನು ಹೊಂದಿದೆ.  ಭಿಕ್ಷುಗಳ ಪ್ರಾರ್ಥನಾ ಕೊಠಡಿಗಳು, ಸಭಾ ಗೃಹಗಳು, ವಸತಿ ಸಮುಚ್ಚಯ ಹಾಗೂ ಮಹಿಳಾ ಭಿಕ್ಷುಗಳಿಗಾಗಿ ಪ್ರತ್ಯೇಕ ವಾಸಗೃಹಗಳನ್ನು ಒಳಗೊಂಡಿದೆ. ದೇವಸ್ಥಾನ ಗಳ ಗೋಡೆಯ ತುಂಬಾ ಬೋಧಿಸತ್ತ್ವದ ಚಿತ್ತಾರಗಳು ಹಾಗೂ ತಾರಾ ಮತ್ತು ಮೈತ್ರೇಯ ಬುದ್ಧನ ಉಬ್ಬು ಚಿತ್ರಗಳನ್ನು ಚಿತ್ರಿಸಲಾಗಿದ್ದು ಅಸೆಂಬ್ಲಿ ಹಾಲಿನಲ್ಲಿ ಆದಿ ಬುದ್ಧನ ಐವರು ಮಕ್ಕಳಲ್ಲೊಬ್ಬನಾದ ವೈರೋಕಾನನ ಯಶೋಗಾಥೆಗಳು ಸೇರಿದಂತೆ ಆತನ ಪ್ರತಿಮೆ ಯನ್ನೂ ರಚಿಸಲಾಗಿದೆ. ದೇವಸ್ಥಾನಗಳ ಒಳಬದಿಯ ಓಣಿ ಹಾದಿಯ ಇಕ್ಕೆಲಗಳ ತುಂಬೆಲ್ಲಾ ಬುದ್ಧನ ಪ್ರತಿಮೆಗಳು ಹಾಗೂ  ಜೀವನ ಚರಿತ್ರೆಯ ಹಲವು ಮಜಲುಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಮ ಯವಾಗಿ ಚಿತ್ರಿಸಲಾಗಿದೆ. ಇವುಗಳ ವಿಶೇಷವೆಂದರೆ ಈ ಚಿತ್ರಗಳು ಸಾವಿರ ವರ್ಷಗಳಾದರೂ ಒಂಚೂರೂ ತನ್ನ ಬಣ್ಣ ಕಳೆದುಕೊಳ್ಳದಂತಿರೋದು. 1975ರ ಭೀಕರ ಭೂಕಂಪದ ನಂತರದಲ್ಲಿ ಕೆಲವೊಂದು ಕಟ್ಟಡಗಳು ನೆಲಸಮವಾಗಿ ಪುನರ್‌ನಿರ್ಮಾಣ ಮಾಡ ಲಾಗಿದೆ. ಇಲ್ಲಿನ ಸ್ಥೂಪಗಳು ಹಾಗೂ ದೇವಸ್ಥಾನಗಳು ವರ್ಷದ ಎಂಟು ತಿಂಗಳು ಸಂಪೂರ್ಣ ಹಿಮದಿಂದಾ ವೃತ ವಾಗಿದ್ದರೂ ಕೊಂಚವೂ ಹಾಳಾಗಿಲ್ಲ.

ಸಾಮಾನ್ಯವಾಗಿ ಮೊನಾಸ್ಟರಿಗಳು ಪರ್ವತಗಳ ತುದಿ ಯಲ್ಲಿಯೇ ನಿರ್ಮಿಸಲಾಗುತ್ತದೆ ಆದರೆ  ಮಾತ್ರ ಅದಕ್ಕೆ ವ್ಯತಿರಿಕ್ತವಾಗಿ ತಪ್ಪಲಿನಲ್ಲಿ ನಿರ್ಮಿಸ ಲಾಗಿದೆ. ಅಷ್ಟೂ ದೇವಸ್ಥಾನ ಹಾಗೂ ಸ್ಥೂಪಗಳನ್ನು ಯಾವುದೇ ಕಲ್ಲುಗಳ ಸಹಾಯವಿಲ್ಲದೆ ಕೇವಲ ಮಣ್ಣಿನಿಂದಲೇ ನಿರ್ಮಿಸಲಾಗಿದೆ. ಮಾನೆಸ್ಟರಿಯ ಸುತ್ತಲೂ ಬೃಹತ್ ತಡೆಗೋಡೆಯ ನಿರ್ಮಾಣವಾಗಿ ರೋದನ್ನು ಕೇವಲ ಇಲ್ಲಿ ಮಾತ್ರಾ ನೋಡಬಹುದು. ಅತೀ ಪ್ರಾಚೀನ ಮನುಸ್ಕ್ರಿಪ್‌ಟ್ಗಳು,ಥಂಕಾಗಳು ಹಾಗೂ ವಿಶೇಷ ತಂತ್ರಜ್ಞಾನ ಬಳಸಿ ರಚಿಸಲಾಗಿರೋ ಉಬ್ಬು ಚಿತ್ರ ಗಳನ್ನು ಇಲ್ಲಷ್ಟೇ ನೋಡಬಹುದಾಗಿದೆ.

 ಗುಹೆಗಳು

ಟಾಬೋ ಹಳ್ಳಿಯ ಸುತ್ತಲೂ ಆವರಿಸಿಕೊಂಡಿರುವ ಪರ್ವತ ಶ್ರೇಣಿಗಳ ತುಂಬೆಲ್ಲಾ, ಒಂದು  ಪ್ರಾಣಿಗಳು ತಮ್ಮ ವಾಸಕ್ಕಾಗಿ ಕೊರೆದಿರುವ ರಂಧ್ರ ಗಳಂತೆ ಭಾಸವಾಗೋ, ಒಳ ನುಸುಳುತ್ತಿದ್ದಂತೆಯೇ ಏಕಾಏಕಿ ಸಾವಿರಾರು ವರ್ಷಗಳ ಹಿಂದಿನ ಆದಿಮಾನ ವನ ಪ್ರಪಂಚದ ಒಳಹೊಕ್ಕಂತೆನಿಸಿ ಬೆರಗು ಮೂಡಿಸೋ ಗುಹೆಗಳ ಸಮುಚ್ಛಯವೇ ಟಾಬೋ ಗುಹೆಗಳು.

ಕೇವಲ ಹದಿನೈದು ನಿಮಿಷದ ಚಾರಣ ಮಾಡುತ್ತಿ ದ್ದಂತೆಯೇ ಎದುರಾಗೋ, ಕೇವಲ ಒಬ್ಬ ಮನುಷ್ಯ ಮಾತ್ರ ಒಳಹೋಗಬಹುದಾದ ಪುಟ್ಟ ಕಿಂಡಿಯಂತಹ ಗುಹೆಗಳು ಹೊರಗಿನಿಂದ ವಿಲಕ್ಷಣವೆನಿಸಿದರೂ ಒಳಗಿನಿಂದ ಅಷ್ಟೇ ಸುಸಜ್ಜಿತವಾಗಿವೆ. ಒಳ ಗೋಡೆ ಗಳೆಲ್ಲಾ ಗಿಲಾವು ಮಾಡಿದಂತಿದ್ದು ಪ್ರಾರಂಭದಲ್ಲಿ  ಕೊಠಡಿ, ಧ್ಯಾನ ಮಂದಿರಗಳನ್ನು ನಿರ್ಮಿಸ ಲಾಗಿದ್ದು ಒಳ ಭಾಗದಲ್ಲಿ ವಸತಿ ಕೋಣೆಗಳು ಸೇರಿದಂತೆ ಅಡುಗೆ ಗೆಂದೇ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಬೆಂಕಿಯಿಂದೇಳುವ ಹೊಗೆ ಸರಾಗವಾಗಿ ಗುಹೆಯಿಂದ ಹೊರಹೋಗ ಲೆಂದು ಚಿಮಣಿಗಳಂತೆ ಕೊಳವೆಗಳನ್ನು ಕೂಡಾ ಕೊರೆಯಲಾಗಿದೆ. ಕೆಲವೊಂದು ಗುಹೆಗಳು ಈಗಿನ ಡುಪ್ಲೆಕ್ಸ್ ಮನೆಗಳಂತೆ ಮಹಡಿಗಳನ್ನು, ಹಲವಾರು ಪ್ರತ್ಯೇಕ ರೂಮುಗಳನ್ನು ಹೊಂದಿದ್ದು,ಸುಗಮವಾದ ಗಾಳಿ ಸಂಚಾರಕ್ಕೂ ಕೂಡಾ ವ್ಯವಸ್ಥೆಗಳನ್ನು ಹೊಂದಿವೆ. ಸಾವಿರಾರು ವರ್ಷಗಳ ಹಿಂದೆ ಹಿಮದಿಂದ ರಕ್ಷಿಸಿ ಕೊಳ್ಳಲು, ಚಳಿಗಾಲದ  ತಮ್ಮ ಉಳಿದು ಕೊಳ್ಳುವಿಕೆ ಹಾಗೂ ಧ್ಯಾನಗಳಿಗೆ ಬೌದ್ಧಭಿಕ್ಷುಗಳು ಬಳಸಿ ಕೊಳ್ಳುತ್ತಿದ್ದ ಮಾನವ ನಿರ್ಮಿತ ಗುಹೆಗಳಿವು. ಕಲ್ಲುಗಳ ಮೇಲೆಲ್ಲಾ ಮನುಷ್ಯ,ಜಿಂಕೆ,ದನ ಸೇರಿದಂತೆ ಆಯುಧ ಗಳ ಆಕೃತಿಗಳನ್ನು ಕೆತ್ತಲಾಗಿರುವುದನ್ನೂ ಕೂಡಾ ಕಾಣ ಬಹುದಾಗಿದ್ದು,ಇವು ಇಲ್ಲಿ ಕೇವಲ ಬೌದ್ಧ ಭಿಕ್ಷುಗಳಷ್ಟೇ ಅಲ್ಲ ಅವರಿಗೂ ಮುನ್ನ ಇಲ್ಲಿ ನಾಗರೀಕತೆಯೊಂದು ಬಾಳಿ ಬದುಕಿತ್ತು ಎಂಬುದಕ್ಕೆ ಸಾಕ್ಷಿಯಂತಿವೆ. ಕೆಲ ವೊಂದು ಗುಹೆಗಳಿಗೆ ಬಾಗಿಲುಗಳನ್ನು ನಿರ್ಮಿಸಿ ಸಂರಕ್ಷಿ ಸಲಾಗಿದ್ದರೂ ಇನ್ನುಳಿದಂತೆ ಹಲವಾರು ಗುಹೆಗಳು ಯಾವುದೇ ಸೂಕ್ತ ರಕ್ಷಣಾ ಕ್ರಮಗಳಿಲ್ಲದೆ  ಅಂಚಿನಲ್ಲಿವೆ.

ಪ್ರಸ್ತುತ ಈಗಲೂ ಕೂಡಾ ಭಿಕ್ಷುಗಳು ತಮ್ಮ ಧ್ಯಾನ ಸಾಧನೆಗಾಗಿ ಈ ಗುಹೆಗಳನ್ನೇ ಬಳಸಿ ಕೊಳ್ಳುತ್ತಿದ್ದು, ಗುಹೆಯ ಮೇಲ್ಭಾಗದಲ್ಲಿ ಧ್ವಜ ನೆಡಲಾ ಗಿದ್ದರೆ ಒಳಗೆ ಯಾರೋ ಧ್ಯಾನದಲ್ಲಿದ್ದಾರೆ ಒಳಗೆ ಪ್ರವೇಶಿಸುವಂತಿಲ್ಲ ಎಂದರ್ಥ. ಇದೊಂತರಾ ನಮ್ಮಲ್ಲಿನ ಈಟ ್ಞಟಠಿ ಜಿಠ್ಠ್ಟಿಚಿ ಬೋರ್ಡು ನೇತಾಕಿದಂತೆ.

ಹೋಟೆಲ್‌ಗಳು ಹಾಗೂ ವಸತಿಗೃಹ ಗಳು ಬೆರಳೆಣಿಕೆಯಷ್ಟಿದ್ದರೂ ಅಂತಹ ಜನಜಂಗುಳಿಯಿರದ ಕಾರಣ ತಂಗಲು ಸಮಸ್ಯೆಯೇನೂ ಉಂಟಾಗುವುದಿಲ್ಲ ಅದೂ ಅಲ್ಲದೆ ಟಾಬೋ ಮೊನಾಸ್ಟರಿ  ಹಾಗೂ ರಾಜ್ಯ ಸರ್ಕಾರದ ವತಿಯಿಂದ  ವಸತಿಗೃಹಗಳು ಲಭ್ಯವಿರೋ ಕಾರಣ ಅಲ್ಲಿಯು ಕೂಡಾ ಉಳಿದು ಕೊಳ್ಳಬಹುದಾಗಿದೆ.

ಸಮೀಪದ ವಿಮಾನ ನಿಲ್ದಾಣ :- ಕುಲ್ಲು ಮನಾಲಿ ವಿಮಾನ ನಿಲ್ದಾಣ.

ಸಮೀಪದ ಬಸ್ ನಿಲ್ದಾಣ :- ಕಾಜಾ.

ವೀಕ್ಷಣೆಗೆ ಸೂಕ್ತ ಕಾಲ:-ಜೂನ್ ನಿಂದ ಸೆಪ್ಟೆಂಬರ್.

Tags

Related Articles

Leave a Reply

Your email address will not be published. Required fields are marked *

Language
Close