About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

‘ತಮಸೋಮಾ ಜ್ಯೋತಿರ್ಗಮಯಾ’ ಎಂದು ರಾಹುಲ್ ಟ್ವೀಟ್

ದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಚೀನಾ ಮಾರ್ಗವಾಗಿ ಕೈಗೊಳ್ಳುತ್ತಿರುವುದಕ್ಕೆ ಬಿಜೆಪಿ ಟೀಕಿಸಿದೆ. ಇದಕ್ಕೆ ಪ್ರತಿಯಾಗಿ  ನೇಪಾಲ ರಾಜಧಾನಿ ಕಾಠ್ಮಂಡು ತಲುಪಿರುವ ರಾಹುಲ್, ‘ತಮಸೋಮಾ ಜ್ಯೋತಿರ್ಗಮಯಾ’ ಎಂಬ ಶ್ಲೋಕವನ್ನು ಬರೆದು ಟ್ವೀಟ್ ಮಾಡಿದ್ದಾರೆ.

ರಾಹುಲ್‌ ಗಾಂಧಿ ಅವರು ತಮ್ಮ ಟ್ವೀಟ್‍ನಲ್ಲಿ ಶಿವನ ಪವಿತ್ರ ದಿವ್ಯ ಸನ್ನಿಧಿಯ ತಾಣವಾಗಿರುವ ಕೈಲಾಸ ಪರ್ವತದ ಚಿತ್ರವನ್ನು ಕೂಡ ಹಾಕಿದ್ದಾರೆ. ಜತೆಗೆ ಸಂಸ್ಕೃತದ ಪ್ರಸಿದ್ಧ  ‘ಅಸತೋಮಾ ಸದ್ಗಮಯಾ’ ಎಂಬ ಪ್ರಾರ್ಥನಾ ಶ್ಲೋಕವನ್ನು ಬರೆದಿದ್ದಾರೆ. ಇದು ಅಸತ್ಯದಿಂದ ಸತ್ಯದೆಡೆಗೆ ನಮ್ಮನ್ನು ನಡೆಸೆಂದು ದೇವರಲ್ಲಿ ಮಾಡುವ ಪ್ರಾರ್ಥನೆ ಇದಾಗಿದೆ.

ರಾಹುಲ್‌ ಗಾಂಧಿ ನೇಪಾಲದ ಕಾಠ್ಮಂಡುವಿನಿಂದ ವಿಮಾನದಲ್ಲಿ ನೇಪಾಲ್‌ಗ‌ಂಜ್‌ಗೆ ಪ್ರಯಾಣಿಸಿ ಅಲ್ಲಿಂದ ಟಿಬೆಟ್‌ ಗಡಿ ಸಮೀಪದಲ್ಲಿರುವ ಹಮ್ಲಾ ತಾಣಕ್ಕೆ ವಾಯುಮಾರ್ಗವಾಗಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಚೀನ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿರುವ ರಾಹುಲ್‌ ಗಾಂಧಿ ಅವರಿಗೆ, ‘ಚೈನೀಸ್‌ ಮ್ಯಾನ್‌ ಆಗಿದ್ದಾರೆ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಶುಕ್ರವಾರ ಟೀಕಿಸಿದ್ದರು. ಅಲ್ಲದೆ ‘ನೀವು ಚೈನೀಸ್‌ ಗಾಂಧಿಯೋ..? ರಾಹುಲ್‌ ಗಾಂಧಿಯೋ..?’ ಎಂದು ಪ್ರಶ್ನಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close