ವಿಶ್ವವಾಣಿ

‘ತಾರಕಾಸುರ’ನ ಹಾಡಿಗೆ ಬಿಗ್ ರೆಸ್ಪಾನ್ಸ್‌

ನಟ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಡಿರುವ ಹೊಸದೊಂದು ಹಾಡು ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಹೌದು, ನವ ಪ್ರತಿಭೆ ವೈಭವ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ತಾರಕಾಸುರ’ ಚಿತ್ರಕ್ಕೆೆ ಇತ್ತೀಚೆಗೆ ಶಿವರಾಜ್‍ಕುಮಾರ್ ಒಂದು ಸಾಂಗ್ ಹಾಡಿದ್ದಾರೆ. ಚಿತ್ರದಲ್ಲಿ ನಾಯಕನನ್ನು ಪರಿಚಯಿಸಲು ಬರುವ ‘ಕನ್ನಡ ಕಲಿಯೋ.., ಕಲಿಯೋ ಮುಂಡೇದೆ..’ ಎಂಬ ಹಾಡಿಗೆ ಶಿವಣ್ಣ ಧ್ವನಿಯಾಗಿದ್ದು, ಈ ಹಾಡು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೈರಲ್ ಆಗಿರುವ ಈ ಹಾಡು ಎಲ್ಲರ ನಾಲಿಗೆ ತುದಿಯಲ್ಲಿ ನಲಿದಾಡುತ್ತಿದೆ. ಸದ್ಯಕ್ಕೆೆ ಕನ್ನಡ ಭಾಷೆ ಮತ್ತು ಅದನ್ನು ಆಡದವರ ಕುರಿತಾಗಿರುವ ಈ ಹಾಡು ಕೇಳುಗರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ.

ಇನ್ನು ‘ತಾರಕಾಸುರ’ ಚಿತ್ರದ ಹಾಡುಗಳಿಗೆ ಧರ್ಮವಿಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆೆ ಕುಮಾರ್ ಗೌಡ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಜಾಲಿ ಬಾಸ್ಟಿನ್, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ವೈಭವ್ ಅವರಿಗೆ ನಾಯಕಿಯಾಗಿ ಮಾನ್ವಿತಾ ಹರೀಶ್ ಜೋಡಿಯಾಗಿದ್ದಾರೆ. ಹಾಲಿವುಡ್ ನಟ ಡ್ಯಾನಿ ಸಫಾನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೈಜಗದೀಶ್, ಎಂ.ಕೆ.ಮಠ, ಕರಿಸುಬ್ಬು, ಸಾಧುಕೋಕಿಲ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಿಂದೆ ‘ರಥಾವರ’ ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರಕ್ಕೆೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.

‘ಓಂ ಬಾಲಾಜಿ ಎಂಟರ್ ಪ್ರೈಸಸ್’ ಲಾಂಛನದಲ್ಲಿ ಎನ್.ನರಸಿಂಹಲು ಅವರು ನಿರ್ಮಿಸಿರುವ ‘ತಾರಾಕಾಸುರ‘ ಚಿತ್ರದ ಮೊದಲ ಹಾಡನ್ನು ಇತ್ತೀಚೆಗೆ ರೆಬಲ್‌ಸ್ಟಾರ್ ಅಂಬರೀಶ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ದಣ್ಣ ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

ಇತ್ತೀಚೆಗೆ ಹಾಲಿವುಡ್ ನಟ, ಸಿಂಗಂ-2 ಚಿತ್ರದ ಖಳನಾಯಕ ಡ್ಯಾನಿ ಸಫಾನಿ ಕೂಡ ಈ ಹಾಡು ಹೇಳಿ ಫುಲ್ ಫೇಮಸ್ ಆಗಿದ್ದರು. ಟಗರು ಬೆಡಗಿ ಮಾನ್ವಿತಾ ಹರೀಶ್ ಕೂಡ, ಶಿವಣ್ಣನ ಕಂಠಕ್ಕೆೆ ಫುಲ್ ಫಿದಾ ಆಗಿದ್ದಾರೆ. ಈ ಸಾಂಗ್ ಅನ್ನು ನೋಡಿ, ಶೇರ್ ಮಾಡಿ ಎಂದು ಅಭಿಮಾನಿಗಳಲ್ಲಿ ಅವರು ಕೇಳಿಕೊಂಡಿದ್ದಾರೆ.