About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಶೀರೂರು ಶ್ರೀ ಆಪ್ತರೇ ಟಾರ್ಗೆಟ್!

ಶೀರೂರು ಶ್ರೀಗಳ ಆಪ್ತರೊಬ್ಬರೊಬ್ಬರ ಆರೋಪ

ಉಡುಪಿ: ಶೀರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಸಾಯುವ ಮುನ್ನವೇ ಪಟ್ಟದ ದೇವರ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಕೃಷ್ಣ ಮಠ, ಅಷ್ಟ ಮಠಗಳ ಯತಿಗಳ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಈವರೆಗೆ ಈ ವಿಚಾರಕ್ಕೆ ಸಂಬಂಧಿಸಿ ಪೊಲೀಸರು ಯಾವುದೇ ಹೇಳಿಕೆ ಪಡೆದಿಲ್ಲ ಎನ್ನುವ ಸಂಗತಿಯನ್ನು ಶೀರೂರು ಶ್ರೀಗಳ ಆಪ್ತರೊಬ್ಬರೊಬ್ಬರು ಹೇಳಿದ್ದಾರೆ.

ಎಸ್ಪಿಗೆ ದೂರು ಕೊಟ್ಟಿದ್ದ ಶ್ರೀ: ಶೀರೂರು ಶ್ರೀಗಳು ತನ್ನ ಪಟ್ಟದ ದೇವರ ವಿಚಾರಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಪಟ್ಟದ ದೇವರನ್ನು ಮರಳಿ ಕೊಡಿಸುವಂತೆ ಎಸ್ಪಿಯಲ್ಲಿ ಮನವಿ ಮಾಡಿದ್ದರು. ನನ್ನ ಪಟ್ಟದ ದೇವರು ನನಗೆ ಸಿಗುವವರೆಗೆ ನಾನು ಉಪವಾಸ ಕೂರುತ್ತೇನೆ ಎಂದಿದ್ದರು. ಅಲ್ಲದೆ, ದೇವರ ಪ್ರಸಾದ ಸ್ವೀಕರಿಸದೇ ಮುಂದೆ ಅನಾಹುತ ನಡೆದರೆ ಅದಕ್ಕೆ ಮಠಾಧೀಶರೇ ಜವಾಬ್ದಾರರೆಂದು ಈ ಮೂಲಕ ತಿಳಿಸುತ್ತಿದ್ದೇನೆ. ನನ್ನ ಪಟ್ಟದ ದೇವರನ್ನು ಆದಷ್ಟು ಬೇಗ ನಮಗೆ ನೀಡಲು ತಾವು ಸಹಕರಿಸುತ್ತೀರಾ ನಂಬಿದ್ದೇನೆ ಎಂದು ಶೀರೂರು ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ.

ಶ್ರೀಗಳು ಜೂ. 24ಕ್ಕೆ ನೀಡಿದ ದೂರು ಜೂ. 25ಕ್ಕೆ ಸ್ವೀಕೃತವಾಗಿದೆ ಎಂದು ತಿಳಿದುಬಂದಿದೆ. ಇಷ್ಟೆಲ್ಲ ವಿದ್ಯಮಾನಗಳು ನಡೆದಿದ್ದರೂ ಇದುವರೆಗೆ ಉಳಿದವರ ಬಗ್ಗೆ ಯಾವುದೇ ತನಿಖೆಯಾಗಿಲ್ಲ. ಕೇವಲ ಶ್ರೀಗಳ ಆಪ್ತರಾಗಿದ್ದ ಮಹಿಳೆ ಹಾಗೂ ಉಳಿದವರನ್ನೇ ವಿಚಾರಣೆ ನಡೆಸುವುದು ಎಷ್ಟು ಸರಿ. ಇಷ್ಟೆಲ್ಲಾ ಗೊಂದಲವಿದ್ದರೂ ಪೊಲೀಸರು ಯಾಕೆ ಪ್ರಕರಣದ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ಶೀರೂರು ಶ್ರೀಗಳ ಆಪ್ತರೊಬ್ಬರು ಪ್ರಶ್ನಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close