ವಿಶ್ವವಾಣಿ

ರುಚಿಕರವಾದ ಕೋಳಿ ಸುಕ್ಕ ರೆಸಿಪಿ

ಚಿಕನ್ ಪ್ರಿಯರಿಗೆ ಇಲ್ಲಿದೆ ನೋಡಿ ಸರಳವಾಗಿ ಚಿಕನ್ ಸುಕ್ಕ ರೆಸಿಪಿ ಮಾಡುವ ವಿಧಾನ:

ಬೇಕಾಗಿರುವ ಸಾಮಾಗ್ರಿಗಳು:

ಕೋಳಿ –                      1 ಕೆ.ಜಿ

ಈರುಳ್ಳಿ –                     3

ಟೊಮೆಟೊ –                2

ಒಣ ಮೆಣಸಿನ ಕಾಯಿ – 15 ರಿಂದ 20

ಶುಂಠಿ – ಬೆಳ್ಳುಳ್ಳಿ ಪೇಸ್ಟ್- 1 ಟೀ ಚಮಚ

ಬೆಳ್ಳುಳ್ಳಿ                       – 5 ಎಸಳು

ಮೆಂತ್ಯ                        – 1/4 ಟೀ ಚಮಚ

ಧನಿಯಾ ಬೀಜ –             2 ಟೇಬಲ್ ಚಮಚ

ಲವಂಗ –                       4

ಚೆಕ್ಕೆ-                            1 ಇಂಚು

ಜೀರಿಗೆ-                          1/2 ಟೀ ಚಮಚ

ತೆಂಗಿನಕಾಯಿ-                1/2

ಎಣ್ಣೆ –                            2 ಟೇಬಲ್ ಸ್ಪೂನ್

ಅರಶಿನ ಪುಡಿ-                 1 ಟೀ ಚಮಚ

ಕೊತ್ತಂಬರಿ ಸೊಪ್ಪು

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಒಂದು ಬಾಣಲೆಯನ್ನು ಬಿಸಿಗಿಟ್ಟು ಮಂದವಾದ ಉರಿಯಲ್ಲಿ ಚಕ್ಕೆ, ಲವಂಗ, ಒಣಮೆಣಸು, ಧನಿಯಾಬೀಜ, ಜೀರಿಗೆ, ಮೆಂತ್ಯವನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ. ಇವು ಆರಿದ ಬಳಿಕ ಮಿಕ್ಸಿ ಜಾರಿಗೆ ಹಾಕಿ. ಜತೆಗೆ ಸ್ವಲ್ಪ ಶುಂಠಿ ಐದು ಬೆಳ್ಳುಳ್ಳಿ ಎಸಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

ಬಳಿಕ ದಪ್ಪ ತಳದ ಪಾತ್ರೆಯನ್ನು ಬಿಸಿಗಿಟ್ಟು, ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಬಳಿಕ ಹೆಚ್ಚಿದ ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ಶುಚಿ ಮಾಡಿದ ಕೋಳಿಯನ್ನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು, ಅರಶಿನ ಹುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬೇಯಲು ಬಿಡಿ. ಬೇಕಿದ್ದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಕೋಳಿ ಸಂಪೂರ್ಣ ಬೆಂದಾದ ಬಳಿಕ ರುಬ್ಬಿರುವ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ. 10-15 ನಿಮಿಷದ ಬಳಿಕ ತುರಿದ ತೆಂಗಿನಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ. ಈಗ ರುಚಿಕರವಾದ ಚಿಕನ್ ಸುಕ್ಕ ಖಾದ್ಯ ಸವಿಯಲು ಸಿದ್ಧ.