ವಿಶ್ವವಾಣಿ

ರುಚಿಕರವಾದ ತವಾ ಮೀನು ಫ್ರೈ ರೆಸಿಪಿ

ರುಚಿಕರವಾದ ಬಂಗುಡೆ ಮೀನು ತವಾ ಫ್ರೈ ಸರಳವಾಗಿ ಮಾಡುವ ವಿಧಾನ ಇಲ್ಲಿದೆ ನೋಡಿ…

ಬೇಕಾಗುವ ಸಾಮಾಗ್ರಿಗಳು:

ಬಂಗುಡೆ ಮೀನು       – 1/2 ಕೆ.ಜಿ

ಅಚ್ಚಖಾರದ ಪುಡಿ    – 2 ಟೇಬಲ್ ಚಮಚ

ಧನಿಯಾ ಪುಡಿ          – 1/4 ಟೀ ಚಮಚ

ಹುಣಸೆಹಣ್ಣು ಪೇಸ್ಟ್  – 3 ಟೀ ಚಮಚ

ಶುಂಠಿ-ಬೆಳ್ಳುಳ್ಳಿ ಪೇಸ್ಟ್   – 1/4 ಟೀ ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಅಚ್ಚಖಾರದ ಪುಡಿ, ಧನಿಯಾ ಪುಡಿ, ಹುಣಸೆಹಣ್ಣು ಪೇಸ್ಟ್ , ಶುಂಠಿ-ಬೆಳ್ಳುಳ್ಳಿ ಪೇಸ್ಟ್  ಈ ಎಲ್ಲಾ ಮಸಾಲೆಗಳನ್ನ ಸ್ವಲ್ಪ ಉಪ್ಪು ಹಾಕಿ ಮೀನಿನೊಂದಿಗೆ ಮಿಕ್ಸ್ ಮಾಡಿ, 2 ಗಂಟೆ ಹಾಗೆ ಇಡಿ. ಬಳಿಕ ತವಾ ಬಿಸಿ ಮಾಡಿ 2-3 ಚಮಚದಷ್ಟು ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿಟ್ಟು ಮೀನು ಹಾಕಿ. ಒಂದು ಬದಿ ಕಾದ ನಂತರ ಮತ್ತೊಂದು ಬದಿಗೆ ಮೀನನ್ನು ಮಗುಚಿ ಹಾಕಿ. 10 ನಿಮಿಷದವರೆಗೆ ಮೀನನ್ನು ಚೆನ್ನಾಗಿ ಫ್ರೈ ಮಾಡಬೇಕು. ಈಗ ರುಚಿಕರವಾದ ಬಂಗುಡೆ ಮೀನು ತವಾ ಫ್ರೈ ಸವಿಯಲು ಸಿದ್ಧ.