ವಿಶ್ವವಾಣಿ

ಟಾಟಾದ 3ಸುದ್ದಿ 3ಮಜಲು!

ಟಾಟಾದ ಬಗ್ಗೆ ಈ ವಾರ ಮೂರು ಸುದ್ದಿಗಳಿವೆ. ಒಂದು ಹೊಸತರ ಆಗಮನದ ಬಗ್ಗೆ, ಇನ್ನೊಂದು  ಫೇವರಿಟ್ ಕಾರ್‌ನ ಕೊನೆಯ ದಿನಗಳ ಬಗ್ಗೆ ಫಾಲೋ ಅಪ್, ಮತ್ತಿನ್ನೊಂದು ಈ ಕಂಪೆನಿಯ ಸೇಲ್‌ಸ್ ಯಾವ ರೀತಿ ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ ಎನ್ನುವುದು.

ಎರಡು ವಾರಗಳ ಹಿಂದೆ ಇದೇ ಕಾಲಮ್‌ನಲ್ಲಿ ನಾವು ಟಾಟಾದ ಹೊಸ ಎಸ್‌ಯುವಿ ಎಚ್‌ಎಕ್‌ಸ್5 ಬಗ್ಗೆ ನೋಡಿದ್ದೆವು. ಇದೀಗ ಆ ಕಾರ್‌ಗೆ ಹೊಸ ನಾಮಕರಣ ಮಾಡಲಾಗಿದೆ. ಈ ಕಾರನ್ನು ಇಲ್ಲಿಯವರೇಗೂ ಎಚ್‌ಎಕ್‌ಸ್5 ಎನ್ನುವ ಕೋಡ್‌ನೇಮ್‌ನಿಂದಲೇ ಕರೆಯಲಾಗುತ್ತಿತ್ತು. ಇದೀಗ ಟಾಟಾದವರಿಂದ ಬಂದಿರುವ ಹೇಳಿಕೆಯ ಮೂಲಕ ಇದಕ್ಕೆ ಹ್ಯಾರಿಯರ್  ಹೆಸರಿಡಲಾಗಿದೆ ಅಂತ ತಿಳಿದುಬಂದಿದೆ. ಇದು 2019ರ ಮೊದಲ ಕ್ವಾರ್ಟರ್‌ನಲ್ಲಿ ಲಾಂಚ್ ಆಗಲಿದೆ ಅನ್ನುವುದನ್ನೂ ಇದೇ ಹೇಳಿಕೆಯಲ್ಲಿ ಕಂಪೆನಿ ತಿಳಿಸಲಿದೆ.

ನ್ಯಾನೋಗೆ ಟಾಟಾ?

ಒಂದೆಡೆ ಎಲ್ಲಾ ರೀತಿಯಲ್ಲೂ ಕಾರ್ ಸೇಲ್ ದೇಶದಲ್ಲಿ ಏರುಗತಿಯನ್ನು ಕಾಣುತ್ತಿದ್ದರೆ, ಜನರ ಕಾರ್ ಎನ್ನುವ ಹೆಸರಲ್ಲಿ ಹತ್ತು ವರ್ಷಗಳ ಹಿಂದೆ ಲಾಂಚ್ ಆದ ಟಾಟಾ ನ್ಯಾನೋಗೆ ಜನ ನೋ-ನೋ ಅಂದಿದ್ದಾರೆ ಅನ್ನುವ ಕುರಿತು ನಾವು ಈ ಹಿಂದೆ ಇದೇ ಕಾಲಂನಲ್ಲಿ ವಿಸ್ತತವಾಗಿ ಅವಲೋಕನ ಮಾಡಿದ್ದು ನೆನಪಿರಬಹುದು.  ಆ ಸುದ್ದಿಯ ಮುಂದುವರಿದ ಭಾಗದಂತೆ ಟಾಟಾ ನ್ಯಾನೋ ತನ್ನ ಅಂತಿಮ ದಿನಗಳನ್ನು ಕಾಣುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳು ಕಾಣಲಾರಂಭಿಸಿದೆ. ಇನ್ನೂ ಕಂಪೆನಿ ಈ ಕಾರನ್ನು ಅಫೀಶಿಯಲ್ಲಾಗಿ ನಿಲ್ಲಿಸದಿದ್ದರೂ ಜೂನ್ ತಿಂಗಳಲ್ಲಿ ಕಂಪೆನಿ ಕೇವಲ ಒಂದೇ ಒಂದು ಟಾಟಾ ನ್ಯಾನೋವನ್ನು ಉತ್ಪಾದಿಸಿದೆ! ಅದರರ್ಥ ಈ ಕಾರಿನ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿದ್ದ ಹಾಗೆಯೇ ಅನ್ನಬಹುದು. 2017ರ ಜೂನ್‌ನಲ್ಲಿ 275 ನ್ಯಾನೋ ಗಳನ್ನು ತಯಾರಿಸಿದ್ದ ಟಾಟಾ 25 ಕಾರ್‌ಗಳನ್ನು ರಫ್ತು ಮಾಡಿದ್ದು ಈ  ಆ ಎಲ್ಲಾ ಸಂಖ್ಯೆಗಳು ಖಾಲಿಯಾಗಿ ಕೇವಲ ಒಂದು ನ್ಯಾನೋ ಉತ್ಪಾದನೆಯಾಗಿ ರಫ್ತು ಸಂಖ್ಯೆ ಸೊನ್ನೆಗಿಳಿದಿದೆ.

ಟಾಟಾ ಮೋಟಾರ್ಸ್ ತನ್ನ ಹೊಸ ರೂಪದ ಕಾರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಇನ್ನಷ್ಟು ಹೊಸ ಹೊಸ ಕಾರ್‌ಗಳನ್ನೂ ಕೂಡ ಸಾಲಿನಲ್ಲಿ  ನಿಲ್ಲಿಸಿ ಲಾಂಚ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಂತೆಯೇ ಕಳೆದ ವರ್ಷಕ್ಕೆ ಹೋಲಿಸಿದರೆ ಇದೀಗ ಇನ್ನೊಂದು ಸ್ಥಾನ ಮೇಲೆ ಬಂದು ಭಾರತದಲ್ಲೇ ಕಾರ್ ಮಾರಾಟದಲ್ಲಿ ಮಾರುತಿ ಹಾಗೂ ಹ್ಯೂಂಡೈ ನಂತರದ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಟಾಟಾ  ಅನ್ನೋ ಕಾಂಪ್ಯಾಕ್‌ಟ್ ಎಸ್‌ಯುವಿ ಯನ್ನು ರೋಡಿಗಿಳಿಸಿದ ನಂತರ ಉತ್ತಮ ಸೇಲ್‌ಸ್ ಅನ್ನು ಕಾಣತೊಡಗಿರುವ ಟಾಟಾ ಕಳೆದ ಜೂನ್‌ನಲ್ಲಷ್ಟೇ ಹೋಂಡಾವನ್ನು ನಾಲ್ಕನೇ ಸ್ಥಾನದಿಂದ ಕೆಳಗಿಳಿಸಿ ತಾನು ಆ ಸ್ಥಾನವನ್ನಲಂಕರಿಸಿತ್ತು. ಇದೀಗ 2018ರ ಜೂನ್ ವೇಳೆಗೆ ಮಹಿಂದ್ರಾವನ್ನು 3ನೇ ಸ್ಥಾನದಿಂದ ಹಿಂದಿಕ್ಕಿ ತಾನು ಆ ಸ್ಥಾನಕ್ಕೆ ತಲುಪಿರುವುದು ಭಾರಿ ದೊಡ್ಡ ಸಾಧನೆಯೆ.

2017ರ ಜೂನ್‌ಗೆ ಹೋಲಿಸಿದರೆ ಸುಮಾರು 20 ಸಾವಿರದಷ್ಟು ಹೆಚ್ಚು ಕಾರ್‌ಗಳನ್ನು ಟಾಟಾ ಮಾರಾಟ ಮಾಡಿದೆ! ಅಂದರೆ 2017ರ ಜೂನ್‌ನಲ್ಲಿ  36,836 ರಿಂದ 56.773ಕ್ಕೇರಿದೆ ಅದರ ಸೇಲ್‌ಸ್. ಅಂದರೆ ಒಟ್ಟು 54% ಏರಿಕೆ! ಇದು ಖಾಸಗಿ ವಾಹನಗಳ ವಿಚಾರವಾದರೆ, ಕಮರ್ಶಿಯಲ್ ವಾಹನಗಳ ಸೇಲ್‌ಸ್ ಕೂಡ 50 ಶೇಕಡಾದಷ್ಟು ಏರಿಕೆಯಾಗಿದೆ ಅನ್ನುವುದು ಟಾಟಾದಿಂದ ಬಂದಿರುವ ಅಧಿಕೃತ ಮಾಹಿತಿ.

ಒಟ್ಟಿನಲ್ಲಿ ಈ ಮೂರು ಬೇರೆ ಬೇರೆ ರುಚಿಯ ಸುದ್ದಿಗಳು ಟಾಟಾ ಮೋಟರ್ಸ್‌ಗೆ ಒಂದೆಡೆ ಹೊಸತನದ ಭರಪೂರ ಆನಂದ, ಇನ್ನೊಂದೆಡೆ ಹಿಂದೊಮ್ಮೆ ಮಾಡಿದ ತಪ್ಪಿಗೆ ನ್ಯಾನೋ ತಂದೊಡ್ಡಿದ ಆತಂಕ ಹಾಗೂ ಇತ್ತೀಚಿಗಿನ ಹೊಸ ಬೆಳವಣಿಗೆಗಳ  ಕಂಪೆನಿ ಆನಂದಿಸುತ್ತಿರುವ ಗೆಲುವು ಮಿಶ್ರ ಫಲ ನೀಡಿದೆ.