About Us Advertise with us Be a Reporter E-Paper

ಯಾತ್ರಾ

ಟೀ ಮಾರಿ ಪ್ರಪಂಚ ಸುತ್ತಿ ಸುತ್ತಿಬಂದ ಚಾಯ್‌ವಾಲ….!

‘ಪ್ರವಾಸ ಮಾಡಬೇಕು ಆದರೆ ಆಯಾಸ ಆಗುತ್ತಲ್ಲಾ?’ ಎನ್ನುವವರನ್ನು ನೀವು ನೋಡಿರಬಹುದು. ಆದರೆ ಕನಸ್ಸನ್ನು ಎನ್ನುವ ಛಲವಿದ್ದರೆ ಯಾವ ಶಕ್ತಿಯೂ ನಿಮ್ಮನ್ನು ತಡೆಯಲಾಗದು ಎನ್ನುವ ಮಾತು ಎಂದಿಗೂ ಸತ್ಯ. ಅದಕ್ಕೆ ನಿದರ್ಶನ ವಿಜಯನ್.

ಕೇರಳದ ವಿಜಯನ್ ಹುಟ್ಟಿದ್ದು ಬಡ ಕುಟುಂಬವೊಂದರಲ್ಲಿ. ಬಾಲ್ಯದಿಂದಲೇ ತಂದೆಯೊಡನೆ ಕೇರಳ ರಾಜ್ಯದ ದೇವಸ್ಥಾನಗಳನ್ನು ಸುತ್ತುವ ಅಭ್ಯಾಸ ಮಾಡಿಕೊಂಡ ವಿಜಯನ್‌ಗೆ ಪ್ರವಾಸದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತಂತೆ. ಆದರೆ ದುರಾದೃಷ್ಟವಶಾತ್ ತಂದೆಯ ಅಕಾಲಿಕ ಮರಣದಿಂದಾಗಿ ಕುಟುಂಬದ ಸಂಪೂರ್ಣ ಜವಬ್ದಾರಿ ಇವರ ತಲೆ ಮೇಲೇರಿತು. ಟೀ ಸ್ಟಾಲ್ ಒಂದನ್ನು ಮಾಡಿಕೊಂಡು ಜೀವನ ಸಾಗಿಸಲಾರಂಭಿಸಿದರು. ಜತೆ ಸಪ್ತಪದಿ ತುಳಿದು ತನ್ನದೇ ಆದ ಕುಟುಂಬ ಮಾಡಿಕೊಂಡರು.

ಟೀ ಅಂಗಡಿಯ ಬಡ ಮಾಲಿಕನಾದ ವಿಜಯನ್‌ಗೆ ಬಾಲ್ಯದ ಕನಸಾದ ಪ್ರವಾಸ ಕಾಡುತ್ತಲೇ ಇತ್ತು. ತನ್ನ ಕನಸುಗಳಿಗೆ ಮತ್ತೆ ಜೀವ ತುಂಬುವ ನಿಟ್ಟಿನಲ್ಲಿ ಹೆಂಡತಿಯೊಂದಿಗೆ ದೇಶದ ನಾನಾ ಸ್ಥಳಗಳಿಗೆ ಪ್ರವಾಸ ಕೈಗೊಂಡರು. ದೇಶ ಸುತ್ತಿದವರಿಗೆ ಪ್ರವಾಸದ ಹುಚ್ಚು ಹೆಚ್ಚೆನಿಸಿ ಪರ ದೇಶಗಳಿಗೂ ಹಾರಲಾರಂಭಿಸಿದರು. 2015ರವರೆಗೆ ಈ ವೃದ್ಧ ಜೋಡಿ ಹದಿನಾರು ದೇಶಗಳನ್ನು ಸುತ್ತಿ ಬಂದಿದೆ. 40 ವರ್ಷಗಳ ದಾಪಂತ್ಯ ಜೀವನದಲ್ಲಿ ದೊಡ್ಡ ಸಾಧನೆ ಎಂದರೆ ನಮ್ಮ ಪ್ರವಾಸ ಎನ್ನುತ್ತಾರೆ ವೃದ್ಧ ದಂಪತಿಗಳು.

ಹಣವೆಲ್ಲಿಂದ ಬಂತು?
ಒಬ್ಬ ಟೀ ಸ್ಟಾಲ್ ಇಟ್ಟುಕೊಂಡಿರುವ ವೃದ್ಧ ಪ್ರಪಂಚ ಪರ್ಯಟನೆ ಮಾಡುತ್ತಾನೆ ಎಂದರೆ ಅದು ಸಣ್ಣ ವಿಚಾರವಲ್ಲವೇ ಅಲ್ಲ. ದೇಶ ಬಿಟ್ಟು ಪರದೇಶಕ್ಕೆ ಹೋಗಲು ನಮ್ಮ ಮೂರಂಕಿಯ ಹಣ ಸಾಲದು. ಅಂತಹದರಲ್ಲಿ ನಿಮ್ಮಿಂದ ಈ ಪರ್ಯಟನೆ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ, ‘ಪ್ರತಿ ದಿನ ವ್ಯಾಪಾರದಿಂದ ಬಂದ ಹಣದಲ್ಲಿ 300 ರು.ನ್ನು ನನ್ನ ಪ್ರವಾಸಕ್ಕೆಂದೇ ಎತ್ತಿಡುತ್ತೇನೆ. ಮನಸಾರೆ ಅನುಭವಿಸಲೆಂದು ಹೋಗುತ್ತೇನೆ, ಅಲ್ಲಿನ ವೈಢೂರ್ಯ ಅನುಭವಿಸಬೇಕೆಂದಲ್ಲ. ನಿಯಮಿತವಾದ ಖರ್ಚಿನಿಂದ ನನಗೆ ಪ್ರವಾಸ ನನಸಾದ ಕನಸಾಗಿದೆ.’ ಎನ್ನುತ್ತಾರೆ ವಿಜಯನ್.

‘ನನ್ನ ಪತಿಯ ಜತೆ ಮೊದಲ ಬಾರಿಗೆ ಹೊರ ದೇಶಕ್ಕೆ ಹೋಗುವಾಗ ತುಂಬಾ ಉತ್ಸುಕಳಾಗಿದ್ದೆ. ಬಡ ಕುಟುಂಬದಿಂದ ಬಂದ ನನಗೆ ವಿಮಾನವೆನ್ನುವದೇ ಒಂದು ಕನಸ್ಸಾಗಿತ್ತು. ಈಗೀಗ ನನಗೂ ಪ್ರವಾಸವೆನ್ನುವುದು ಒಂದು ಚಟವಾಗಿದೆ. ಇದುವರೆಗೂ ಸುತ್ತಿದ ದೇಶಗಳಲ್ಲಿ ಸ್ವಿಡ್ಜರ್‌ಲ್ಯಾಂಡ್ ನನಗೆ ತುಂಬಾ ಇಷ್ಟವಾಯಿತು’ ಎನ್ನುತ್ತಾರೆ ವಿಜಯನ್ ಅವರ ಧರ್ಮಪತ್ನಿ ಮೋಹನಾ.

Tags

Related Articles

Leave a Reply

Your email address will not be published. Required fields are marked *

Language
Close